ಕಾನಹೊಸಹಳ್ಳಿ ಸಮೀಪದ ಕಾನಾಮಡುಗು ಗ್ರಾಮದಲ್ಲಿ ಶಾಲಾ ಕೊಠಡಿ ನಿರ್ಮಾಣ ಕಾಮಗಾರಿಗೆ ಡಾ.ಎನ್.ಟಿ.ಶ್ರೀನಿವಾಸ್ ಭೂಮಿ ಪೂಜೆ ನೆರವೇರಿದರು. ಕಾನಾಮಡುಗು ದಾಸೋಹ ಮಠದ ಧರ್ಮಧಿಕಾರಿ ದಾ.ಮ.ಐಮುಡಿ ಶರಣಾರ್ಯರು, ಅಲೂರು ಗ್ರಾಪಂ ಅಧ್ಯಕ್ಷೆ ಉಮಾದೇವಿ, ಜಿಪಂ ಮಾಜಿ ಸದಸ್ಯ ಕೆ.ಎಂ.ಶಶಿಧರ, ಜಿ.ಪಿ.ಗುರುಲಿಂಗಪ್ಪ, ಪಿಡಬ್ಲುೃಡಿ ಎಇಇ ನಾಗನಗೌಡ, ತಾಪಂ ಮಾಜಿ ಸದಸ್ಯ ಹುಡೇಂ ಪಾಪನಾಯಕ, ದ್ಯಾಮಣ್ಣ, ಸಿರಿಯಪ್ಪ, ಕಾಕಿ ಬಸಣ್ಣ, ಕುರಿಹಟ್ಟಿ ಬೋಸಣ್ಣ ಇದ್ದರು. 
ಜಿಲ್ಲೆ

ಶಾಲೆ ಕೊಠಡಿಗಳ ನಿರ್ಮಾಣಕ್ಕೆ ಆದ್ಯತೆ

ರುದ್ರಪ್ಪ ವಾಲಿ

ಕಾನಹೊಸಹಳ್ಳಿ: ಕೂಡ್ಲಿಗಿ ತಾಲೂಕು ಶೈಕ್ಷಣಿಕವಾಗಿ ಹಿಂದುಳಿದಿದ್ದು ಪ್ರಗತಿಗೆ ಶ್ರಮಿಸುವೆ ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹೇಳಿದರು. ಕಾನಾಮಡುಗು ಗ್ರಾಮದಲ್ಲಿ ಶಾಲಾ ಕೊಠಡಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಂಗಳವಾರ ಮಾತನಾಡಿದರು. ನಾನು ಶಾಸಕನಾದ ಬಳಿಕ ಹಳ್ಳಿಗಳಿಗೆ ಭೇಟಿ ನೀಡಿದಾಗ ಗ್ರಾಮಸ್ಥರಿಂದ ಮೊದಲು ಶಾಲೆಯ ಸ್ಥಿತಿಗತಿ ಬಗ್ಗೆ ಮಹಿತಿ ಪಡೆಯುತ್ತಿದ್ದೇನೆ. ಈ ಮೂಲಕ ಅಗತ್ಯ ಅನುದಾನ ತಂದು ಶಾಲಾಕೊಠಡಿ ನಿಮಾರ್ಣ ಕಾಮಗಾರಿಗೆ ಅದ್ಯತೆ ನೀಡಿರುವೆ. ಒಟ್ಟು 31 ಕೊಠಡಿಗಳನ್ನು ನಿರ್ಮಿಸಲು 1.67 ಕೋಟಿ ರೂ. ತಂದಿರುವೆ. ಶಾಲೆಗಳಲ್ಲಿ ಅಗತ್ಯ ಕೊಠಡಿ ನಿರ್ಮಿಸಲು ಬದ್ಧವಾಗಿದ್ದೇನೆ. ತಾಲೂಕಿನ ಗೊಲ್ಲರಹಟ್ಟಿಗಳ ಅಭಿವೃದ್ಧಿಗಾಗಿ 3.50 ಕೋಟಿ ರೂ. ಬಿಡುಗಡೆಯಾಗಿದೆ. 18 ಗೊಲ್ಲರಹಟ್ಟಿಗಳಲ್ಲಿ ಸಿಸಿ ರಸ್ತೆ ನಿರ್ಮಿಸುವ ಕಾಮಗಾರಿಗೆ ಭೂಮಿ ಪೂಜೆ ಮಾಡಿರುವುದಾಗಿ ಹೇಳಿದರು.

ಫೋಟೊ