ಮುದ್ದೇಬಿಹಾಳ ತಾಪಂ ಸಭಾ ಭವನದಲ್ಲಿ ಗ್ರಾಪಂಗಳ ವಾಟರ್​ಮನ್​ಗಳಿಗೆ ನೀರು ಪರಿಶೀಲಿಸುವ ತರಬೇತಿ ನೀಡಲಾಯಿತು. ತಾಪಂ ಇಒ ಆರ್​.ಎಸ್​.ಹಿರೇಗೌಡರ, ಎಡಿ ಖೂಬಾಸಿಂಗ್​ ಜಾಧವ, ಅನೀಲ ಸಜ್ಜನ, ಸಂದೀಪ ಹಳ್ಳೂರ ಇತರರಿದ್ದರು. 
ಜಿಲ್ಲೆ

ನೀರಿನ ಶುದ್ಧತೆ ಆದ್ಯತೆ ನೀಡಿ

ಗಿರೀಶ ಸಗರ

ಮುದ್ದೇಬಿಹಾಳ: ಕುಡಿಯುವ ನೀರಿನ ಮೂಲಗಳ ಶುದ್ಧತೆ, ಗುಣಮಟ್ಟ ಖಚಿತಪಡಿಸಿಕೊಳ್ಳಲು ತಾಲೂಕಿನ ಪ್ರತಿಯೊಂದು ಗ್ರಾಮ ಪಂಚಾಯಿತಿಗೆ ಎ್​ಟಿ ಕಿಟ್​ (ಫೀಲ್ಡ್​ ಟೆಸ್ಟಿಂಗ್​ ಕಿಟ್​) ನೀಡಲಾಗಿದೆ.

ವಾಟರ್​ಮನ್​ಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ (ಆರ್​ಡಬ್ಲುಎಸ್​) ಎಇಇ, ತಾಪಂ ಪ್ರಭಾರ ಇಒ ಆರ್​.ಎಸ್​.ಹಿರೇಗೌಡರ ಹೇಳಿದರು.

ಇಲ್ಲಿನ ತಾಪಂ ಸಭಾಭವನದಲ್ಲಿ ಜಿಲ್ಲಾ ಪ್ರಯೋಗಾಲಯ, ತಾಪಂ, ಆರ್​ಡಬ್ಲುಎಸ್​ ಸಂಯುಕ್ತ ಆಶ್ರಯಲ್ಲಿ ಸೋಮವಾರ ಏರ್ಪಡಿಸಿದ್ದ ಗ್ರಾಪಂಗಳ ನೀರಿನ ಮೂಲಗಳ ಗುಣಮಟ್ಟ ತಪಾಸಣೆ ಅಭಿಯಾನ, ವಾಟರ್​ಮನ್​ಗಳಿಗೆ ತರಬೇತಿ ಕಾರ್ಯಕ್ರಮದ ಅಧ್ಯತೆ ವಹಿಸಿ ಅವರು ಮಾತನಾಡಿದರು.

ಕಿಟ್​ನ ಪರಿಣಾಮಕಾರಿ ಬಳಕೆಯಾದಲ್ಲಿ ಗ್ರಾಮೀಣ ಜನರಿಗೆ ಶುದ್ಧ ನೀರು ಕೊಡುವುದು ಸುಲಭವಾಗುತ್ತದೆ. ಈಗ ಮಳೆಗಾಲ ಪ್ರಾರಂಭವಾಗಿದ್ದು ನೀರಿನ ಮೂಲಗಳಲ್ಲಿ ಹೊಸ ನೀರು ಸೇರ್ಪಡೆಯಾಗಿರುತ್ತದೆ. ಅದರಲ್ಲಿ ಕಲ್ಮಶಗಳು ಇರುವ ಸಂಭವ ಇರುವುದರಿಂದ ಎ್​ಟಿಕೆ ಬಳಸಿ ನೀರಿನ ಮಾದರಿ ಪರಿಶೀಲಿಸುವುದು ನೀರಿನ ಗುಣಮಟ್ಟವನ್ನು ಖಚಿತಪಡಿಸುತ್ತದೆ ಎಂದರು.

ಆರ್​ಡಬ್ಲುಎಸ್​ನ ಇಂಜಿನಿಯರ್​ಗಳಾದ ಅನೀಲ ಸಜ್ಜನ, ಸಂದೀಪ ಹಳ್ಳೂರ, ಜಿಲ್ಲಾ ಪ್ರಯೋಗಾಲಯದ ತಂತ್ರ ಲಕ್ಷ$್ಮಣ ವಿಜಯಪುರ ಇನ್ನಿತರರು ಎಲ್ಲ ವಾಟರ್​ಮನ್​ಗಳಿಗೆ ನೀರಿನ ತಪಾಸಣೆಯನ್ನು ಎ್​ಟಿಕೆ ಮೂಲಕ ಹೇಗೆ ಮಾಡಬೇಕು, ಹೇಗೆ ಗುಣಮಟ್ಟ ಖಾತರಿಪಡಿಸಿಕೊಳ್ಳಬೇಕು ಎನ್ನುವುದರ ಪ್ರಾಯೋಗಿಕ ಮಾಹಿತಿ ನೀಡಿದರು.

ವಾಟರ್​ಮನ್​ಗಳಿಂದ ತಪಾಸಣೆ ಮಾಡಿಸಿ ಅವರಿಗೆ ತಪಾಸಣೆ ಮಾಡಲು ಬರುವುದನ್ನು ಖಚಿತಪಡಿಸಿಕೊಳ್ಳಲಾಯಿತು. ತಾಪಂ ಸಹಾಯಕ ನಿರ್ದೇಶಕ ಖೂಬಾಸಿಂಗ್​ ಜಾಧವ್​ ಹಾಗೂ ಎಲ್ಲ ಗ್ರಾಪಂಗಳ ವಾಟರ್​ಮನ್​ಗಳು ಇದ್ದರು. ಈ ಅಭಿಯಾನ ಮತ್ತು ತರಬೇತಿ ರಾಜ್ಯಾದ್ಯಂತ ಒಂದು ವಾರ ನಡೆಯಲಿದೆ ಎನ್ನುವ ಮಾಹಿತಿಯನ್ನು ಎಲ್ಲರಿಗೂ ತಿಳಿಸಿಕೊಡಲಾಯಿತು.