ತಲ್ಲೂರ: ಹಳ್ಳಿಗಳಲ್ಲಿ ಸಿಸಿ ರಸ್ತೆ, ಚರಂಡಿ, ಕುಡಿಯುವ ನೀರು ಸೇರಿ ಹಲವು ಮೂಲಸೌಲಭ್ಯ ಕಲ್ಪಿಸಲು ಒತ್ತು ನೀಡಲಾಗಿದೆ ಎಂದು ಶಾಸಕ ವಿಶ್ವಾಸ ವೆದ್ಯ ಹೇಳಿದರು.
ಗ್ರಾಮದಲ್ಲಿ ಈಚೆಗೆ ಸಣ್ಣ ನೀರಾವರಿ ಕೆರೆ ಅಭಿವದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಸರ್ಕಾರವು ಎಲ್ಲ ಸಮುದಾಯಗಳ ಪ್ರಗತಿಗೆ ಆದ್ಯತೆ ನೀಡಿದ್ದಲ್ಲದೆ, ೇತ್ರದ ಅಭಿವೃದ್ಧಿಗೆ ಅನುದಾನ ನೀಡಿದೆ. ಹೀಗಾಗಿ ೇತ್ರದಲ್ಲಿ ಆರೋಗ್ಯ, ಶಿಣ ಸೇರಿ ಸಮಗ್ರ ಅಭಿವದ್ಧಿಯ ಮೂಲಕ ಮಾದರಿ ೇತ್ರ ಮಾಡುವ ಗುರಿ ಹೊಂದಿದ್ದೇನೆ ಎಂದರು.
ಗ್ರಾಪಂ ಅಧ್ಯ ಕವಿತಾ ಬಾಲರಡ್ಡಿ ಮಾತನಾಡಿ, ಗ್ರಾಮಗಳ ಸರ್ವಾಂಗೀಣ ಅಭಿವದ್ಧಿಗೆ ಗ್ರಾಮಸ್ಥರ ಸಹಕಾರ ಮುಖ್ಯ. ಗ್ರಾಮೀಣ ಭಾಗದ ಅಭಿವದ್ಧಿಗೆ ಶಾಸಕರು ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ ಎಂದು ಹೇಳಿದರು. ಗ್ರಾಮಸ್ಥರು, ಕಾರ್ಯಕರ್ತರು ಶಾಸಕ ವಿಶ್ವಾಸ ವೆದ್ಯ ಅವರನ್ನು ಸನ್ಮಾನಿಸಿದರು. ವೇದಮೂರ್ತಿ ಪ್ರಸನ್ನ ಹಿರೇಮಠ, ಗ್ರಾಪಂ ಸದಸ್ಯ ಶಶಿಧರ ತಳವಾರ, ಬಸನಾಯ್ಕ ಚಿಕಾಕಿ, ಶಿವಾನಂದ ಮಲಕನ್ನವರ, ಪಿಡಿಒ ಎಚ್.ಕೆ. ಚೌರಡ್ಡಿ, ನಿವತ್ತ ಪಿಎಸ್ಐ ಐ.ಎಸ್. ಚಿಕಾಕಿ, ಸುಭಾನಿ ಕುದರಿ, ಬಸವರಾಜ ಪೂಜೇರ, ಮಲ್ಲಿಕಾರ್ಜುನ ಭೋವಿ, ವೆಂಕಣ್ಣ ಯರಡ್ಡಿ, ಬಸಪ್ಪ ರೊಕ್ಕದಕಟ್ಟಿ, ದುಂಡಪ್ಪ ಯರಗಟ್ಟಿ, ಪ್ರಕಾಶ ಕಂಬಾರ, ಶಂಕರ ಹುಬ್ಬಳ್ಳಿ, ಬಸವರಾಜ ಕಾಜಗಾರ, ಅಂಗನವಾಡಿ, ಆಶಾ ಕಾರ್ಯಕರ್ತೆರು, ಸಂಜೀವಿನಿ ಮಹಿಳಾ ಸಂದ ಸದಸ್ಯರು ಇದ್ದರು.