ಕವಿತಾಳ ಸಮೀಪದ ಉಟಕನೂರುನಲ್ಲಿ ಆಯೋಜಿಸಿದ್ದ ಪ್ರವಚನ ಕಾರ್ಯಕ್ರಮವನ್ನು ಮಠದ ಪೀಠಾಧಿಪತಿ ಬಸವರಾಜ ದೇಶಿಕೆಂದ್ರ ಸ್ವಾಮೀಜಿ ಉದ್ಘಾಟಿಸಿದರು. ಪ್ರಮುಖರಾದ ವೀರಭದ್ರ ಶಿವಾಚಾರ್ಯ ಕಂಬಳಿಮಠ ತೆಕ್ಕಲಕೊಟೆ, ಶರಭಯ್ಯಶಾಸ್ತ್ರಿ ಬಳಗನೂರು, ಮನೋಹರ ಗವಾಯಿ ತಲೆಕಟ್ಟು, ಮಲ್ಲಿನಾಥಸ್ವಾಮಿ ಜಾನೆಕಲ್ ಉಪಸ್ಥಿತರಿದ್ದರು. 
ಜಿಲ್ಲೆ

ಆಧ್ಯಾತ್ಮಿಕ ಕಾರ್ಯಕ್ರಮಕ್ಕೆ ಆದ್ಯತೆ ನೀಡಿ

ಕವಿತಾಳ: ಪ್ರವಚನ ಕೇಳುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದು ಉಟಕನೂರು ಅಡವಿಸಿದ್ದೇಶ್ವರ ಮಠದ ಪೀಠಾಧಿಪತಿ ಬಸವರಾಜ ದೇಶಿಕೆಂದ್ರ ಸ್ವಾಮೀಜಿ ಹೇಳಿದರು.
ಸಮೀಪದ ಉಟಕನೂರುನಲ್ಲಿ ಜಾತ್ರೆ ನಿಮಿತ್ತ ಸೋಮವಾರ ಆಯೋಜಿಸಿದ್ದ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಸವಲಿಂಗೇಶ್ವರ ಪುರಾಣ ಪ್ರವಚನ ಫೆ. 3ರವರೆಗೆ ನಡೆಯಲಿದೆ. ಪ್ರತಿಯೊಬ್ಬರು ಆಧ್ಯಾತ್ಮಿಕ ಕಾರ್ಯಕ್ರಮಕ್ಕೆ ಆದ್ಯತೆ ನೀಡಬೇಕು. ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗುವುದು ಎಂದರು.