ಅರಕೇರಾ: ಬಲಿಷ್ಠ ರಾಷ್ಟ್ರ ನಿರ್ಮಿಸಲು ಕೂಲಿ ಕಾರ್ಮಿಕರ ಪಾತ್ರ ದೊಡ್ಡದು. ಕೂಲಿಕಾರರು ಕೆಲಸದ ಜತೆ ಸಮತೋಲನ ಆರೋಗ್ಯ ಕಾಪಾಡಿಕೊಳ್ಳಲು ಆದ್ಯತೆ ನೀಡಬೇಕು ಎಂದು ಟಿಎಚ್‌ಒ ಡಾ.ಬನದೇಶ್ವರ ಹೇಳಿದರು.
ತಾಲೂಕಿನ ಬಿ.ಗಣೇಕಲ್ ಗ್ರಾಪಂ ವ್ಯಾಪ್ತಿಯ ಬಂಗಾರ ಬಂಡಿ ತಾಂಡಾದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಆರೋಗ್ಯ ಇಲಾಖೆ ಯಿಂದ ನರೇಗಾ ಯೋಜನೆಯಡಿ ಕೂಲಿ ಕಾರ್ಮಿಕರಿಗಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಆರೋಗ್ಯ ಉಚಿತ ತಪಾಸಣೆ ಶಿಬಿರದಲ್ಲಿ ಮಾತನಾಡಿದರು. ಕೆಲಸದ ಒತ್ತಡ ಆರೋಗ್ಯವನ್ನು ಕಸಿದುಕೊಳ್ಳುತ್ತದೆ. ನಾವು ಸೇವಿಸುವ ಆಹಾರ, ಜೀವನ ಪದ್ಧತಿಯಿಂದ ಉತ್ತಮ ಆರೋಗ್ಯವನ್ನು ನಿರ್ಣಯಿಸುತ್ತದೆ. ಇತ್ತೀಚೆಗೆ ಸಾಂಕ್ರಾಮಿಕ ರೋಗಗಳು ಹೆಚ್ಚಾಗಿ ಕಂಡು ಬರುತ್ತಿದ್ದು, 30 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದರು.
212 ಕೂಲಿ ಕಾರ್ಮಿಕರು ರಕ್ತದೊತ್ತಡ, ಮಧುಮೇಹ, ಎಚ್‌ಐವಿ ಪರೀಕ್ಷೆಗೆ ಒಳಪಟ್ಟರು. 15 ದಿನಗಳಿಗಿಂತ ಹೆಚ್ಚು ಕೆಮ್ಮು, ನೆಗಡಿ, ಜ್ವರ, ಕಫದಲ್ಲಿ ರಕ್ತ, ಹಸಿವಾಗದೆ ಇರುವುದು, ತೂಕ ಕಡಿಮೆ ಇರುವ ಸಂಭಾವ್ಯ ರೋಗಿಗಳ ಕಫ ಮಾದರಿ ಪಡೆಯಲಾಯಿತು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಗೀತಮ್ಮ, ತಾಲೂಕು ಕ್ಷಯ ರೋಗ ಮೇಲ್ವಿಚಾರಕ ಮಹೇಶ ನಾಯಕ, ಐಸಿಟಿಸಿ ಆಪ್ತ ಸಮಾಲೋಚಕ ನಾಗಲಿಂಗ, ಆರೋಗ್ಯ ನಿರೀಕ್ಷಣಾಧಿಕಾರಿ ರಚನಾ ಗೌಡ, ಎನ್ಸಿಡಿ ಆಪ್ತ ಸಮಾಲೋಚಕ ಉಮೇಶ ನಾಯಕ, ಆರೋಗ್ಯ ಮಿತ್ರ ತುಳಸಿದಾಸ, ಚಂದ್ರಕಲಾ, ಪ್ರಭಾವತಿ, ಸುನೀಲ್ ಕುಮಾರ್, ರಶೀದಾ ಬೇಗಂ, ಗ್ರಾಪಂ ಸಿಬ್ಬಂದಿ ನೌಶದ ಅಲಿ, ಶಾಂತಪ್ಪ, ಭೀಮರಡ್ಡಿ, ಆಶಾ ಕಾರ್ಯಕರ್ತೆ ರೇಣುಕಾ ಇದ್ದರು.