ಜಿಲ್ಲೆ

ಮಾನವ ಸಂಪನ್ಮೂಲ ಅಭಿವೃದ್ಧಿಗೆ ಆದ್ಯತೆ

ಜಿ.ಹೆಚ್. ಧನ್ಯಕುಮಾರ್

ಜಯಪುರ: ಭಾರತ ಅಭಿವೃದ್ಧಿ ಶೀಲಾ ರಾಷ್ಟ್ರವಾಗಲು ಮಾನವ ಸಂಪನ್ಮೂಲ ಅಭಿವೃದ್ಧಿ ಪ್ರಮುಖ ಪಾತ್ರವಹಿಸುತ್ತದೆ ಎಂದು ಲೆಕ್ಕಪರಿಶೋಧಕ ಬಿ.ವಿ.ರವೀಂದ್ರನಾಥ್ ಹೇಳಿದರು.
ಶ್ರೀ ವಿನಾಯಕ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ಅವಶ್ಯಕತೆಗಿಂತ ಅಧಿಕವಾಗಿ ಮೊಬೈಲ್, ಟಿವಿಗಳನ್ನು ಬಳಸಲಾಗುತ್ತಿದ್ದು, ಇದನ್ನು ನಿಯಂತ್ರಿಸುವ ಅಗತ್ಯವಿದೆ ಎಂದರು.
ಜಯಪುರದ ವಿನಾಯಕ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಸ್ಥೆ 29 ಲಕ್ಷ ಲಾಭಗಳಿಸಿದರುವುದು ದೊಡ್ಡ ಸಾಧನೆ. ಸಂಸ್ಥೆ ಯಲ್ಲಿ ಲೋಪ ದೋಷಗಳು ಬಾರದಂತೆ ಅಧಿಕಾರಿಗಳು, ಸಿಬ್ಬಂದಿ ಪ್ರಯತ್ನಿಸಬೇಕು. ಸಂಸ್ಥೆ 15 ವರ್ಷದಿಂದ ಪ್ರತಿ ವರ್ಷ ಎ ದರ್ಜೆ ಕಾಪಾಡಿಕೊಂಡು ಬಂದಿರುವುದು ಸಂತಸದ ಸಂಗತಿ ಎಂದರು.
ಅಧ್ಯಕ್ಷ ಸುಬ್ಬರಾಜು ಮಾತನಾಡಿ, ವಿನಾಯಕ ಸಂಘ 2009ರಲ್ಲಿ ಪ್ರಾರಂಭವಾಗಿದ್ದು, ಪ್ರಸ್ತುತ ಸಾಲಿಗೆ 15 ವರ್ಷ ಪೂರೈಸಿದೆ. ಈ ಸಾಧನೆಗೆ ಷೇರುದಾರರು, ನಿರ್ದೇಶಕ ಮಂಡಳಿ ಹಾಗೂ ನೌಕರರ ಸಹಕಾರ ಮುಖ್ಯವಾಗಿದೆ ಎಂದರು.
ಉಪಾಧ್ಯಕ್ಷ ಜ್ಯೋತಿ, ನಿರ್ದೇಶಕರಾದ ಚಂದ್ರಶೇಖರ್, ಗೋಪಾಲ್, ನಾಗರಾಜ್, ಸುಬ್ರಹ್ಮಣ್ಯ, ಪ್ರಭಾಕರ, ಪಾಂಡುರಂಗ, ಸುಮಂಗಲ, ಕೆ.ಜಿ. ಪರಮೇಶ್ವರ ಶಾಸ್ತ್ರಿ, ಸಿಇಒ ಪಣಿರಾಜ್ ಹೆಬ್ಬಾರ್, ಶ್ವೇತಾ, ಸುಚಿತ್ರ, ರಾಜುಮೂರ್ತಿ ಇದ್ದರು.