ವಿಜಯವಾಣಿ ಸುದ್ದಿಜಾಲ ಧಾರವಾಡ
ಧೂಮಪಾನ ತ್ಯಜಿಸುವ ಮೂಲಕ ನಾವು ಮತ್ತು ನಮ್ಮ ಭವಿಷ್ಯದ ಪೀಳಿಗೆಗೆ ಆರೋಗ್ಯಕರ ಮತ್ತು ಸಂತೋಷದ ಜಗತ್ತು ಸೃಷ್ಟಿಸಬಹುದು ಎಂದು ಐಎಂಎ ಧಾರವಾಡ ಶಾಖೆ ಅಧ್ಯ ಡಾ. ಸತೀಶ್ ಇರಕಲ್ ಹೇಳಿದರು.
ವಿಶ್ವ ತಂಬಾಕು ರಹಿತ ದಿನ ನಿಮಿತ್ತ ಭಾರತೀಯ ವೈದ್ಯಕಿಯ ಸಂ, ಹು&ಧಾ ಮಹಾನಗರ ಪಾಲಿಕೆ ಮತ್ತು ಎಸ್ಡಿಎಂ ದಂತ ಆಸ್ಪತ್ರೆ ವತಿಯಿಂದ ಶನಿವಾರ ಆಯೋಜಿಸಿದ್ದ ತಂಬಾಕು ಉದ್ಯಮದ ಹಸ್ತೇಪದಿಂದ ಮಕ್ಕಳನ್ನು ರಸುವ ವಿಷಯದೊಂದಿಗೆ ಜಾಗೃತಿ ಜಾಥಾ ಮತ್ತು ಆರೋಗ್ಯ ತಪಾಸಣೆ ಮತ್ತು ಕ್ಯಾನ್ಸರ್ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.
ಕೃಷ್ಣಿ ಶಿರೂರ, ಡಾ. ವಾಣಿ ಇರಕಲ್, ಜಿಲ್ಲಾಶಸ್ತ್ರ ಚಿಕಿತ್ಸಕ ಡಾ. ಸಂಗಪ್ಪ ಗಾಬಿ ಮಾತನಾಡಿದರು. ಡಾ.ಕಿರಣ ಕುಲಕಣಿರ್, ವಲಯ ಸಹಾಯಕ ಆಯುಕ್ತರಾದ ಶಂಕರ ಪಾಟೀಲ, ಸಂತೋಷ ಯರಂಗಳಿ, ಪ್ರಹ್ಲಾದ ರೆಡ್ಡಿ, ಆನಂದ ಕಾಂಬಳೆ, ಹಿರಿಯ ದಂತ ವೈದ್ಯೆ ಡಾ. ಪ್ರೀತಾ ಜೆ ಶೆಟ್ಟಿ, ಡಾ.ಯು.ಎಸ್ ದಿನೇಶ, ಶಿವಯೋಗಿ ಅಮ್ಮಿನಗಡ, ಶ್ರೀಯಾ ಕಾಲೇಜಿನ ಡಾ. ವಾಣಿ ಇರಕಲ್, ಡಾ. ರೋಡಾ ಜೇಸುರಾಜ್, ಶ್ರೀಯಾ ಕಾಲೇಜಿನ ವಿದ್ಯಾಥಿರ್ಗಳು, ಇತರರು ಇದ್ದರು.
ಕಲಾಭವನದಿಂದ ಆರಂಭವಾದ ಜಾಗೃತಿ ಜಾಥಾ ಹಳೇ ಬಸ್ ನಿಲ್ದಾಣ, ಮಾರುಕಟ್ಟೆ ಮಾರ್ಗವಾಗಿ ನಗರದ ವಿವಿಧ ಕಡೆಗಳಲ್ಲಿ ಸಂಚರಿಸಿತು. ನಂತರ ನಡೆದ ಉಚಿತ ತಪಾಸಣಾ ಶಿಬಿರದಲ್ಲಿ ಡಾ. ಸತೀಶ್ ಇರಕಲ್, ಡಾ.ವಾಣಿ ಇರಕಲ್, ಡಾ. ಪ್ರಕಾಶ ರಾಮನಗೌಡರ್, ಡಾ.ನೀಲಕಂಠ ಪಾಟೀಲ, ಡಾ.ವಿಜಯ ನಾಡಕಣಿರ್, ಡಾ. ರಾಧಿಕಾ ಅಂಬೇಡ್ಕರ, ಡಾ. ಜ್ಯೋತಿ ಹಿರೇಮಠ, ಡಾ. ಅಚ್ಯುತ, ಡಾ.ಗಿರೀಶ ನಾಡಿಗೇರ, ಡಾ ಯು.ಎಸ್ ದಿನೇಶ್ ಸೇರಿ ನುರಿತ ವೈದ್ಯರ ತಂಡ ಮಹಾನಗರ ಪಾಲಿಕೆ ಪೌರಕಾಮಿರ್ಕರು, ಆಟೋ ಚಾಲಕರು ಸೇರಿ 300 ಕ್ಕೂ ಹೆಚ್ಚು ಜನರಿಗೆ ಆರೋಗ್ಯ ತಪಾಸಣೆ ಮಾಡಿದರು.