ಮುದ್ದೇಬಿಹಾಳ ತಾಲೂಕಿನ ಢವಳಗಿ ಗ್ರಾಮದಲ್ಲಿ ಬೀರಲಿಂಗೇಶ್ವರ, ಜಟ್ಟಿಂಗೇಶ್ವರ ದೇವಸ್ಥಾನದ ಉದ್ಘಾಟನೆ, ಮೂರ್ತಿ ಪ್ರತಿಷ್ಠಾಪನೆ, ಧರ್ಮಸಭೆ, ಸನ್ಮಾನ ಸಮಾರಂಭವನ್ನು ಗಣ್ಯರು, ಶ್ರೀಗಳು ಉದ್ಘಾಟಿಸಿದರು. ರೇವಣಸಿದ್ಧೇಶ್ವರ ಶಾಂತಮಯ ಶ್ರೀಗಳು, ಡಾ.ಎಸ್​.ಕೆ.ಹರನಾಳ, ಪ್ರಭುಗೌಡ ದೇಸಾಯಿ, ಎಸ್​.ಎಸ್​. ಹುಲ್ಲೂರ ಇತರರಿದ್ದರು. 
ಜಿಲ್ಲೆ

ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಆದ್ಯತೆ ನೀಡಿ

ಗಿರೀಶ ಸಗರ

ಢವಳಗಿ: ಹಾಲುಮತ ಸಮಾಜದ ಜನರು ಶಿಣದಲ್ಲಿ ಬಹಳ ಹಿಂದುಳಿದ್ದು, ಮಕ್ಕಳಿಗೆ ದನ&ಕುರಿಗಳನ್ನು ಕಾಯಲು ಬಿಡಿಸಿ ಶಿಣದ ಕಡೆ ಮಹತ್ವ ಕೊಡುವಂತೆ ಪಾಲಕರು ನೋಡಿಕೊಳ್ಳಬೇಕು ಎಂದು ಸರೂರ (ಅಗತೀರ್ಥ) ದ ಹಾಲುಮತದ ಮೂಲ ಗುರುಪೀಠದ ರೇವಣಸಿದ್ಧೇಶ್ವರ ಶಾಂತಮಯ ಶ್ರೀಗಳು ಹೇಳಿದರು.

ಮುದ್ದೇಬಿಹಾಳ ತಾಲೂಕಿನ ಢವಳಗಿ ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬೀರಲಿಂಗೇಶ್ವರ ಮತ್ತು ಜಟ್ಟಿಂಗೇಶ್ವರ ನೂತನ ದೇವಸ್ಥಾನದ ಉದ್ಘಾಟನೆ, ಮೂರ್ತಿ ಪ್ರತಿಷ್ಠಾಪನೆ, ಧರ್ಮಸಭೆ, ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ದೇವರ ಹೆಸರಿನಲ್ಲಿ ಕುರಿ&ಕೋಣ ಬಲಿಕೊಡುವುದರ ನೆಪದಲ್ಲಿ ಲಗಟ್ಟಲೇ ಹಣ ಖರ್ಚುಮಾಡಬೇಡಿ. ಅದೇ ಹಣವನ್ನು ನಿಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಬಳಸಿಕೊಳ್ಳಬೇಕು ಎಂದರು.

ಸುೇತ್ರ ಹುಲಜಂತಿ ಮಾಳಿಂಗರಾಯ ಮಹಾರಾಜರು ಹಾಲುಮತ ಸಮಾಜದಲ್ಲಿ ನಡೆದುಬಂದ ಪವಾಡ ಪುರುಷ ಮಾಳಿಂಗರಾಯ ಮತ್ತು ಬೀರಲಿಂಗೇಶ್ವರ ಹಾಗೂ ಜಟ್ಟಿಂಗೇಶ್ವರರು ಮಾಡಿದ ಪವಾಡಗಳನ್ನು ಭಕ್ತರಿಗೆ ವಿವರಿಸಿದರು.

ಎಂಜಿಎಂಕೆ ಕಾಲೇಜಿನ ಪ್ರಾಂಶುಪಾಲ ಡಾ.ಎಸ್​.ಕೆ.ಹರನಾಳ ಮಾತನಾಡಿ, ಸಮಾಜದ ಅಂಕು&ಡೊಂಕನ್ನು ಈಗಿನ ಯುವಕರೇ ತಿದ್ದಬೇಕು. ಯುವಜನತೆ ದುಶ್ಚಟಗಳಿಂದ ದೂರವಿರಬೇಕು ಎಂದರು.

ಕಳೆದ ವರ್ಷ ಎಸ್​ಎಸ್​ಎಲ್​ಸಿಯಲ್ಲಿ ಹೆಚ್ಚು ಅಂಕ ಪಡೆದ ದಾನಮ್ಮ ಬೀರಗೊಂಡ ಹಾಗೂ ಅಭಿಷೇಕ ಹಡಗಲಿ ಅವರನ್ನು ಗೌರವಿಸಲಾಯಿತು.

ಜಿಪಂ ಮಾಜಿ ಉಪಾಧ್ಯ ಪ್ರಭುಗೌಡ ದೇಸಾಯಿ, ನಿವೃತ್ತ ಡಿವೈಎಸ್​ಪಿ ಎಸ್​.ಎಸ್​. ಹುಲ್ಲೂರ, ಬಸನಗೌಡ ಪಾಟೀಲ ಅಂಗಡಗೇರಿ, ಸಿದ್ಧನಗೌಡ ಬಿರಾದಾರ, ಎಂ.ಎಸ್​.ಅಮಲ್ಯಾಳ, ರಾಜುಗೌಡ ಗೌಡರ, ಜಿ.ಎನ್​.ಪೂಜಾರಿ, ಸುರೇಶಗೌಡ ಪಾಟೀಲ, ಅಣ್ಣಪ್ಪ ಹಡಗಲಿ, ಮಡಿವಾಳಪ್ಪ ಬೀರಗೊಂಡ, ಜಿ.ಎಸ್​.ಕೋರಿ, ಬಿ.ಎಸ್​.ಶೇಖಣ್ಣವರ, ಸಂಪತ್ತ ಕೋರಿ, ಶೋಭಾ ಗುಡಿಮನಿ, ಶ್ರೀಶೈಲ ಸಜ್ಜನ, ಸಂಗಮೇಶ ಬಿರಾದಾರ, ಸುನೀಲಗೌಡ ಬಿರಾದಾರ, ಬಸವರಾಜ ಯರಕ್ಯಾಳ ಇತರರಿದ್ದರು.