ಜಿಲ್ಲೆ

ಪಠ್ಯೇತರ ಚಟುವಟಿಕೆಗೂ ಆದ್ಯತೆ ನೀಡಿ

ಜಿ.ಹೆಚ್. ಧನ್ಯಕುಮಾರ್

ಪಂಚನಹಳ್ಳಿ: ಮಕ್ಕಳು ಹೆಚ್ಚಿನ ಸಮಯ ಶಿಕ್ಷಕರೊಂದಿಗೆ ಶಾಲೆಯಲ್ಲಿ ಕಳೆಯುತ್ತಾರೆ.

ಶಿಕ್ಷಕರು ಮಕ್ಕಳ ಮೇಲೆ ಪ್ರಭಾವ ಬೀರುವ ಮೂಲಕ ಮಕ್ಕಳ ಉತ್ತಮ ಶಿಕ್ಷಣಕ್ಕೆ ಹೆಚ್ಚು

ಒತ್ತು ನೀಡಬೇಕು ಎಂದು ಡಾ.ಎಸ್.ಟಿ.ಛಾಯಾಪತಿ ಹೇಳಿದರು.

ಸಿಂಗಟಗೆರೆ ಸರ್ಕಾರಿ ಮಾದರಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ

ಶಾಲಾ ವಾರ್ಷಿಕೋತ್ಸವ ಹಾಗೂ ಶಾಲಾ ಮಹಾದ್ವಾರ ಉದ್ಘಾಟಿಸಿ ಮಾತನಾಡಿ,

ಮಕ್ಕಳಿಗೆ ಪಠ್ಯಕ್ರಮ ಎಷ್ಟು ಮುಖ್ಯವೋ ಪಠ್ಯೇತರ ಚಟುವಟಿಕೆಯೂ ಅಷ್ಟೇ ಮುಖ್ಯ.

ಪ್ರತಿಯೊಬ್ಬ ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಯಲ್ಲಿ

ಪಾಲ್ಗೊಳ್ಳಬೇಕು. ಮಕ್ಕಳು ಒಂದೇ ವಿಷಯಕ್ಕೆ ಸೀಮಿತವಾಗಿ ಸಾಂಸ್ಕೃತಿಕ

ಚಟುವಟಿಕೆಗಳಲ್ಲಿ ಭಾಗವಹಿಸಲು ಹಿಂದೇಟು ಹಾಕುತ್ತಾರೆ. ಓದು ಬರಹದ ಜತೆಗೆ

ಉತ್ತಮ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಹವ್ಯಾಸ ಬೆಳೆಸಿಕೊಳ್ಳಬೇಕು. ಮಕ್ಕಳಿಗೆ

ಶಿಕ್ಷಣಕ್ಕೆ ಪೂರಕ ಸೌಲಭ್ಯಗಳನ್ನು ಒದಗಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದರು.

ಡಾ.ಸುಧಾ ಛಾಯಾಪತಿ, ಕಲ್ಲೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಬಿ.ಕೆ. ನಾಗರಾಜ್,

ಗ್ರಾಪಂ ಅಧ್ಯಕ್ಷ ಮಧುಮಾಲ ರವಿ, ಮುಖ್ಯಶಿಕ್ಷಕಿ ಜಯಂತಿ, ಹಿರಿಯ ಶಿಕ್ಷಕರ

ಜಗದೀಶ್,ಬೈರೇಗೌಡ, ಪ್ರೇಮ್ಕುಮಾರ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ

ಮಲ್ಲಿಕಾರ್ಜುನ್, ಉದಯಕುಮಾರ್, ಶಿಕ್ಷಕರದ ಮಲ್ಲಿಕಾರ್ಜುನ, ಪ್ರಶಾಂತ್,

ರಾಜೇಶ್, ಮಾಜಿ ಸೈನಿಕ ಚಂದ್ರಪ್ಪ ಇದ್ದರು.