ಪಂಚನಹಳ್ಳಿ: ವಿದ್ಯಾರ್ಥಿಗಳ ದೈಹಿಕ ಹಾಗೂ ಮಾನಸಿಕ ಸದೃಢತೆಗೆ ಕ್ರಿಡೆಗಳು ಸಹಕಾರಿಯಾಗಿದ್ದು, ಪಾಠದೊಂದಿಗೆ ಕ್ರೀಡಾಕೂಟಗಳು ಅಗತ್ಯ ಎಂದು ಕಡೂರು ಕ್ಷೇತ್ರ ಶಿಕ್ಷಣಾಧಿಕಾರಿ ತಿಮ್ಮಯ್ಯ ಹೇಳಿದರು.
ಎಸ್.ಬಸವನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸಿಂಗಟಗೆರೆ ಮತ್ತು ಪಂಚನಹಳ್ಳಿ ವಲಯ ಮಟ್ಟದ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳ ಕ್ರೀಡಾಕೂಟದಲ್ಲಿ ಮಾತನಾಡಿ, ವಿದ್ಯಾರ್ಥಿಗಳ ಶೈಕ್ಷಣಿಕ ಹಂತದಲ್ಲಿ ಪಠ್ಯಪುಸ್ತಕಕ್ಕೆ ನೀಡಿದ ಮಹತ್ವವನ್ನು ಪಠ್ಯೇತರ ಚಟುವಟಿಕೆಗಳಾದ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ನೀಡಬೇಕು. ಕ್ರೀಡೆಗಳು ದೈಹಿಕವಾಗಿ ಸದೃಢಗೊಳಿಸುವ ಜತೆಗೆ ಮನಸ್ಸಿನ ಏಕಾಗ್ರತೆಗೂ ಸಹಕಾರಿಯಾಗಲದೆ ಎಂದು ತಿಳಿಸಿದರು.
ಸಿಂಗಟಗೆರೆ ಕಲ್ಲೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ನಾಗರಾಜಪ್ಪ ಮಾತನಾಡಿ, ಗ್ರಾಮೀಣ ಭಾಗದ ಮಕ್ಕಳು ತಮ್ಮ ಪ್ರತಿಭೆ ಹೆಚ್ಚಿಸಿಕೊಳ್ಳಲು ಕ್ರೀಡೆ ಸಹಕಾರಿ, ಮಕ್ಕಳು ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಚಟುವಟಿಕೆ, ಉತ್ಸಾಹದಿಂದ ಇರಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಬಿ.ಪಿ.ದೇವಾನಂದ್ ಮಾತನಾಡಿ, ವಲಯ ಮಟ್ಟದ ಎಲ್ಲ ಶಾಲೆಗಳು ಒಂದೇ ಕಡೆ ಸೇರಿ ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಉತ್ತಮ ಸ್ಪರ್ಧಾತ್ಮಕ ಬೆಳವಣಿಗೆ ಸಾಧ್ಯ. ಈ ಸಂದರ್ಭದಲ್ಲಿ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮೋಹನ್ ಕುಮಾರ್, ಗ್ರಾಪಂ ಅಧ್ಯಕ್ಷ ಮಧುಮಾಲ ರವಿ, ಬಿಆರ್‌ಸಿ ಪ್ರೇಮ್ ಕುಮಾರ್,ಹರೀಶ್, ಆನಂದಪ್ಪ, ನಾಗರಾಜ್, ಕಲ್ಲೇಶಪ್ಪ, ರಘು, ಬಿ.ಪಿನಾಗರಾಜ್, ಗಿರೀಶ ಆರಾಧ್ಯ, ಗೀತಾ, ರವಿ, ಇದ್ದರು.