ಮಂಗಳೂರು : ಯೋಗ ನಿದ್ರಾಸನ ಪ್ರದರ್ಶನದಲ್ಲಿ ವಿಶೇಷ ಸಾಧನೆ ಮಾಡಿರುವ ನಗರದ ಳ್ನೀರ್ ಸೈಂಟ್‌ಮೇರಿಸ್ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ಪ್ರಿನ್ಸಿಟಾ ವಿಯೆನ್ನ ಡಿಸೋಜಾ ಅವರು ಇಂಡಿಯಾ ಬುಕ್ ಆ್ ರೆಕಾರ್ಡ್‌ಗೆ ಸೇರ್ಪಡೆಯಾಗಿದ್ದಾರೆ.
ಸತತ 40 ನಿಮಿಷ 15 ಸೆಕೆಂಡ್ ಯೋಗ ನಿದ್ರಾಸನ ಮಾಡುವ ಮೂಲಕ ಪ್ರಿನ್ಸಿಟಾ ಅವರು ಈ ಹಿಂದಿನ 19 ನಿಮಿಷದ ದಾಖಲೆಯನ್ನು ಮುರಿದಿದ್ದಾರೆ ಎಂದು ಯೋಗ ತರಬೇತುದಾರೆ ಕವಿತಾ ಅಶೋಕ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಾಧಕಿ ಪ್ರಿನ್ಸಿಟಾ ವಿಯೆನ್ನ ಡಿಸೋಜಾ ಮಾತನಾಡಿ, ಶಾಲೆಯ ಶಿಕ್ಷಕರು, ಯೋಗ ಶಿಕ್ಷಕರು ಹಾಗೂ ಹೆತ್ತವರ ಸಹಕಾರದಿಂದ ಈ ಯೋಗ ಸಾಧನೆ ಸಾಧ್ಯವಾಗಿದೆ ಎಂದರು.
ಶಾಲೆಯ ಮುಖ್ಯ ಶಿಕ್ಷಕಿ ಮೈಸೀ ಎ.ಸಿ., ಸಹಾಯಕ ಮುಖ್ಯ ಶಿಕ್ಷಕಿ ಗ್ರೇಸಿ ಲೋಬೊ, ಹೆತ್ತವರಾದ ಪ್ರವೀಣ್ ಡಿಸೋಜಾ ವಿನಿತಾ ಡಿಸೋಜಾ, ಮಂಗಳಾ ಈಜುಕೊಳದ ಸಿಬ್ಬಂದಿ ಚಂದ್ರಶೇಖರ್ ರೈ ಸೂರಿಕುಮೇರು ಉಪಸ್ಥಿತರಿದ್ದರು.