ಜಿಲ್ಲೆ

ಸಮಾನತೆಯ ತತ್ವ ಪ್ರತಿಯೊಬ್ಬರಲ್ಲೂ ಮೂಡಿಸಿ -ನಗರಸಭೆ ಮಾಜಿ ಸದಸ್ಯ ಹುಸೇನಪ್ಪ ಹಂಚಿನಾಳ್ ಮನವಿ

ಗಂಗಾವತಿ: ಸಹನೆ, ತಾಳ್ಮೆ ಮೂಲಕ ಸಮಾನತೆಯ ತತ್ವವನ್ನು ಪ್ರತಿಯೊಬ್ಬರಲ್ಲೂ ಮೂಡಿಸುವ ಕೆಲಸವಾಗಬೇಕಿದೆ ಎಂದು ನಗರಸಭೆ ಮಾಜಿ ಸದಸ್ಯ ಹುಸೇನಪ್ಪ ಹಂಚಿನಾಳ್ ಹೇಳಿದರು.

ನಗರದ 28ನೇ ವಾರ್ಡ್‌ನ ಹಿರೇಜಂತಕಲ್‌ನಲ್ಲಿ ಬುದ್ಧ ಪೂರ್ಣಿಮೆ ಪ್ರಯುಕ್ತ ಸಮಾನ ಮನಸ್ಕರ ಬಳಗದಿಂದ ಗುರುವಾರ ಹಮ್ಮಿಕೊಂಡಿದ್ದ ಸರಳ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ದೀಪ ಪ್ರಜ್ವಂಲನ ನಡೆಸಿ ಮಾತನಾಡಿದರು. ಮುಖಂಡರಾದ ಪಂಪಾಪತಿ ಮುಂಡಾಸ್ತ, ಜಗದೀಶ, ಚಿನ್ನಪ್ಪ,ರಮೇಶಮಾಗಿ, ಜನಾರ್ದನ, ಉದಯ ಕೋರಿ ಇತರರಿದ್ದರು.

ಬುದ್ಧ ವಿಹಾರ ಟ್ರಸ್ಟ್
ನಗರದ 20ನೇ ವಾರ್ಡ್ ಛಲವಾಣಿಯ ಗೌತಮ ಬುದ್ಧ ವೃತ್ತದಲ್ಲಿ ಬುದ್ಧ ವಿಹಾರ ಟ್ರಸ್ಟ್‌ನಿಂದ ಬುದ್ಧ ಪೂರ್ಣಿಮೆ ಆಚರಿಸಲಾಯಿತು. ನಾಮಲಕಕ್ಕೆ ಪುಷ್ಪಾರ್ಪಣೆ ಸಲ್ಲಿಸಿದ ಪಿಡಿಒ ಸುರೇಶ ಮಾತನಾಡಿ, ಗೌತಮಬುದ್ಧ ತತ್ವದಾರ್ಶಗಳನ್ನು ಯುವ ಸಮುದಾಯ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು. ಟ್ರಸ್ಟ್ ಅಧ್ಯಕ್ಷ ಪ್ರತಾಪ, ಪದಾಧಿಕಾರಿಗಳಾದ ಶಿವರಾಜ, ರಾಜಶೇಖರ್, ಮಂಜುನಾಥ, ಷಣ್ಮುಖ, ಹುಲ್ಲೇಶ, ಸಂತೋಷ, ಯಮನೂರ ಇತರರಿದ್ದರು.