ಜಿಲ್ಲೆ

ರೋಗಮುಕ್ತ ಸಮಾಜ ನಿರ್ಮಾಣ ಸಾಧ್ಯ

ಹೊನ್ನಾಳಿ: ಯೋಗವು ಶರೀರ ಮತ್ತು ಮನಸ್ಸನ್ನು ಒಗ್ಗೂಡಿಸುತ್ತದೆ, ಜತೆಗೆ ಮನಸ್ಸು ಹತೋಟಿಗೆ ಬರುತ್ತದೆ ಹಾಗೂ ಶರೀರ ಸದೃಢವಾಗಿರುತ್ತದೆ ಎಂದು ಪ್ರಾಚಾರ್ಯ ಶಿವಕುಮಾರ್ ಹೇಳಿದರು.

ತಾಲೂಕಿನ ಸಿಂಗಟಗೆರೆ ಗ್ರಾಮದ ಕಿತ್ತೂರುರಾಣಿ ಚನ್ನಮ್ಮ ವಸತಿ ಶಾಲಾ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವ ಯೋಗ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಿರಂತರ ಯೋಗಾಭ್ಯಾಸದಿಂದ ಇಡೀ ಜೀವನ ಆರೋಗ್ಯದಿಂದ ಸಾಗಿಸಬಹುದು ಮತ್ತು ಯೋಗದಿಂದ ರೋಗಮುಕ್ತ ಸಮಾಜವನ್ನು ನಿರ್ವಿುಸಬಹುದು ಎಂಬುದನ್ನು ಅರ್ಥ ಮಾಡಿಕೊಂಡ ವಿಶ್ವದ ಜನತೆ ದೈನಂದಿನ ಚಟುವಟಿಕೆಗಳಲ್ಲಿ ಯೋಗವನ್ನು ಆಯ್ಕೆ ಮಾಡಿಕೊಂಡಿದೆ ಎಂದರು.

ಯೋಗದ ಮಹತ್ವವನ್ನು ಅರಿತ 190ಕ್ಕೂ ಹೆಚ್ಚು ರಾಷ್ಟ್ರಗಳು, ಪ್ರತಿವರ್ಷ ಜೂ.21 ರಂದು ಯೋಗ ದಿನವನ್ನು ಆಚರಿಸುತ್ತಿವೆ. ಇದು ಭಾರತೀಯರು ಹೆಮ್ಮೆ ಪಡುವ ವಿಚಾರ ಎಂದು ಹೇಳಿದರು.

ವಸತಿ ಶಾಲೆಯ ವಿದ್ಯಾರ್ಥಿಗಳು ಯೋಗಾಭ್ಯಾಸ ಮಾಡಿದರು. ಶಿಕ್ಷಕರಾದ ಹಾಲೇಶ್​ನಾಯ್್ಕ ಭೀಮಾನಾಯ್್ಕ ಸುರೇಶ್, ನಸರುಲ್ಲಾ, ಪ್ರದೀಪ್​ಕುಮಾರ್, ಉರ್ಬಖುತೇಜಾ ಖಾನಂ, ರಾಜಶೇಖರ್ ತಳವಾರ, ಬಶಿರಾ ಬಳಗಾರ್, ಚೈತ್ರಾ, ಶಬಿನಾ, ಕಿರಣ್, ಭರತ ಇದ್ದರು.