ಜಿಲ್ಲೆ

ಕೇಳಿದ ತರಗತಿ ಕೊಡದ ಪ್ರಿನ್ಸಿಪಾಲ್; ರೊಚ್ಚಿಗೆದ್ದ ಲೆಕ್ಚರರ್ ಹೀಗಾ ಮಾಡೋದು

theerthaswamy

ತುಮಕೂರು: ತರಗತಿ ನಡೆಸುವ ವಿಚಾರಕ್ಕೆ ಕಾಲೇಜ್ ಪ್ರಿನ್ಸಿಪಾಲ್ ಮತ್ತು ಲೆಕ್ಚರರ್ ನಡುವೆ ಗಲಾಟೆ‌ ನಡೆದಿದ್ದು, ಹಲ್ಲೆ ನಡೆಸಿರುವ ಘಟನೆ ನಡೆದಿದೆ.

ತುಮಕೂರು ನಗರದ ವಿದ್ಯೋದಯ ಲಾ ಕಾಲೇಜಿನ ಪ್ರಾಂಶುಪಾಲ ಎ.ನಾರಾಯಸ್ವಾಮಿ ಮೇಲೆ ಉಪನ್ಯಾಸಕ ಗಂಗಾಧರ್ ಹಲ್ಲೆ ನಡೆಸಿದ್ದಾರೆ. ಕೇಳಿದ ತರಗತಿ ಕೊಟ್ಟಿಲ್ಲವೆಂದು ಹಲ್ಲೆ ನಡೆಸಿದ್ದಾರೆ ಎಂದು ಆರೋಪ ಮಾಡಲಾಗಿದೆ.

ಎಲಿಜೆಬಲ್ ಇಲ್ಲ ಎಂದು ತರಗತಿ ನೀಡದೆ ಇದ್ದಿದ್ದಕ್ಕೆ ಗಲಾಟೆ ಪ್ರಾರಂಭವಾಗಿದೆ. ಈ ವೇಳೆ ಪ್ರಿನ್ಸಿಪಾಲ್ ಮೇಲೆ‌ ಉಪನ್ಯಾಸಕ ಗಂಗಾಧರ್ ಹಲ್ಲೆ ನಡೆಸಿದ್ದಾರೆ. ಸ್ಥಳಕ್ಕೆ ತುಮಕೂರಿನ ತಿಲಕ್ ಪಾರ್ಕ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.