ರಾಮ ಮಂದಿರ ಉದ್ಘಾಟನೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದನ್ನು ಖಂಡಿಸಿ ರಾಯಚೂರಿನ ಅಂಬೇಡ್ಕರ್ ವೃತ್ತದಲ್ಲಿ ಸಿಪಿಐಎಂಎಲ್ ರೆಡ್ ಸ್ಟಾರ್‌ನಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು. ಪಕ್ಷದ ಜಿಲ್ಲಾಧ್ಯಕ್ಷ ಜಿ.ಅಮರೇಶ, ಜಿಲ್ಲಾ ಕಾರ್ಯದರ್ಶಿ ಎಂ.ಡಿ.ಅಮೀರ ಅಲಿ, ಪದಾಕಾರಿಗಳಾದ ಚಿನ್ನಪ್ಪ ಕೊಟ್ರಕಿ, ಎಂ.ಗಂಗಾಧರ, ಆರ್.ಹುಚ್ಚರೆಡ್ಡಿ, ಮಲ್ಲಯ್ಯ ಕಟ್ಟಿಮನಿ, ಸೈಯದ್ ಅಬ್ಬಾಸ್ ಅಲಿ, ಜಿ.ಅಡವಿರಾವ್, ಅಜೀಜ್ ಜಾಗೀರದಾರ್ ಇದ್ದರು. 
ಜಿಲ್ಲೆ

ಧರ್ಮದ ಪರ ಪ್ರಧಾನಿ ವಕಾಲತ್ತು ಸರಿಯಲ್ಲ

ರಾಯಚೂರು: ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿರುವುದನ್ನು ಖಂಡಿಸಿ ಸ್ಥಳೀಯ ಅಂಬೇಡ್ಕರ್ ವೃತ್ತದಲ್ಲಿ ಸಿಪಿಐಎಂಎಲ್ ರೆಡ್ ಸ್ಟಾರ್‌ನಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ದೇಶ ಜಾತ್ಯಾತೀತ ಮತ್ತು ಸಮಾಜವಾದಿ ಆಶಯವನ್ನು ಹೊಂದಿದ್ದು, ದೇಶದ ಅಭಿವೃದ್ಧಿಗೆ ಪೂರಕವಾಗಿ ಮತ್ತು ಸಂವಿಧಾನಾತ್ಮಕವಾಗಿ ಕಾರ್ಯನಿರ್ವಹಿಸಬೇಕಾದ ಸರ್ಕಾರಗಳು ಒಂದು ಧರ್ಮದ ಪರ ವಕಾಲತ್ತು ವಹಿಸುತ್ತಿರುವುದನ್ನು ಖಂಡಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಜಿ.ಅಮರೇಶ ಮಾತನಾಡಿ, ಮೋದಿ ಸರ್ಕಾರ ಅಕಾರಕ್ಕೆ ಬಂದಾಗಿನಿಂದ ರೈತ, ಕಾರ್ಮಿಕ ಮತ್ತು ದಲಿತ ವಿರೋ ನೀತಿಗಳನ್ನು ಜಾರಿ ಮಾಡುತ್ತಾ ಬಂದಿದೆ. ದೇಶದ ಅಭಿವೃದ್ಧಿಗೆ ಮಾರಕವಾದ ನೀತಿಗಳನ್ನು ಜಾರಿಗೆ ತರುವ ಮೂಲಕ ಬಂಡವಾಳಿಗರಿಗೆ ಅನುಕೂಲ ಕಲ್ಪಿಸಲು ಸೇವಾ ವಲಯಗಳನ್ನು ಖಾಸಗೀಕರಣ ಗೊಳಿಸಲಾಗುತ್ತಿದೆ.
ದೇಶಾದ್ಯಂತ ನಿರುದ್ಯೋಗ, ಹಸಿವು, ಬಡತನ, ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಜನರ ನೆರವಿಗೆ ಬಾರದ ಪ್ರಧಾನಿ ಜನರಿಂದ ಸಂಗ್ರಹಿಸಿದ ಹಣದಿಂದ ಮಂದಿರ ಕಟ್ಟಿ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿದ್ದಾರೆ.
ರಾಜ್ಯ ಸರ್ಕಾರ ಅಕಾರಕ್ಕೆ ಬಂದ ಮೇಲೆ ಗ್ಯಾರಂಟಿಗಳ ಜಾತಿಯಲ್ಲಿ ಮಗ್ನವಾಗಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಕಾಂತರಾಜ ವರದಿಯನ್ನು ಬಿಡುಗಡೆ ಮಾಡದೆ ದಲಿತ ವಿರೋ ನೀತಿ ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಂ.ಡಿ.ಅಮೀರ ಅಲಿ, ಪದಾಕಾರಿಗಳಾದ ಚಿನ್ನಪ್ಪ ಕೊಟ್ರಕಿ, ಎಂ.ಗಂಗಾಧರ, ಆರ್.ಹುಚ್ಚರೆಡ್ಡಿ, ಮಲ್ಲಯ್ಯ ಕಟ್ಟಿಮನಿ, ಸೈಯದ್ ಅಬ್ಬಾಸ್ ಅಲಿ, ಜಿ.ಅಡವಿರಾವ್, ಅಜೀಜ್ ಜಾಗೀರದಾರ್, ಆದಿ ನಗನೂರು, ಸಂತೋಷ ದಿನ್ನಿ, ತಿಪ್ಪರಾಜ, ವೆಂಕಟೇಶ ನಾಯಕ, ಯಲ್ಲಪ್ಪ, ಗಿರಿಲಿಂಗಸ್ವಾಮಿ ಪಾಲ್ಗೊಂಡಿದ್ದರು.