ಅರಸೀಕೆರೆಯ ವಿವೇಕಾನಂದ ಬಿ.ಇಡಿ ಕಾಲೇಜು ಆವರಣದಲ್ಲಿ ಯೋಗ ಚಟುವಟಿಕೆಯಲ್ಲಿ ತೊಡಗಿರುವ ವಿದ್ಯಾರ್ಥಿಗಳು. 
ಜಿಲ್ಲೆ

ಆರೋಗ್ಯ ರಕ್ಷಣೆ ಮನಗಂಡು ಪ್ರಧಾನಿ ಹಸಿರು ನಿಶಾನೆ

ಅರಸೀಕೆರೆ: ದೈಹಿಕ ಹಾಗೂ ಮಾನಸಿಕ ಸ್ವಾಸ್ಥ್ಯ ಕಾಪಾಡಿಕೊಳ್ಳಲು ಯೋಗ ನೆರವಾಗಲಿದೆ ಎಂದು ಜ್ಞಾನಶ್ರೀ ಪಿಯು ಕಾಲೇಜಿನ ಆಡಳಿತಾಧಿಕಾರಿ ಅರುಣ್ ಕುಮಾರ್ ಹೇಳಿದರು.

ವಿಶ್ವ ಯೋಗ ದಿನದ ಪ್ರಯುಕ್ತ ಕನ್ನಡದ ನಂ.1 ಪತ್ರಿಕೆ ವಿಜಯವಾಣಿ ಹಾಗೂ ಜ್ಞಾನಶ್ರೀ ಪಿಯು ಕಾಲೇಜಿನ ವತಿಯಿಂದ ವಿವೇಕಾನಂದ ಬಿ.ಇಡಿ. ಕಾಲೇಜು ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಯೋಗ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಯೋಗ ಎನ್ನುವ ಶಬ್ದಕ್ಕೆ ವಿಶೇಷ ಮಹತ್ವವಿದೆ ಎನ್ನುವುದನ್ನು ಮರೆಯಬಾರದು. ದೇಶದ ಜನರ ಆರೋಗ್ಯದ ಬಗೆಗಿನ ಕಾಳಜಿಯನ್ನು ಮನಗಂಡ ಪ್ರಧಾನಿ ನರೇಂದ್ರ ಮೋದಿ ಕಳೆದ ಒಂಬತ್ತು ವರ್ಷದ ಹಿಂದೆ ಐತಿಹಾಸಿಕ ಆರೋಗ್ಯ ರಕ್ಷಣೆ ಕಾರ್ಯಕ್ಕೆ ಹಸಿರು ನಿಶಾನೆ ತೋರಿದ್ದಾರೆ. ಇದೀಗ ವಿಶ್ವದ ಉದ್ದಗಲಕ್ಕೂ ಜೂ.21ರಂದು ಯೋಗ ದಿನದ ಅಂಗವಾಗಿ ಕೋಟಿ ಕೋಟಿ ಜನರು ಮನಸ್ಸು ಮತ್ತು ಶರೀರ ಒಗ್ಗೂಡಿಸಿ ಯೋಗಾಭ್ಯಾಸ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು ಪ್ರತಿನಿತ್ಯ ತಪ್ಪದೇ ಯೋಗಭ್ಯಾಸ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಪ್ರಾಂಶುಪಾಲ ತೀರ್ಥ ಪ್ರಸಾದ್, ಉಪನ್ಯಾಸಕರಾದ ಚೇತನ್, ಮಂಜುನಾಥ್, ಯತೀಶ್, ಮೋಕ್ಷಿತ್, ಅರುಣ್, ಅಭಿಷೇಕ್, ದೈಹಿಕ ಶಿಕ್ಷಣ ಶಿಕ್ಷಕ ರಾಜೇಶ್, ಅರ್ಪಿತಾ, ಅನಿಲ್, ಫರಿದಾಬಾನು ಇನ್ನಿತರರು ಹಾಜರಿದ್ದರು.

ಪ್ರಶಂಸೆ: ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಸಹಯೋಗದಲ್ಲಿ ರಾಜ್ಯವ್ಯಾಪಿ ಯೋಗ ಆಂದೋಲನ ನಡೆಯುತ್ತಿರುವುದು ಹೆಮ್ಮೆಯ ಸಂಗತಿ. ಪಿಯುಸಿ, ನೀಟ್ ಸೇರಿದಂತೆ ಹಲವು ವಿಭಾಗದಲ್ಲಿ ಅತ್ಯುತ್ತಮ ಫಲಿತಾಂಶ ಹೊಂದಿರುವ ಕಾಲೇಜು ಪತ್ರಿಕೆ ಜತೆ ನಿರಂತರ ಸಹಯೋಗ ಹೊಂದಲಿದೆ ಎಂದು ಪ್ರಶಂಸಿಸಿದರು.