ಕಂಪ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು. 
ಜಿಲ್ಲೆ

ಪ್ರ-ದ್ವಿ ಸ್ಥಾನಗಳಿಸಿದರೆ ಜಿಲ್ಲಾ ಮಟ್ಟಕ್ಕೆ ಆಯ್ಕೆ

Kopala - Desk - Eraveni

ಕಂಪ್ಲಿ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಚುನಾವಣಾ ಸಾಕ್ಷರತಾ ಸಮಿತಿಯಿಂದ ರಾಷ್ಟ್ರೀಯ ಮತದಾರರ ದಿನಾಚರಣೆ ನಿಮಿತ್ತ ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯುವ ಮತದಾರರ ಪಾತ್ರ’ ವಿಷಯ ಕುರಿತು ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆ ಶುಕ್ರವಾರ ನಡೆಯಿತು.

40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸಮಿತಿ ಸಂಚಾಲಕಿ ಟಿ.ಎಂ.ಆರ್.ರಾಜ್ಮಾ ಮಾತನಾಡಿ, ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಸ್ಥಾನಗಳಿಸಿದ ವಿದ್ಯಾರ್ಥಿಗಳನ್ನು ಜಿಲ್ಲಾ ಮಟ್ಟದ ಅಂತರ್ ಕಾಲೇಜು ಪ್ರಬಂಧ ಸ್ಪರ್ಧೆಗೆ ಆಯ್ಕೆ ಮಾಡಲಾಗುವುದು ಎಂದರು.

ಪ್ರಾಚಾರ್ಯ ಡಾ.ಚಂದ್ರಶೇಖರ್ ವಿ.ಬಿಳೇಗುಡ್ಡ, ಸಹಾಯಕ ಪಾಧ್ಯಾಪಕರಾದ ಡಾ.ಕೆ.ಮಹೇಶ, ಜಿ.ಎಂ.ಮಮತಾ, ಎಂ.ಪಿ.ಬಾಲಾಜಿ, ಗ್ರಂಥಪಾಲಕ ಎ.ಜಿ.ವೀರಭದ್ರಪ್ಪ, ಉಪನ್ಯಾಸಕರಾದ ಆನಂದ, ಭವಾನಿ ಇತರರಿದ್ದರು.