ಬೈಲಹೊಂಗಲ: ಎಲ್ಕೆಜಿ, ಯುಕೆಜಿ ಶಿಕ್ಷಣ ಮಕ್ಕಳ ಪ್ರಾಥಮಿಕ ವಿಭಾಗದ ಕಲಿಕೆಗೆ ಅಡಿಪಾಯವಾಗಲಿದೆ. ಚಟುವಟಿಕೆ ಆಧಾರಿತ ಗುಣಮಟ್ಟದಶಿಕ್ಷಣ ನೀಡುತ್ತಿರುವ ಆಡಳಿತ ಮಂಡಳಿ ಹಾಗೂ ಶಿಕರ ಕಾರ್ಯ ಶ್ಲಾನೀಯ ಎಂದು ನಿವೃತ್ತ ಪ್ರಾಚಾಯೆರ್ ಶೋಭಾವತಿ ದೇಸಾಯಿ ಹೇಳಿದರು.
ಪಟ್ಟಣದ ಎ.ವಿ.ಢಮ್ಮಣಗಿ ವಿಜನ್ ೌಂಡೇಷನ್ನ ಕಲ್ಪವೃ ಮಾದರಿ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಯುಕೆಜಿ ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು. ಪ್ರಾಚಾರ್ಯ ಡಾ.ಹನಮೇಶ ದುಡ್ಯಾಳ ಮಾತನಾಡಿ, ಶಾಲೆಯಲ್ಲಿ ರಾಷ್ಟ್ರೀಯ ಶಿಣ ನೀತಿ ಪ್ರಕಾರ ಮಕ್ಕಳ ಸರ್ವತೋಮುಖ ಅಭಿವೃದಿಟಛಿಗೆ ಆದ್ಯತೆ ನೀಡಲಾಗುತ್ತಿದೆ. ಮಕ್ಕಳ ಶೈಣಿಕ ಪ್ರಗತಿಗೆ ಪಾಲಕರು ನೀಡುತ್ತಿರುವ ಸಹಕಾರ ಸ್ಮರಣೀಯ ಎಂದರು.
ನರ್ಸರಿ ಹಾಗೂ ಎಲ್ಕೆಜಿ ವಿದ್ಯಾರ್ಥಿಗಳು ಸಾಂಸತಿಕ ಕಾರ್ಯಕ್ರಮ ನೀಡಿದರು. ಅಡುಗೆ ಸ್ಪರ್ಧೆಯಲ್ಲಿ ವಿಜೇತ ಪಾಲಕರಿಗೆ ಬಹುಮಾನ ವಿತರಿಸಲಾಯಿತು. ಸಂಯೋಜಕಿ ಸುಮತಿ ಜೋಶಿ ವಾರ್ಷಿಕ ವರದಿ ಮಂಡಿಸಿದರು. ಸಂಸ್ಥೆ ಅಧ್ಯೆ ಮಂಗಳಾ ಢಮ್ಮಣಗಿ, ಆಡಳಿತಾಧಿಕಾರಿ ರಾಜಶೇಖರ ಕೋತಂಬ್ರಿ ಇತರರಿದ್ದರು. ಆರಾಧ್ಯಾ ಸೋಮಣ್ಣವರ ಸ್ವಾಗತಿಸಿದರು. ಅಥರ್ವ ಇಂಚಲಮಠ, ಸಾಹಿತ್ಯಾ ಹಳ್ಳಿಕೇರಿಮಠ, ಧೀರಜ ಪಟ್ಟೇದ, ವೈಷ್ಣವಿ ಬಡಿಗೇರ ನಿರೂಪಿಸಿದರು. ಶರದ ಕುಲಕರ್ಣಿ ವಂದಿಸಿದರು.