ಜಿಲ್ಲೆ

ಹೆಚ್ಚು ಕ್ರೀಡಾ ಅಂಕ ಪಡೆದ ಪ್ರೈಡ್ ಪಿಯು ವಿದ್ಯಾರ್ಥಿಗಳು

ಹಾಸನ: ಇಲ್ಲಿನ ಪ್ರೈಡ್ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ತಾಲೂಕು ಮಟ್ಟದ ಕ್ರೀಡಾಕೂಟದ ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ ಹೆಚ್ಚು ಕ್ರೀಡಾ ಅಂಕ ಪಡೆಯುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ಬಾಲಕರ ವಿಭಾಗದಲ್ಲಿ 100 ಮೀ. ಓಟ ಪ್ರಥಮ, ಉದ್ದ ಜಿಗಿತ ಪ್ರಥಮ, 200 ಮೀ ಓಟ ಪ್ರಥಮ, ತ್ರಿಬಲ್ ಜಂಪ್ ಪ್ರಥಮ, 400 ಮೀ ಓಟ ಪ್ರಥಮ, ಎತ್ತರ ಜಿಗಿತ ದ್ವಿತೀಯ, 800 ಮೀ ಓಟ ತೃತೀಯ, ಥ್ರೋಬಾಲ್ ಪ್ರಥಮ, 1500 ಮೀ ಓಟ ದ್ವಿತೀಯ, ಖೋ ಖೋ ದ್ವಿತೀಯ, 3000 ಮೀ ಓಟ ಪ್ರಥಮ, ಕಬಡ್ಡಿ ದ್ವಿತೀಯ, 4*100 ಮೀ ರಿಲೆ ದ್ವಿತೀಯ, ವಾಲಿಬಾಲ್ ದ್ವಿತೀಯ, 4*400 ಮೀ ರಿಲೆ ಪ್ರಥಮ, ಟೆನ್ನಿಕಾಟ್ ದ್ವಿತೀಯ, ಜಾವಲಿನ್ ಪ್ರಥಮ ಸೇರಿದಂತೆ ಬಾಲಕರ ವಿಭಾಗದಲ್ಲಿ 82 ಪದಕ ಪಡೆದಿದ್ದಾರೆ.

ಬಾಲಕಿಯರ ವಿಭಾಗದಲ್ಲಿ 100 ಮೀ ಓಟದಲ್ಲಿ ದ್ವಿತೀಯ, ತೃತೀಯ, 4*400 ಮೀ ರಿಲೆಯಲ್ಲಿ ಪ್ರಥಮ, 200 ಮೀ ಓಟದಲ್ಲಿ ಪ್ರಥಮ, ದ್ವಿತೀಯ, ಉದ್ದ ಜಿಗಿತದಲ್ಲಿ ಪ್ರಥಮ, 400 ಮೀ ಓಟ ಪ್ರಥಮ, ತ್ರಿಬಲ್ ಜಂಪ್ ತೃತೀಯ, 800 ಮೀ. ಓಟದಲ್ಲಿ ಪ್ರಥಮ, ಎತ್ತರ ಜಿಗಿತ ಪ್ರಥಮ, 1500 ಮೀ ಓಟ ಪ್ರಥಮ ಹಾಗೂ ತೃತೀಯ, ಥ್ರೋಬಾಲ್‌ನಲ್ಲಿ ಪ್ರಥಮ, 3000 ಮೀ ಓಟ ಪ್ರಥಮ, ತೃತೀಯ, ಖೋ ಖೋ ಪ್ರಥಮ, 4*100 ಮೀ ರಿಲೆ ಪ್ರಥಮ, ಕಬ್ಬಡಿ ಪ್ರಥಮ ಸೇರಿದಂತೆ 55 ಪದಕ ಪಡೆದಿದ್ದಾರೆ.

ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ನರೇಶ, ಉಪಾಧ್ಯಕ್ಷ ಡಿ.ಎಸ್. ನಿತೀನ್, ಕಾರ್ಯದರ್ಶಿ ವಿ.ಆರ್.ನಂದೀಶ್, ಟ್ರಸ್ಟಿಗಳಾದ ಎಚ್.ಎಸ್.ರೋಪೇಶ್, ಶಶಿಕುಮಾರ್, ರಘು, ಹಾಗೂ ಪ್ರೈಡ್ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ನವೀನ್ ಕುಮಾರ್, ಪ್ರೈಡ್ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಜಯರಾಮ ಅಭಿನಂದನೆ ಸಲ್ಲಿಸಿದ್ದಾರೆ.