ಜಿಲ್ಲೆ

ಇಳಿಯಿತು ಗಿಡಗಳ ದರ, ಪರಿಸರ ಪ್ರೇಮಿಗಳು ಖುಷ್

Prashanth S Suvarna

ಉಳ್ಳಾಲ: ಏಕಾಏಕಿ ಹೆಚ್ಚಳವಾಗಿದ್ದ ಗಿಡಗಳ ದರ ಇಳಿಸಿ ಸರ್ಕಾರ ಆದೇಶ ಹೊರಡಿಸಿರುವುದರಿಂದ ಪರಿಸರಪ್ರೇಮಿಗಳು ಸಂತುಷ್ಟರಾಗಿದ್ದಾರೆ.

ಅರಣ್ಯ ಇಲಾಖೆಯಿಂದ ಒಂದು ರೂಪಾಯಿಗೆ ನೀಡಲಾಗುತ್ತಿದ್ದ ಗಿಡದ ದರ ಏಳು ರೂ, ಮೂರು ರೂಪಾಯಿಗೆ ನೀಡಲಾಗುತ್ತಿದ್ದ ಗಿಡದ ದರವನ್ನು 23 ರೂಪಾಯಿಗೆ ಏರಿಸಲಾಗಿತ್ತು. ಸರ್ಕಾರದ ಆದೇಶದಂತೆ ಪ್ರಸ್ತುತ ಅವಧಿಯಲ್ಲೇ ಹೊಸ ದರ ಜಾರಿಗೆ ತರಲಾಗಿತ್ತು. ಪರಿಣಾಮ ಈ ಮಳೆಗಾಲದಲ್ಲಿ ಗಿಡಗಳ ಮಾರಾಟ ತೀವ್ರ ಪ್ರಮಾಣದಲ್ಲಿ ಕುಸಿದಿತ್ತು. ಈ ಬಗ್ಗೆ ವಿಜಯವಾಣಿ ಜೂನ್ ತಿಂಗಳ 22ರ ಸಂಚಿಕೆಯಲ್ಲಿ ವಿಶೇಷ ವರದಿ ಪ್ರಕಟಿಸಿ ಸರ್ಕಾರವನ್ನು ಎಚ್ಚರಿಸುವ ಪ್ರಯತ್ನ ಮಾಡಿತ್ತು. ಇದರ ಲವಾಗಿ ಗಿಡಗಳ ದರ ಇಳಿಕೆಯಾಗಿದೆ. ಸರ್ಕಾರ ಒಂದು ರೂಪಾಯಿಯ ಗಿಡಕ್ಕೆ ಏಳು ರೂಪಾಯಿ ಮಾಡಿದ್ದರೆ, ಈಗ ನಾಲ್ಕು ರೂಪಾಯಿ ಕಡಿಮೆಗೊಳಿಸಿದೆ. ಮೂರು ರೂಪಾಯಿಯ ಗಿಡಕ್ಕೆ 23 ಮಾಡಿದ್ದ ಸರ್ಕಾರ ಈಗ ಆರು ರೂಪಾಯಿ ನಿಗದಿಪಡಿಸುವ ಮೂಲಕ 17ರೂಪಾಯಿ ಇಳಿಸಿದೆ. ವಿಜಯವಾಣಿ ವರದಿಯ ಬಳಿಕ ಗಿಡಗಳ ದರ ಇಳಿದಿರುವ ಬಗ್ಗೆ ಪರಿಸರ ಪ್ರೇಮಿ ಮಾಧವ ಉಳ್ಳಾಲ್ ಸಂತಸ ವ್ಯಕ್ತಪಡಿಸಿದ್ದಾರೆ.

ದರ ಏರಿಕೆಗಿದ್ದ ಕಾರಣಗಳು

8x12 ಗಿಡವೊಂದಕ್ಕೆ ಉತ್ಪಾದನಾ ವೆಚ್ಚ 39ರೂ. 20 ಪೈಸೆ ಆಗಿದ್ದು ಅದರಲ್ಲಿ ಶೇ.30 ದರ ಕಡಿತಗೊಳಿಸಿ 23 ನಿಗದಿಪಡಿಸಲಾಗಿತ್ತು. 6x9ಗಿಡಕ್ಕೆ 12ರೂಪಾಯಿ 88 ಪೈಸೆ ಖರ್ಚಾಗುತ್ತಿದ್ದು ಶೇ.50 ಕಡಿತಗೊಳಿಸಿ ಆರು ರೂಪಾಯಿ ದರ ನಿಗದಿಪಡಿಸಲಾಗಿತ್ತು. ಈ ವರ್ಷ 25 ಸಾವಿರ 8x12 ಹಾಗೂ 50 ಸಾವಿರ 6್ಠ9 ಗಿಡಗಳನ್ನು ಬೆಳೆಸಿ ನಷ್ಟದ ಹಾದಿಗೆ ಕಡಿವಾಣ ಹಾಕಲು ಸರ್ಕಾರ ಬಯಸಿತ್ತು. ಆದರೆ ದರ ಏರಿಕೆಯಿಂದ ಗಿಡಗಳ ಮಾರಾಟ ಕುಂಠಿತವಾದ ಕಾರಣ ಮತ್ತೆ ಪರಿಷ್ಕರಿಸಲಾಗಿದೆ ಎಂದು ಹೇಳಲಾಗಿದೆ.