ಮಾನ್ವಿ ಉಪತಹಸೀಲ್ದಾರ್ ಫಕ್ರುದ್ದೀನ್‌ಗೆ ಕರವೇ (ಜನಪರ ಬಣ) ಮನವಿ ಸಲ್ಲಿಸಿತು. ಪದಾಧಿಕಾರಿಗಳಾದ ಇರ್ಫಾನ್ ಧಣಿ, ಇಬ್ರಾಹಿಂ ಖುರೇಷಿ, ರಂಗನಾಥ ನಾಯಕ, ವಿಶ್ವನಾಥ್ ಪವಾರ, ಕೃಷ್ಣ ದಾನಿ, ಗಂಗಾಧರ ಪವಾರ, ಸಂಗನಗೌಡ, ಲಿಂಗಪ್ಪ, ರಂಗರಾಜ ಕುಲಕರ್ಣಿ ಇನ್ನಿತರರಿದ್ದರು. 
ಜಿಲ್ಲೆ

ಬೆಲೆ ನಷ್ಟ ಪರಿಹಾರ ಘೋಷಣೆ ಮಾಡಲಿ

ಮಾನ್ವಿ : ಸತತ ಮಳೆಯಿಂದ ವಿವಿಧ ಬೆಳೆಗಳು ಹಾಳಾಗಿದ್ದು , ರೈತರಿಗೆ ಬೆಳೆ ಪರಿಹಾರ ನೀಡಲು ಒತ್ತಾಯಿಸಿ ಕರವೇ (ಜನಪರ ಬಣ) ಪಟ್ಟಣದ ತಹಸಿಲ್ ಕಚೇರಿಯ ಉಪತಹಸೀಲ್ದಾರ್ ಫಕ್ರುದ್ದೀನ್‌ಗೆ ಮನವಿ ಸಲ್ಲಿಸಿದರು.

ಕರವೇ (ಜನಪರ ಬಣ) ಅಧ್ಯಕ್ಷ ಶ್ರೀಕಾಂತ ಪಾಟೀಲ್ ಗೂಳಿ ಮಾತನಾಡಿ, ಮಳೆಯಿಂದ ರೈತರು ತೀವ್ರ ನಷ್ಟ ಅನುಭವಿಸುವಂತಾಗಿದ್ದು, ಕಂದಾಯ ಇಲಾಖೆ ಹಾಗೂ ಕೃಷಿ ಇಲಾಖೆ ಜಂಟಿ ಸಮೀಕ್ಷೆ ನಡೆಸಿ ರೈತರಿಗೆ ಬೆಳೆನಷ್ಟ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಜಾಗೀರ ಪನ್ನೂರು, ಯಡಿವಾಳ, ನಲ್ಗಂದಿನ್ನಿ, ಚಿಕ್ಕಕೋಟ್ನೆಕಲ್, ದೇವಿಪುರ, ಖರಬದಿನ್ನಿ, ಮುದ್ದಂಗುಡಿ ಸೇರಿದಂತೆ ಇತರೆ ಗ್ರಾಮಗಳಲ್ಲಿ ಬೆಳೆಗಳು ಸಂಪೂರ್ಣ ಹಾಳಾಗಿವೆ. ಸರ್ಕಾರ ಕೂಡಲೇ ರೈತರಿಗೆ ಬೆಲೆ ನಷ್ಟ ಪರಿಹಾರ ಘೋಷಣೆ ಮಾಡಬೇಕು. ಕರವೇವತಿಯಿಂದ ಉಗ್ರವಾದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.