ಹುಬ್ಬಳ್ಳಿ: ಪ್ರಸ್ತುತ ವಿವಿಧ ಜೀವನಾವಶ್ಯಕ ವಸ್ತುಗಳ ದರಗಳು ವಿಪರೀತ ಏರಿಕೆಯಾಗಿದ್ದು, ಜನಸಾಮಾನ್ಯರು ಜೀವನ ನಿರ್ವಹಣೆಗೆ ಸಂಕಷ್ಟ ತಂದೊಡ್ಡಿದೆ. ಸರ್ಕಾರ ಕೂಡಲೇ ಬೆಲೆ ಏರಿಕೆಗೆ ಕಡಿವಾಣ ಹಾಕಿ ನೆಮ್ಮದಿಯ ಜೀವನಕ್ಕೆ ಅವಕಾಶ ನೀಡಬೇಕೆಂದು ಕೆಎಲ್ಇ ನಿರ್ದೇಶಕ ಶಂಕ್ರಣ್ಣ ಮುನವಳ್ಳಿ ಮನವಿ ಆಗ್ರಹಿಸಿದ್ದಾರೆ.
ಈಗಾಗಲೇ ಡೀಸೆಲ್, ಸಿಲಿಂಡರ್, ವಿದ್ಯುತ್ ದರ, ಹಾಲು, ಬಸ್ ದರ ಮತ್ತು ಸಂಪ್ರದಾಯದಂತೆ ಈ ವರ್ಷವೂ ಪಾಲಿಕೆಯವರು ಆಸ್ತಿಕರ ಹೆಚ್ಚಳ ಮಾಡಿ ಜನತೆಯನ್ನು ಮತ್ತಷ್ಟು ಕಷ್ಟಕ್ಕೆ ದೂಡಿದ್ದಾರೆ. ಈ ಸಾಲಿನ ಶೈಕ್ಷಣಿಕ ಅವಧಿಯಲ್ಲಿ ಶಿಕ್ಷಣ ಸಂಸ್ಥೆಗಳು ಕೂಡ ಶೇ. 10ರಿಂದ 15 ರಷ್ಟು ಶುಲ್ಕ ಹೆಚ್ಚಳ ಮಾಡುವ ತವಕದಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸಾಮಾನ್ಯ ಜನರು ಹೇಗೆ ಬದುಕಬೇಕು ಎಂಬ ಯ ಪ್ರಶ್ನೆ ಕಾಡುತ್ತಿದೆ.
ಆಯಾ ಇಲಾಖೆಗಳು ಮನಸೋ ಇಚ್ಛೆ ಹೀಗೆ ಪ್ರತಿ ವರ್ಷ ದರ ಏರಿಕೆ ಮಾಡುತ್ತಾ ಹೋದರೆ ಹೇಗೆ? ಈ ದರ ಏರಿಕೆ ತಡೆಗೆ ತಾರ್ಕಿಕ ಅಂತ್ಯ ಹಾಡುವ ಅನಿವಾರ್ಯತೆ ಒದಗಿ ಬಂದಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸರ್ಕಾರ ಯಾವುದೇ ಇರಲಿ. ಒಂದು ವೇಳೆ ಯಾವುದಾದರು ವಸ್ತುವಿನ ಬೆಲೆ ಹೆಚ್ಚಳ ಮಾಡಬೇಕಾದ ಅನಿವಾರ್ಯತೆ ಇದ್ದಲ್ಲಿ, ರಾಜ್ಯಾದ್ಯಂತ ವಾಣಿಜ್ಯೋದ್ಯಮ ಸಂಸ್ಥೆ ಹಾಗೂ ಸಂ&ಸಂಸ್ಥೆಗಳನ್ನು ಒಳಗೊಂಡ ತಜ್ಞರ ಸಮನ್ವಯ ಸಮಿತಿ ರಚಿಸಿಕೊಳ್ಳಬೇಕು. ದರ ಹೆಚ್ಚಳದಿಂದ ಜನಸಾಮಾನ್ಯರ ಮೇಲಾಗುವ ಪ್ರತಿಕೂಲ ಪರಿಣಾಮಗಳ ಬಗ್ಗೆ ಅವಲೋಕಿಸಬೇಕು.
ಇಂದು ಪ್ರತಿಯೊಂದು ರಾಜಕೀಯ ಪಗಳು ತಮ್ಮ ವೋಟ್ ಬ್ಯಾಂಕಿಗೋಸ್ಕರ ಮತದಾರರಿಗೆ ಇಲ್ಲಸಲ್ಲದ ಆಕರ್ಷಕ ಉಚಿತ ಯೋಜನೆಗಳನ್ನು ಘೋಷಿಸುತ್ತಿವೆ. ಇದರಿಂದ ಜನರು ಸ್ವಾವಲಂಬಿಗಳಾಗಿ ಬದುಕದೇ ಸೋಮಾರಿ ಜೀವನ ನಡೆಸುವುದಕ್ಕೆ ತಾವೇ ನಾಂದಿ ಹಾಡಿದಂತಾಗುತ್ತದೆ ಎಂದು ಟೀಕಿಸಿದ್ದಾರೆ.
ಒಂದು ವೇಳೆ ಉಚಿತ ಯೋಜನೆಗಳನ್ನು ಘೋಷಿಸುವುದಾದಲ್ಲಿ, ಉಚಿತ ಶಿಕ್ಷಣ ನೀಡಲಿ, ಆರೋಗ್ಯ ಸೇವೆ ನೀಡಲಿ, ಸ್ವಾವಲಂಬಿ ಜೀವನ ನಡೆಸುವಂತಹ ಜನರಿಗೆ ಉದ್ಯೋಗ ಮಾಡಲು ಬಡ್ಡಿ ರಹಿತ ಬ್ಯಾಂಕಿನ ಸಾಲ ನೀಡಲಿ, ಕಡು ಬಡವರಿಗೆ ಉಚಿತ ಮನೆ ನಿರ್ಮಿಸಲಿ, ನಿರ್ಗತಿಕ ವಯೋವೃದ್ಧರಿಗೆ ಉಚಿತ ವದ್ಧಾಶ್ರಮ ನಿರ್ಮಿಸುವಂತಹ ಯೋಜನೆಗಳು ಜಾರಿಗೆ ತರಲಿ ಎಂದು ಅವರು ಸಲಹೆ ನೀಡಿದ್ದಾರೆ.
ಸರ್ಕಾರ ಯಾವುದೇ ಉಚಿತ ಸೌಲಭ್ಯಗಳನ್ನು ನೀಡುವುದು ಅನಿವಾರ್ಯ ಇದ್ದಲ್ಲಿ ಮತ್ತು ಅವಶ್ಯಕವಿದ್ದಲ್ಲಿ ಮಾತ್ರ ನೀಡಲಿ ಎಂದೂ ಶಂಕ್ರಣ್ಣ ಮುನವಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.