ಯರಗಟ್ಟಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಪಿಎಸ್‌ಐ ಶಾಂತಾ ಹಳ್ಳಿ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ. ಬಸಣ್ಣವರ, ಶಾಂತವ್ವ ಕಂಕಣವಾಡಿ ಇತರರಿದ್ದಾರೆ. 
ಜಿಲ್ಲೆ

ಅಪರಾಧ ತಡೆಗೆ ಮುಂಜಾಗ್ರತೆ ಅಗತ್ಯ

Vijayapura - Desk - Gurappa Lokuri

ರಬಕವಿ/ಬನಹಟ್ಟಿ: ಅಪರಾಧಿಗಳಿಗೆ ಪ್ರಚೋದನೆಯಾಗುವಂತೆ ಮೈಮೇಲೆ ಒಡವೆ ಧರಿಸಿ ತಿರುಗಾಡುವುದನ್ನು ಆದಷ್ಟು ಕಡಿಮೆ ಮಾಡಿ ಎಂದು ಪಿಎಸ್‌ಐ ಶಾಂತಾ ಹಳ್ಳಿ ಹೇಳಿದರು.

ಯರಗಟ್ಟಿ ಸರ್ಕಾರಿ ಶಾಲೆಯಲ್ಲಿ ಇತ್ತೀಚೆಗೆ ಬನಹಟ್ಟಿ ಪೊಲೀಸ್ ಠಾಣೆ ವತಿಯಿಂದ ಆಯೋಜಿಸಿದ್ದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ ಅವರು, ಮನೆಯಲ್ಲಿ ಒಂಟಿಯಾಗಿರುವಾಗ ಮುಂಬಾಗಿಲು ಹಾಕಿಕೊಂಡು ಕೆಲಸ ಮಾಡಬೇಕು. ಬೆಲ್‌ಮಾಡಿದಾಗ ತಕ್ಷಣ ಬಾಗಿಲು ತೆರೆಯದೆ ಕಿಟಕಿಯಿಂದ ನೋಡಿ ಖಚಿತಪಡಿಸಿಕೊಳ್ಳಬೇಕು. ಈ ರೀತಿ ಮುಂಜಾಗ್ರತೆ ವಹಿಸಿದರೆ ಅಪರಧ ಪ್ರಕರಣ ತಡೆಯಲು ಸಾಧ್ಯ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ. ಬಸಣ್ಣವರ ಮಾತನಾಡಿ, ಉತ್ತಮ ಹವ್ಯಾಸಗಳೊಂದಿಗೆ ಕಲಿಕಾ ಸಾಮರ್ಥ್ಯ ಹೆಚ್ಚಿಸಿಕೊಳ್ಳುವಲ್ಲಿ ವಿದ್ಯಾರ್ಥಿಗಳು ಶಿಕ್ಷಕರ ಮಾರ್ಗದರ್ಶನ ಪಡೆದುಕೊಳ್ಳಬೇಕು ಎಂದರು.

ಶಾಂತವ್ವ ಕಂಕಣವಾಡಿ ಅಧ್ಯಕ್ಷತೆ ವಹಿಸಿದ್ದರು. ಎಂ.ಐ. ಚಿತ್ರಭಾನುಕೋಟಿ, ಉತ್ತಮಕುಮಾರ ಮಗದುಮ, ಕಲ್ಯಾಣಿ, ಕಿರಣ ಲೋಕಾಪೂರ, ಐ.ಡಿ. ನದ್ಾ, ಸಿ.ಆರ್.ಪಿ. ಕೊಕಟನೂರ, ಎಸ್‌ಡಿಎಂಸಿ ಅಧ್ಯಕ್ಷ ಮಹಾದೇವ ಸನದಿ. ಎಸ್.ಎಚ್. ರಾಮದುರ್ಗ, ಪಿ.ಬಿ. ಮೆಕ್ಕಳಕಿ ಮತ್ತಿತರರಿದ್ದರು.