ಜಿಲ್ಲೆ

ಮುನ್ನೆಚ್ಚರಿಕೆ ಕ್ರಮದಿಂದ ರೋಗ ದೂರ

ತುಮಕೂರು ಡೆಸ್ಕ್

ಬುಕ್ಕಾಪಟ್ಟಣ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಮಾಲತಿ ಸಲಹೆ

ಬುಕ್ಕಾಪಟ್ಟಣ: ರೋಗ ಬಂದಾಗ ಚಿಕಿತ್ಸೆ ಪಡೆಯುವುದಕ್ಕಿಂತ ರೋಗ ಬರುವುದಕ್ಕೆ ಮುಂಚಿತವಾಗಿ ಎಚ್ಚರಿಕೆ ವಹಿಸುವುದು ಉತ್ತಮ ಎಂದು ಬುಕ್ಕಾಪಟ್ಟಣ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಮಾಲತಿ ಅಭಿಪ್ರಾಯಪಟ್ಟರು.

ಬುಕ್ಕಾಪಟ್ಟಣದ ಗ್ರಾಪಂ ಸಭಾಂಗಣದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಡೆಂ ವಿರೋಧಿ ಮಾಸಾಚರಣೆಯಲ್ಲಿ ಮಾತನಾಡಿ, ಡೆಂ ಹಾಗೂ ಚಿಕೂನ್​ ಗುನ್ಯಾ ವೈರಾಣಗಳಿಂದ ಬರುವ ಕಾಯಿಲೆಗಳಾಗಿದ್ದು, ಸೋಂಕು ತಗುಲಿದ ಈಡಿಸ್​ ಈಜಿಪ್ಟೆ ೃಎಂಬ ಸೊಳ್ಳೆಯ ಕಡಿತದಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಈ ಸೊಳ್ಳೆಯು ತನ್ನ ಜೀವನ ಚಕ್ರವನ್ನು ಪೂರ್ಣಗೊಳಿಸಲು ಸುಮಾರು 8ರಿಂದ 10 ದಿನಗಳು ತೆಗೆದುಕೊಳ್ಳುತ್ತದೆ. ಪ್ಲಾಸ್ಟಿಕ್​ ಕಪ್ಪುಗಳು, ಏರ್​ ಕೂಲರ್​ಗಳು, ಹೂವಿನ ಕುಂಡಗಳು, ತಟ್ಟೆಗಳಲ್ಲಿ ಉತ್ಪತ್ತಿಯಾಗುತ್ತವೆ. ಸಾರ್ವಜನಿಕರು ತಮ್ಮ ಮನೆಯ ಸುತ್ತಮುತ್ತ ಸ್ವಚ್ಛತೆಯನ್ನು ಕಾಪಾಡುವದರೊಂದಿಗೆ ಮನೆಯ ಅಕ್ಕಪಕ್ಕದಲ್ಲಿ ಪ್ಲಾಸ್ಟಿಕ್​ ಬಾಟಲಿಗಳು ತೆಂಗಿನಕಾಯಿ ಚಿಪ್ಪುಗಳು ಸೇರಿ ಇನ್ನಿತರ ತ್ಯಾಜ್ಯ ವಸ್ತುಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಸ್ವಚ್ಛತೆ ನೈರ್ಮಲ್ಯವನ್ನು ಕಾಪಾಡುವ ಮೂಲಕ ರೋಗ ಹರಡದಂತೆ ಕ್ರಮವಹಿಸಬೇಕು ಎಂದರು.

ಬುಕ್ಕಾಪಟ್ಟಣ ಗ್ರಾಪಂ ಅಧ್ಯಕ್ಷ ಮುಜಾಯಿದ್​ ಪಿಡಿಒ ಶಿವಶಂಕರ್​ ಸದಸ್ಯರಾದ ಗಂಗರಾಜು, ಗುರುರಾಜು, ಆರೋಗ್ಯ ನಿರೀಕ್ಷಣಾಧಿಕಾರಿ ಹರೀಶ್​, ಗ್ರಂಥಪಾಲಕ ಮುದ್ದುರಾಜು, ಆಶಾ ಕಾರ್ಯಕರ್ತೆಯರು, ಸಾರ್ವಜನಿಕರು ಇದ್ದರು.