ಜಿಲ್ಲೆ

ಬಾಲ್ಯವಿವಾಹ ತಡೆಗೆ ಮುಂದಾಗಲಿ

ಪ್ರಶಾಂತ ಹೂಗಾರ

ರಾಯಬಾಗ: ಸಾಮಾಜಿಕ ಪಿಡುಗಾಗಿರುವ ಬಾಲ್ಯ ವಿವಾಹ ಮುಕ್ತ ಭಾರತ ನಿರ್ಮಿಸಲು ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಜಗದೀಶ ಬಿಸೆರೊಟ್ಟಿ ಹೇಳಿದರು.

ಪಟ್ಟಣದ ಝೇಂಡಾ ಕಟ್ಟೆ ಬಳಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ತಾಲೂಕು ಆಡಳಿತದಿಂದ ಬುಧವಾರ ಹಮ್ಮಿಕೊಂಡಿದ್ದ ಬಾಲ್ಯವಿವಾಹ ಮುಕ್ತ ಭಾರತ ಜಾಗೃತಿ ಆಂದೋಲನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರಧಾನ ದಿವಾಣಿ ನ್ಯಾಯಾಧೀಶೆ ಪ್ರಿಯಾ ಭಟ್ಟಡ, ವಕೀಲರ ಸಂಘದ ಅಧ್ಯಕ್ಷ ಪಿ.ಎಂ.ದರೂರ, ಕಾರ್ಯದರ್ಶಿ ಎಸ್.ಬಿ.ಬಿರಾದಾರಪಾಟೀಲ, ಸಹ ಕಾರ್ಯದರ್ಶಿ ಬಿ.ಕೆ.ಶಿಂಗಾಡೆ, ಖಜಾಂಚಿ ಯು.ಎನ್.ಉಮ್ರಾಣಿ, ತಹಸೀಲ್ದಾರ್ ಸುರೇಶ ಮುಂಜೆ, ಬಿಇಒ ಬಸವರಾಜಪ್ಪ ಆರ್, ಸಿಪಿಐ ಬಿ.ಎಸ್.ಮಂಟೂರ, ದೈಹಿಕ ಪರಿವೀಕ್ಷಕ ಎಂ.ಪಿ.ಜಿರಗ್ಯಾಳ, ವಕೀಲರಾದ ಎ.ಬಿ.ಪಡೋಲ್ಕರ, ಕೆ.ಆರ್.ಕೋಟಿವಾಲೆ, ಕೆ.ಎಂ.ಮದಳಿ, ಪಿ.ಆರ್.ಖಡಟ್ಟಿ, ಕೆ.ಎಲ್.ಕೆರೂರೆ, ಮುಜಿಬ ಸಯ್ಯದ್ ಇತರರಿದ್ದರು.