ಜಿಲ್ಲೆ

ಪ್ರತಿಷ್ಠಿತ ವಾರ್ಡಿಗೆ ಬೇಕು ಅಭಿವೃದ್ಧಿಯ ಸ್ಪರ್ಶ!

ಗಂಗಾಧರ ಬಿ ವಿ

* ಕೊಳಚೆ ಸಮಸ್ಯೆಗೆ ಮುಕ್ತಿ ನೀಡಲು ಸಿಸಿ ಚರಂಡಿ ನಿರ್ಮಾಣ

* ಅರ್ಧಂಬರ್ಧ ಯುಜಿಡಿ ಕಾಮಗಾರಿಯಿಂದ ಧೂಳು

ಚೇತನ್ ಚಕ್ಕೆರೆ ಬಿಡದಿ

ಬಿಡದಿ ಪುರಸಭಾ ವ್ಯಾಪ್ತಿಯ ಪ್ರತಿಷ್ಠಿತ ವಾರ್ಡ್‌ಗಳಲ್ಲಿ ಒಂದಾದ 9ನೇ ವಾರ್ಡ್ ಪಟ್ಟಣದ ಹೃದಯ ಭಾಗದಲ್ಲಿದ್ದು, ಕೆಲವು ಮೂಲಸೌಕರ್ಯ ಕೊರತೆಯ ನಡುವೆಯೂ ಅಭಿವೃದ್ಧಿಯತ್ತ ಹೆಜ್ಜೆಹಾಕುತ್ತಿದೆ.

ಹೌದು. 9ನೇ ವಾರ್ಡ್ ಪ್ರತಿಷ್ಠಿತ ವಾರ್ಡ್ ಆಗಿದ್ದು, ಹಲವು ಬಡಾವಣೆ ಹೊಂದಿದೆ. ಪಟ್ಟಣದ ಬಿಜಿಎಸ್ ವೃತ್ತದಿಂದ ಹಿಡಿದು ನಲ್ಲಿಗುಡ್ಡೆ ಕೆರೆ ರಸ್ತೆವರೆಗೂ ವಿಸ್ತರಿಸಿದ್ದು, ಮಾಜಿ ಶಾಸಕ ಮಂಜುನಾಥ್ ಇದೇ ವಾರ್ಡ್‌ನಲ್ಲಿ ವಾಸಿಸುತ್ತಿದ್ದಾರೆ.

ಬಿಜಿಎಸ್ ವೃತ್ತದಿಂದ ನಲ್ಲಿಗುಡ್ಡೆ ಕೆರೆಗೆ ಹೋಗುವ ಪ್ರಮುಖ ರಸ್ತೆಯ ಪಕ್ಕದಲ್ಲೆ ಚರಂಡಿ ಇದ್ದು, ಆದರೆ, ಸರಿಯಾದ ನಿರ್ವಹಣೆ ಇಲ್ಲದೆ ಚರಂಡಿ ತ್ಯಾಜ್ಯ ರಸ್ತೆಗೆ ನುಗ್ಗುತ್ತಿದ್ದು, ಇದು ದೊಡ್ಡ ಸಮಸ್ಯೆಯಾಗಿದೆ. ಈಗ ಅದಕ್ಕೆ ಮುಕ್ತಿ ನೀಡಲು ಮುಂದಾಗಿ ಸಿಸಿ ಚರಂಡಿ ನಿರ್ಮಾಣದ ಕಾಮಗಾರಿ ಪ್ರಗತಿಯಲ್ಲಿದೆ. ಕೆಲವು ಕಡೆ ಕಸದ ಸಮಸ್ಯೆ ಕಾಣಿಸುತ್ತಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕುವುದು ನಿಂತ್ತಿಲ್ಲ.

ಯುಜಿಡಿ ಕಾಮಗಾರಿ ಪ್ರಾರಂ‘ವಾಗಿ ವರ್ಷಗಳೇ ಕಳೆಯುತ್ತಿದ್ದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಸುಸಜ್ಜಿತ ಕಾಂಕ್ರೀಟ್ ರಸ್ತೆ ಕಾಮಗಾರಿ ನೆಪದಲ್ಲಿ ಅಲ್ಲಲ್ಲಿ ಅಗೆದು ಕಾಮಗಾರಿ ಮುಗಿದ ಮೇಲೆ ಕಾಂಕ್ರೀಟ್ ಹಾಕದೆ ಹಾಗೇ ಬಿಟ್ಟಿದ್ದಾರೆ. ಕೆಲವು ಕಡೆ ಮಣ್ಣಿನ ರಸ್ತೆಗಳಿದ್ದು, ಅದನ್ನೂ ಅಗೆದು ಬಿಟ್ಟಿರುವುದರಿಂದ ಧೂಳಿನ ಸಮಸ್ಯೆ ಎದುರಾಗಿದೆ.

ಆಗಬೇಕಾದ ಕಾಮಗಾರಿಗಳು

* ಅರ್ಧಂಬರ್ಧ ಆಗಿರುವ ಯುಜಿಡಿ ಕಾಮಗಾರಿ ಪೂರ್ಣಗೊಳ್ಳಬೇಕಿದೆ * ಹಲವು ಬಡಾವಣೆಗಳಿಗೆ ವಾಟರ್‌ಲೈನ್ ಹಾಗೂ ಗ್ಯಾಸ್‌ಲೈನ್ ಅಳವಡಿಕೆ ಆಗಿಲ್ಲ * ಹಲವೆಡೆ ವಿದ್ಯುತ್ ದೀಪಗಳ ಅಳವಡಿಸಬೇಕು * ಕೆಲವು ರಸ್ತೆಗಳು ಕಾಂಕ್ರೀಟ್ ಕಾಣಬೇಕಿದೆ * ಕೆಲವೆಡೆ ಸಿಸಿ ಚರಂಡಿ ನಿರ್ಮಾಣವಾಗಿಲ್ಲ ಜನಸಂಖ್ಯೆ- 2500, ಮತದಾರರು- 1800 ವಾರ್ಡ್ ವ್ಯಾಪ್ತಿ: ಶಂಕರಪ್ಪ ಬಡಾವಣೆ, ಅನುಶೂಯಮ್ಮ ಬಡಾವಣೆ, ಜಗದೀಶ್ ಬಡಾವಣೆ, ಕೆ.ಎಚ್.ಬಿ ಬಡಾವಣೆ

ಲೋಹೀತ್ ಕುಮಾರ್, 9 ನೇ ವಾರ್ಡ್ ಸದಸ್ಯ

ಇಲ್ಲಿ ಹಲವು ಬಡಾವಣೆಗಳಿದ್ದು, ಸಮಗ್ರ ಅಭಿವೃದ್ಧಿ ಮಾಡಲಾಗುತ್ತಿದೆ. ಯುಜಿಡಿ ಕಾಮಗಾರಿ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಕಾಮಗಾರಿ ಪೂರ್ಣಗೊಳಿಸದೆ ಹಾಗೆ ಬಿಟ್ಟಿದ್ದಾರೆ. ಉಳಿದಂತೆ ಸುಸಜ್ಜಿತ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕಲಾಗುತಿತ್ತು. ಈ ಬಗ್ಗೆ ಗೋಡೆ ಬರಹ ಹಾಗೂ ಗಿಡಗಳನ್ನು ನೆಟ್ಟು ಅದನ್ನು ತಪ್ಪಿಸಲಾಗಿದೆ. ಮೂರು ಉದ್ಯಾನವನಗಳಿದ್ದು, ಎರಡು ಉದ್ಯಾನವನಗಳನ್ನು ಹೈಟೆಕ್ ಸ್ಪರ್ಶ ನೀಡಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಅಗತ್ಯ ಇರುವ ಕಡೆ ಹೈ ಮಾಸ್ಟ್ ಲೈಟ್‌ಗಳನ್ನು ಅಳವಡಿಕೆ ಮಾಡಲು ರೂಪರೇಷೆಗಳನ್ನು ಸಿದ್ಧಪಡಿಸಲಾಗಿದೆ.

ಮೊ.ನಂ.9945696668