ಜಿಲ್ಲೆ

೧೬ರಂದು ಶ್ರೀಕೃಷ್ಣ ಲೋಕ ಕಾರ್ಯಕ್ರಮ

Mangaluru - Nishantha Narayana

ಪುತ್ತೂರು: ಪರ್ಲಡ್ಕ ಶಿವಪೇಟೆಯ ವಿವೇಕಾನಂದ ಶಿಶುಮಂದಿರದ ೨೭ನೇ ವರ್ಷದ ಶ್ರೀಕೃಷ್ಣ ಲೋಕ ಕಾರ್ಯಕ್ರಮ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಹಯೋಗದಲ್ಲಿ ಆ.೧೬ರಂದು ಬೆಳಗ್ಗೆ ೮ರಿಂದ ನಡೆಯಲಿದೆ. ಭಜನಾ ಕಾರ್ಯಕ್ರಮ, ಬಾಲಕೃಷ್ಣನ ತೊಟ್ಟಿಲ ಸಂಭ್ರಮ, ಶೋಭಾಯಾತ್ರೆ, ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ ಅಧ್ಯಕ್ಷ ಮೋಹನ್ ಕೆ. ತಿಳಿಸಿದರು.

ಬೆಳಗ್ಗೆ ೮ಕ್ಕೆ ಭಜನೆ ಕಾರ್ಯಕ್ರಮ, ೯ಕ್ಕೆ ಶ್ರೀ ಬಾಲಕೃಷ್ಣನ ತೊಟ್ಟಿಲ ಸಂಭ್ರಮ ಸಡಗರ, ೯.೩೦ಕ್ಕೆ ವಿವೇಕಾನಂದ ಶಿಶುಮಂದಿರದ ಆವರಣದಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗಕ್ಕೆ ಶೋಭಾಯಾತ್ರೆ ನಡೆಯಲಿದೆ. ವಿವೇಕಾನಂದ ಶಿಶು ಮಂದಿರದ ಮಕ್ಕಳು ಸೇರಿದಂತೆ ೧,೨೦೦ಕ್ಕೂ ಅಽಕ ಪುಟಾಣಿಗಳು ಶ್ರೀಕೃಷ್ಣ ರಾಧೆಯರ ವೇಷ ಧರಿಸಿ ಭಾಗವಹಿಸಲಿದ್ದಾರೆ. ಭಜನಾ ತಂಡಗಳು ಮೆರವಣಿಗೆಯಲ್ಲಿ ಇರಲಿದ್ದು, ಮೆರವಣಿಗೆ ಮೆರಗು ಹೆಚ್ಚಿಸಲಿವೆ. ಶೋಭಾಯಾತ್ರೆ ದೇವಸ್ಥಾನದ ಮುಂಭಾಗಕ್ಕೆ ತಲುಪಿದ ಬಳಿಕ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ಟ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಅಗಲ್ಪಾಡಿಯ ಎಸ್‌ಎಪಿಎಚ್‌ಎಸ್‌ನ ಶಿಕ್ಷಕ ಹರಿನಾರಾಯಣ ಶಿರಂತಡ್ಕ ಅಧ್ಯಕ್ಷತೆ ವಹಿಸಲಿದ್ದಾರೆ. ಪುತ್ತೂರು ವಿವೇಕಾನಂದ ಮಹಾವಿದ್ಯಾಲಯ(ಸ್ವಾಯತ್ತ)ದ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಡೀನ್ ಡಾ.ವಿಜಯ ಸರಸ್ವತಿ ಬಿ. ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ ಗೌರವಾಧ್ಯಕ್ಷೆ ರಾಜೀ ಬಲರಾಮ್, ಉಪಾಧ್ಯಕ್ಷೆ ಮಾಲಿನಿ ಕಶ್ಯಪ್, ವಿವೇಕಾನಂದ ಶಿಶುಮಂದಿರದ ಆಡಳಿತ ಮಂಡಳಿ ಸಂಚಾಲಕ ಅಕ್ಷಯ ಕುಮಾರ್ ಬಿ.ಎಸ್., ಸದಸ್ಯ ಉಮೇಶ್ ಕುಮಾರ್ ಶಿಮ್ಲಡ್ಕ ಉಪಸ್ಥಿತರಿದ್ದರು.