ವಿಟ್ಲ: ದಕ್ಷಿಣ ಕನ್ನಡ ನೃತ್ಯ ಕಲಾವಿದರ ಒಕ್ಕೂಟ ವಾರ್ಷಿಕೋತ್ಸವ, ಕ್ರೀಡೋತ್ಸವ ಸಂಭ್ರಮ ಆ.೩ರಂದು ವಿಠ್ಠಲ್ ಜೆಸೀಸ್ ಆಂಗ್ಲ ಮಾಧ್ಯಮ ಶಾಲೆಯ ಪೇವಿಲಿಯನ್ ಹಾಲ್‌ನಲ್ಲಿ ನಡೆಯಲಿದೆ ಎಂದು ಒಕ್ಕೂಟ ಗೌರವಾಧ್ಯಕ್ಷ ರಾಜೇಶ್ ವಿಟ್ಲ ಹೇಳಿದರು.
ಒಕ್ಕೂಟ ಅಧ್ಯಕ್ಷ ಚಂದ್ರೋದಯ ಕುಲಾಲ್ ಮಾತನಾಡಿ, ಕಲಾವಿದರ ಭವಿಷ್ಯದ ಚಿಂತನೆಯನ್ನಿಟ್ಟುಕೊಂಡು ವಿಮೆ ಮಾಡುವ ಚಿಂತನೆಯಿದೆ. ಬೆಳಗ್ಗೆ ೯ ಗಂಟೆಗೆ ಕೃಷ್ಣಯ್ಯ ಕೆ. ವಿಟ್ಲ ಕಾರ್ಯಕ್ರಮ ಉದ್ಘಾಟಿಸಲಿದ್ದು, ಪಟ್ಟಣ ಪಂಚಾಯಿತಿ ಅಧ್ಯಕ್ಷ ಕರುಣಾಕರ ನಾಯ್ತೊಟ್ಟು ಭಾಗವಹಿಸಲಿದ್ದಾರೆ. ೨.೩೦ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಜಿ.ವಿ.ಗೌರವಾಧ್ಯಕ್ಷ ಅಜಿತ್ ಶೆಟ್ಟಿ ಅಮೈ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.
ಉಪಾಧ್ಯಕ್ಷ ಕಿರಣ್ ಮುರಳಿ, ಕಾರ್ಯದರ್ಶಿ ಮೋಹನ್ ಎಸ್., ಜತೆ ಕಾರ್ಯದರ್ಶಿ ಮಹೇಶ್ ಕುಲಾಲ್ ಉಪಸ್ಥಿತರಿದ್ದರು.