ಜಿಲ್ಲೆ

ನಾಳೆಯಿಂದ ಸಿಪಿಐ ಜಿಲ್ಲಾ ಸಮ್ಮೇಳನ

Mangaluru - Nishantha Narayana

ವಿಟ್ಲ: ಸಿಪಿಐ ದ.ಕ. ಮತ್ತು ಉಡುಪಿ ಜಿಲ್ಲಾ ಮಂಡಳಿ ೨೫ನೇ ಜಿಲ್ಲಾ ಸಮ್ಮೇಳನ ಜುಲೈ ೨೦ರಿಂದ ೨೨ರವರೆಗೆ ವಿಟ್ಲದಲ್ಲಿ ನಡೆಯಲಿದೆ ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಬಿ.ಶೇಖರ್ ಹೇಳಿದರು.

೨೦, ೨೧ರವರೆಗೆ ಒಕ್ಕೆತ್ತೂರು ರಾಯಲ್ ಹಾಲ್‌ನಲ್ಲಿ ಪ್ರತಿನಿಽ ಸಮ್ಮೇಳನ ನಡೆಯಲಿದ್ದು, ೨೨ರಂದು ಬೆಳಗ್ಗೆ ೧೦.೩೦ಕ್ಕೆ ವಿಟ್ಲ ನಾಡಕಚೇರಿಯಿಂದ ಮೆರವಣಿಗೆ ನಡೆಯಲಿದೆ. ೧೧ ಗಂಟೆಗೆ ಬಹಿರಂಗ ಸಭೆಯಲ್ಲಿ ಸ್ವಾಗತ ಸಮಿತಿ ಅಧ್ಯಕ್ಷ ಬಿ.ಎಂ.ಹಸೈನಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ವೈದ್ಯ ಡಾ.ಬಿ ಶ್ರೀನಿವಾಸ ಕಕ್ಕಿಲ್ಲಾಯ, ಸಿಪಿಐ ರಾಷ್ಟ್ರೀಯ ಮಂಡಳಿ ಮಾಜಿ ಸದಸ್ಯ ಡಾ.ಸಿದ್ದನಗೌಡ ಪಾಟೀಲ, ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್, ವಿ.ಕುಕ್ಯಾನ್, ಎಚ್.ವಿ.ರಾವ್, ಶಶಿಕಲಾ ಗಿರೀಶ್, ವಿ.ಎಸ್ ಬೇರಿಂಜ, ಶಿವಾನಂದ ಉಡುಪಿ ಭಾಗವಹಿಸಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸ್ವಾಗತ ಸಮಿತಿ ಅಧ್ಯಕ್ಷ ಬಿ.ಎಂ.ಹಸೈನಾರ್, ಜಿಲ್ಲಾ ಸಹಕಾರ್ಯದರ್ಶಿ ವಿ.ಎಸ್.ಬೇರಿಂಜ, ತಾಲೂಕು ಕಾರ್ಯದರ್ಶಿ ಸುರೇಶ್ ಕುಮಾರ್, ಸಂಘಟನಾ ಕಾರ್ಯದರ್ಶಿ ರಾಮಮುಗೇರ ಉಪಸ್ಥಿತರಿದ್ದರು.