ಜಿಲ್ಲೆ

ಅನಽಕೃತ ಜಾಗದ ಬಿ ಖಾತೆಗೆ ಅವಕಾಶ - ಎಚ್. ಮಹಮ್ಮದ್ ಆಲಿ ಮಾಹಿತಿ

Mangaluru - Nishantha Narayana

ಪುತ್ತೂರು: ಸರ್ಕಾರದ ಹೊಸ ನಿಯಮದಂತೆ ಅಽಕೃತ ಕಟ್ಟಡ ಹಾಗೂ ಸ್ಥಳಕ್ಕೆ ಎ ಖಾತೆ, ಅನಽಕೃತ ಕಟ್ಟಡ ಮತ್ತು ಸ್ಥಳಕ್ಕೆ ಬಿ ಖಾತೆ ನೀಡಲು ಅವಕಾಶ ಕಲ್ಪಿಸಿದೆ. ಈ ಮೂಲಕ ದುಪ್ಪಟ್ಟು ತೆರಿಗೆಯವರಿಗೆ ಮುಂದೆ ಏಕ ತೆರಿಗೆಯವರಿಗೆ ಬರಲು ಅವಕಾಶ ಕಲ್ಪಿಸಲಾಗಿದೆ. ಅನಽಕೃತ ಖಾತೆಯನ್ನು ಕಾವೇರಿ ತಂತ್ರಾಂಶಕ್ಕೆ ಲಿಂಕ್ ಮಾಡಿ ಮಾರಾಟಕ್ಕೆ ಹಾಗೂ ಸಾಲ ಪಡೆಯುವುದಕ್ಕೂ ಅವಕಾಶ ನೀಡಲಾಗಿದೆ ಎಂದು ನಗರಸಭೆ ಮಾಜಿ ಅಧ್ಯಕ್ಷ ಎಚ್. ಮಹಮ್ಮದ್ ಆಲಿ ಹೇಳಿದರು.

೨೦೧೩ರಲ್ಲಿ ಕಟ್ಟಡಗಳನ್ನು ಸಕ್ರಮ ಮಾಡುವ ಕಾಯ್ದಿಗೆ ಸುಪ್ರೀಂ ಕೋರ್ಟಿನ ತಡೆಯಾಜ್ಞೆಯಿದೆ. ದಲ್ಲಾಳಿಗಳು ಜನರಲ್ಲಿ ಗೊಂದಲ ಮೂಡಿಸಿ ತಪ್ಪುದಾರಿಗೆ ಎಳೆಯುತ್ತಿದ್ದಾರೆ. ಖಾಲಿ ಜಾಗ ಇದ್ದು ಬಿ ಖಾತೆ ಪಡೆದು ಬಳಿಕ ಮನೆ ನಿರ್ಮಾಣಕ್ಕೆ ಸಮಸ್ಯೆ ಎದುರಾಗಲಿದೆ. ಸಾರ್ವಜನಿಕರು ಪರವಾನಗಿ ಇಲ್ಲದೆ ಕಟ್ಟಡ ನಿರ್ಮಾಣ ಮಾಡಬಾರದು ಮತ್ತು ಮಂಜೂರಾದ ನಕ್ಷೆಯಂತೆ ಕಟ್ಟದೆ ಸೆಟ್ ಬ್ಯಾಕ್ ಉಲ್ಲಂಘಿಸಿ ಕಟ್ಟಡ ಮಾಡುವುದರಿಂದ ಮುಂದೆ ಸಮಸ್ಯೆ ನಿಶ್ಚಿತ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಗರಸಭೆ ಸದಸ್ಯ ಮಹಮ್ಮದ್ ರಿಯಾಜ್, ನಾಮ ನಿರ್ದೇಶಿತ ಸದಸ್ಯ ರೋಶನ್ ರೈ ಬನ್ನೂರು, ಭೂ ನ್ಯಾಯ ಮಂಡಳಿ ಸದಸ್ಯ ಮಂಜುನಾಥ, ನಗರಸಭೆ ಮಾಜಿ ಅಧ್ಯಕ್ಷೆ ಜಯಂತಿ ಬಲ್ನಾಡು ಇದ್ದರು.