ಜಿಲ್ಲೆ

ಸರ್ವಾಧಿಕಾರಿ ಧೋರಣೆ ವಿರುದ್ಧ ಸ್ಪರ್ಧೆ

Mangaluru - Nishantha Narayana

ಪುತ್ತೂರು: ಸರ್ವಾಧಿಕಾರಿ ದುರಾಡಳಿತ ನಡೆಸುತ್ತಿರುವ ಪದ್ಧತಿಯನ್ನು ಬದಲಾಯಿಸಿ ಎಲ್ಲರಿಗೂ ಸಮಪಾಲು ಅಽಕಾರ ಸಿಗಬೇಕೆಂಬ ನಿಟ್ಟಿನಲ್ಲಿ ಚುನಾವಣೆಗೆ ಸ್ಪರ್ಧಿಸಲಾಗುತ್ತಿದೆ. ಟೌನ್ ಬ್ಯಾಂಕ್‌ನ ದುರಾಡಳಿತ ಮತ್ತು ಅವ್ಯವಹಾರಗಳಿಂದ ರೋಸಿ ಹೋಗಿ ಸಹಕಾರಿ ಸಾಮ್ರಾಟ್ ಹೋರಾಟ ಸಮಿತಿ ಸ್ಪರ್ಧೆಗೆ ಮುಂದಾಗಿದೆ ಎಂದು ಸಾಮಾನ್ಯ ಕ್ಷೇತ್ರದಿಂದ ಸ್ಪಽಸಿದ ಸುದರ್ಶನ್ ಗೌಡ ರಾಮನಗರ ಹೇಳಿದರು.

ಆಡಳಿತ ಮಂಡಳಿಯ ಪ್ರಮುಖರು ಮತದಾರರ ಪಟ್ಟಿಯನ್ನು ಕ್ಷೇತ್ರವಾರು ವಿಂಗಡಿಸಿ, ಮೊಬೈಲ್ ಸಂಖ್ಯೆ ಸಹಿತ ಬ್ಯಾಂಕ್ ನಲ್ಲೇ ಮುದ್ರಿಸಿ ಬೆಂಬಲಿತ ಮತದಾರರನ್ನು ಸಂಪರ್ಕಿಸುತ್ತಿರುವುದು ಕಂಡುಬಂದಿದೆ. ಚುನಾವಣಾಽಕಾರಿಯ ನೇಮಕವಾದ ಬಳಿಕ ತಡರಾತ್ರಿಯವರೆಗೆ ಬ್ಯಾಂಕ್‌ನಲ್ಲಿ ಕೆಲ ಸಿಬ್ಬಂದಿ ಕೆಲಸ ನಿರ್ವಹಿಸುತ್ತಿರುವ ಬಗ್ಗೆ ದೂರು ನೀಡಲಾಗಿದೆ. ಕೊನೆಯ ಮಹಾಸಭೆಯಲ್ಲಿ ಸದಸ್ಯರಿಗೆ ಉಡುಗೊರೆಗಳನ್ನು ನೀಡುವ ಕಾರ್ಯ ನಡೆದಿದೆ. ಕೊಟೇಷನ್ ರಹಿತವಾಗಿ ಇವುಗಳನ್ನು ಖರೀದಿ ಮಾಡಿದ ಬಗ್ಗೆ ಆರ್‌ಬಿಐಗೆ ದೂರು ಸಲ್ಲಿಸಲಾಗಿದೆ. ಚುನಾವಣೆಯ ಆಮಿಷಕ್ಕಾಗಿ ಬೆಂಬಲಿಗರಿಗೆ ಆಡಳಿತ ಮಂಡಳಿತ ವಿಸರ್ಜನೆಯ ಬಳಿಕವೂ ಸಾಲದ ಅರ್ಜಿಗಳಿಗೆ ಶಿಫಾರಸ್ಸು ಮಾಡಿ ಚುನಾವಣಾ ಅಕ್ರಮ ನಡೆಸಲಾಗಿದೆ. ಇದೇ ದಿನ ಚುನಾವಣಾ ಕರ್ತವ್ಯದಲ್ಲಿ ಸಹಕಾರ ಇಲಾಖೆಯ ಅಧಿಕಾರಿಗಳೂ ಇದ್ದರೆಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು. ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಜೋನ್ ಸಿರಿಲ್ ರೋಡ್ರಿಗಸ್ ಚಿಕ್ಕಮುಡ್ನೂರು, ಮಹಮ್ಮದ್ ಅಶ್ರಫ್ ಕಲ್ಲೇಗ ಮತ್ತಿತರರು ಉಪಸ್ಥಿತರಿದ್ದರು.