ಜಿಲ್ಲೆ

ಗಾಂಧಿ, ನೆಹರು ಅವಹೇಳನ - ಅಮಳ ರಾಮಚಂದ್ರ ಆರೋಪ

Mangaluru - Nishantha Narayana

ಪುತ್ತೂರು: ಖಾಸಗಿ ಕಾಲೇಜಿನ ಸಾವರ್ಕರ್ ಸಭಾಭವನದ ಉದ್ಘಾಟನೆ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಹೋರಾಟಗಾರರನ್ನು ಅವಮಾನಿಸಿದರೆ ಮತ್ತು ವಿದ್ಯಾರ್ಥಿಗಳ ಸಮ್ಮುಖದಲ್ಲಿ ದ್ವೇಷ ಭಾಷಣವನ್ನು ಮಾಡಿದರೆ ಸಹಿಸುವುದಕ್ಕೆ ಸಾಧ್ಯವಿಲ್ಲ. ಕಲ್ಲಡ್ಕ ಪ್ರಭಾಕರ ಭಟ್ಟರು ಸಾವರ್ಕರ್ ಗುಣಗಾನ ಮಾಡುವ ನೆಪದಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ಮಹಾತ್ಮಾ ಗಾಂಧಿ ಮತ್ತು ಜವಾಹರ್‌ಲಾಲ್ ನೆಹರ ಅವಹೇಳನ ನಡೆಸಿರುವುದು ಮತ್ತು ಹಿಂದು ಮುಸ್ಲಿಂ ಸಮುದಾಯದ ಮಧ್ಯೆ ದ್ವೇಷ ಬಿತ್ತುವ ಮಾತುಗಳನ್ನಾಡಿರುವುದು ಖಂಡನೀಯ ಎಂದು ಪುತ್ತೂರು ಮಾನವ ಬಂಧುತ್ವ ವೇದಿಕೆ ಪ್ರಧಾನ ಸಂಚಾಲಕ ಅಮಳ ರಾಮಚಂದ್ರ ಹೇಳಿದರು.

ಇತಿಹಾಸವನ್ನು ತಿರುಚಿ, ಸ್ವಾತಂತ್ರ್ಯ ಸೇನಾನಿಗಳನ್ನು ಹೀಯಾಳಿಸಿ, ಕೋಮು ದ್ವೇಷ ಮಾತನಾಡುವುದು ಕಾಲೇಜಿನ ವಿದ್ಯಾರ್ಥಿಗಳಿಗೆ ಎಸಗುತ್ತಿರುವ ದ್ರೋಹ, ಹಿಂದು ಸಂಸ್ಕೃತಿಗೆ ಅಪಚಾರ. ನಿಮಗೆ ನಿಜವಾಗಿಯೂ ಆತ್ಮಸಾಕ್ಷಿಯಿದ್ದರೆ, ನೀವು ಹೇಳಿದ ವಿಚಾರಗಳು ಸತ್ಯವೇ ಆಗಿದ್ದರೆ, ನೈಜ ಹಿಂದು ಆಗಿದ್ದರೆ ಆಧಾರ ಸಹಿತವಾಗಿ ನಿರೂಪಿಸಿ. ಗಾಂಧಿ ಮತ್ತು ನೆಹರುಗೆ ಜೈಲಿನಲ್ಲಿ ಹೂವಿನ ಹಾಸಿಗೆಯನ್ನು ಬ್ರಿಟಿಷರು ನೀಡಿದ್ದರು ಎಂಬುದು ಇತಿಹಾಸದ ಯಾವ ಪುಸ್ತಕದಲ್ಲಿದೆ? ಇಲ್ಲವಾದರೆ ನೀವೊಬ್ಬ ಸುಳ್ಳುಗಾರನೆಂದು ಒಪ್ಪಿಕೊಳ್ಳಿ. ಹಿರಿಯರನ್ನು ಟೀಕಿಸಬಹುದು-ವಿರೋಽಸಬಹುದು ಎಂಬುದನ್ನು ಸಾರುವ ಜತೆಗೆ ಬಾಳಿ ಬೆಳಗಬೇಕಾದ ನವ ಯುವಕರ ತಲೆಗೆ ಕೋಮು ದ್ವೇಷ ತುಂಬುವುದು ಸರಿಯಲ್ಲ. ಅವರ ದ್ವೇಷ ಭಾಷಣವನ್ನು ಪುತ್ತೂರು ಸಹಿಸುವುದಿಲ್ಲ. ಗಾಂಽ ಮತ್ತು ನೆಹರು ಅವರನ್ನು ದ್ವೇಷ ಭಾಷಣ ಮೂಲಕ ಅವಮಾನಿಸಿದ ಡಾ.ಪ್ರಭಾಕರ ಭಟ್ ಇವರ ವಿರುದ್ಧ ಪೊಲೀಸರು ಸ್ವಯಂಪ್ರೇರಿತವಾಗಿ ದಾಖಲಿಸಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಮಾನವ ಬಂಧುತ್ವ ವೇದಿಕೆಯ ಸದಸ್ಯರಾದ ಮೌರೀಸ್ ಮಸ್ಕರೇನಸ್, ಉಲ್ಲಾಸ್ ಕೋಟ್ಯಾನ್, ಯುನೀಕ್ ರೆಹಮಾನ್, ಗಗನ್ ಬನ್ನೂರು ಕರ್ಮಲ ಉಪಸ್ಥಿತರಿದ್ದರು.