ಕಂಪ್ಲಿ: ಇಲ್ಲಿನ ಹಳೆಯ ಬಸ್‌ನಿಲ್ದಾಣದಲ್ಲಿ ಪತ್ರಿಕಾ ವಿತರಕರು ಸೋಮವಾರ ಪತ್ರಿಕಾ ವಿತರಕರ ದಿನಾಚರಣೆಯನ್ನು ಸಡಗರದಿಂದ ಆಚರಿಸಿದರು.
ಪತ್ರಿಕಾ ವಿತರಕ ಹಾಗೂ ಪ್ರತಿನಿಧಿ ವೈ.ಬಿ.ಆನಂದರಾವ್ ಕೇಕ್ ಕತ್ತರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಪತ್ರಿಕಾ ವಿತರಕರ ಜೀವನ ಸಂಕಷ್ಟದಲ್ಲಿದೆ. ಪತ್ರಿಕಾ ವಿತರಕರಿಗೆ ಸುರಕ್ಷಾ ಸಾಧನೋಪಕರಣಗಳನ್ನು, ಬೆಳಕಿಗೆ ಟಾರ್ಚ್, ರೇನ್‌ಕೋಟ್, ದ್ವಿಚಕ್ರ ವಾಹನ ಸೌಲಭ್ಯ ಬೇಕಿವೆ. ಪತ್ರಿಕಾ ವಿತರಕರನ್ನು ಗುರುತಿಸಿ ಗುರುತಿನ ಚೀಟಿ, ಮಾಸಿಕ ಪಡಿತರ ಕಿಟ್ ವಿತರಿಸುವ ವ್ಯವಸ್ಥೆ ಕಲ್ಪಿಸುವಂತೆ ಸ್ಥಳೀಯ ಆಡಳಿತಕ್ಕೆ ಜಿಲ್ಲಾಧಿಕಾರಿ ಆದೇಶಿಸಬೇಕು ಎಂದು ಒತ್ತಾಯಿಸಿದರು. ಪತ್ರಿಕಾ ವಿತರಕರಾದ ಭರತ್‌ಕುಮಾರ್, ವೈ.ಎ.ಸಂತೋಷ್‌ಕುಮಾರ್, ಧನಂಜಯ್, ಹನುಮೇಶ್, ಮಳೇಕಾರ ಲಕ್ಷ್ಮಣ, ಶಶಿಧರ ಇದ್ದಾರೆ.