ಜಿಲ್ಲೆ

ಮಾ.1 ಮತ್ತು 2ರಂದು ಕಚ್ಚಿಗೆರೆಯಲ್ಲಿ ಜಾತ್ರೆ: ಕನ್ನಡಸೇನೆ ಜಿಲ್ಲಾಧ್ಯಕ್ಷ ಮಂಜುನಾಥ್ ಮಾಹಿತಿ

ಮಂಡ್ಯ: ತಾಲೂಕಿನ ಕಸಬಾ ಹೋಬಳಿಯ ಕಚ್ಚಿಗೆರೆ ಗ್ರಾಮದಲ್ಲಿ ಮಾ.1 ಮತ್ತು 2ರಂದು ಶನೇಶ್ಚರಸ್ವಾಮಿಯ 40ನೇ ವರ್ಷದ ಜಾತ್ರಾ ಮಹೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಸೇನೆ ಜಿಲ್ಲಾಧ್ಯಕ್ಷ ಎಚ್.ಸಿ.ಮಂಜುನಾಥ್ ತಿಳಿಸಿದರು.

1ರಂದು ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಬೆಳಗ್ಗೆ 7.30ರಿಂದಲೇ ಪ್ರಾರಂಭವಾಗಲಿದ್ದು, ಮಧ್ಯಾಹ್ನ 12ಕ್ಕೆ ಮಹಾ ಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗವಿರಲಿದೆ. ಸಂಜೆ 5ರಿಂದ ಮೀಸಲು ತರಲಾಗುವುದು. 6ರಿಂದ 11.30ರವರೆಗೆ ವಿನಾಯಕ ಗೆಳೆಯರ ಬಳಗದ ವತಿಯಿಂದ ಸಿನಿ ಮ್ಯೂಸಿಕ್, ಗಿಚ್ಚಿ ಗಿಲಿಗಿಲಿ ಹಾಸ್ಯ ಕಲಾವಿದರಿಂದ ದೈವಿಕ ಹಾಸ್ಯ ಕಾರ್ಯಕ್ರಮ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಬೆಳಗಿನ ಜಾವ 5ರವರೆಗೆ ಬೆಳ್ಳಿ ಗಿಂಡಿ ಪೂಜೆ, ಶನೇಶ್ವರ ಸ್ವಾಮಿ ಬೆಳ್ಳಿರಥೋತ್ಸವ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. 2ರಂದು ಬೆಳಗ್ಗೆ 7ರಿಂದಲೇ ಅನ್ನದಾಸೋಹವಿರಲಿದೆ. 9ರಿಂದ ಸಂಜೆ 4ವರೆಗೆ ಆರೋಗ್ಯ ಉಚಿತ ತಪಾಸಣೆ ಆಯೋಜಿಸಲಾಗಿದೆ ಎಂದರು.

ನಿತಿನ್, ಪ್ರಸನ್ನಕುಮಾರ್, ಮಹಂತಪ್ಪ ಇದ್ದರು.