ಜಿಲ್ಲೆ

ಫೆ.21ರಂದು ಅಂಗವಿಕಲರಿಗಾಗಿ ಉದ್ಯೋಗ ಮೇಳ: ಸ್ವಾಭಿಮಾನಿ ಫೌಂಡೇಷನ್ ಕಾರ್ಯದರ್ಶಿ ನಂದೀಶ್ ವಿವರ

ಮಂಡ್ಯ: ಸ್ವಾಭಿಮಾನಿ ಫೌಂಡೇಷನ್, ಆಶಾದೀಪ ಸಂಸ್ಥೆ, ಟ್ರೈನ್ ಸಂಸ್ಥೆ, ಹಿರಿಯ ನಾಗರಿಕ, ವಿಕಲಚೇತನರ ಸಬಲೀಕರಣ ಇಲಾಖೆ ಹಾಗೂ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಫೆ.21ರಂದು ನಗರದ ಗುರುಭವನದಲ್ಲಿ ಅಂಗವಿಕಲರಿಗಾಗಿ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಫೌಂಡೇಷನ್‌ನ ಕಾರ್ಯದರ್ಶಿ ನಂದೀಶ್ ಹೇಳಿದರು.

ಅಂದು ಬೆಳಗ್ಗೆ 10ಗಂಟೆಯಿಂದ ಮಧ್ಯಾಹ್ನ 2ರವರೆಗೆ ನಡೆಯಲಿರುವ ಮೇಳದಲ್ಲಿ 20ಕ್ಕೂ ಹೆಚ್ಚು ಕಂಪನಿಗಳು ಪಾಲ್ಗೊಳ್ಳಲಿವೆ. ಕನಿಷ್ಟ ಎಸ್‌ಎಸ್‌ಎಲ್‌ಸಿಯಿಂದ ಯಾವುದೇ ಪದವಿ ಪಡೆದಿರುವವರು ಭಾಗವಹಿಸಬಹುದು. ಅಂದು ಅಗತ್ಯ ದಾಖಲೆಯೊಂದಿಗೆ ಸಂದರ್ಶನದಲ್ಲಿ ಹಾಜರಾಗಬಹುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಂಸ್ಥೆಯಿಂದ ಇದುವರೆಗೂ 32 ಅಂಗವಿಕಲರಿಗೆ ಉದ್ಯೋಗ ದೊರಕಿಸಿಕೊಟ್ಟಿದೆ. ಇನ್ನು ಮೇಳದಲ್ಲಿ ಉದ್ಯೋಗ ಪಡೆಯಲಾಗದವರಿಗೆ ಸಂಸ್ಥೆಯ ವತಿಯಿಂದ 45 ದಿನದ ತರಬೇತಿ ನೀಡಿ, ಉದ್ಯೋಗವನ್ನು ದೊರಕಿಸಿಕೊಡುವ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.

ಟ್ರೈನ್ ಸಂಸ್ಥೆಯ ಸಹಾಯಕ ನಿರ್ವಾಹಕ ಬಸವರಾಜ್, ಸುರೇಶ್, ಕೆ.ಸಿ.ವಿಶಾಲಾ ಇದ್ದರು.