ಜಿಲ್ಲೆ

ಸೆ.28ರಂದು ರಾಜ್ಯಮಟ್ಟದ ವಿಚಾರ ಮಂಥನ: ವಿಚಾರವಾದಿ ಶ್ರೀನಿವಾಸ ನಟೇಕರ್ ಮಾಹಿತಿ

ಕೆ.ಎನ್.ರಾಘವೇಂದ್ರ

ಮಂಡ್ಯ: ಭಾರತೀಯ ವಿಚಾರವಾದಿಗಳ ಒಕ್ಕೂಟ, ನೇಗಿಲಯೋಗಿ ಟ್ರಸ್ಟ್, ಏಯ್ಡ ವಿತೌಟ್ ರಿಲಿಜನ್ ಟ್ರಸ್ಟ್, ಅಖಿಲ ಕರ್ನಾಟಕ ವಿಚಾರವಾದಿ ಟ್ರಸ್ಟ್ ಸಹಯೋಗದಲ್ಲಿ ಭಗತ್‌ಸಿಂಗ್ ಜನ್ಮದಿನಾಚರಣೆ ಅಂಗವಾಗಿ ಸೆ.28ರಂದು ನಗರದಲ್ಲಿ ‘ನಾನೇಕೆ ನಾಸ್ತಿಕ ಭಗತ್‌ಸಿಂಗ್’ 2ನೇ ರಾಜ್ಯಮಟ್ಟದ ವೈಚಾರಿಕ-ನಾಸ್ತಿಕ ವಿಚಾರಗಳ ಮಂಥನ ಆಯೋಜಿಸಲಾಗಿದೆ ಎಂದು ವಿಚಾರವಾದಿ ಶ್ರೀನಿವಾಸ ನಟೇಕರ್ ಹೇಳಿದರು.

ಅಂದು ಬೆಳಗ್ಗೆ 9.30ಕ್ಕೆ ಗಾಂಧಿಭವನದಲ್ಲಿ ‘ಮೂಢನಂಬಿಕೆ ವಾಸ್ತವ ಮತ್ತು ಭ್ರಮೆ ’ಕೃತಿ ಲೋಕಾರ್ಪಣೆ ಮಾಡುವ ಮೂಲಕ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಕಾರ್ಯಕರಮ ಉದ್ಘಾಟಿಸುವರು. ಒಕ್ಕೂಟದ ಅಧ್ಯಕ್ಷ ಪ್ರೊ.ನರೇಂದ್ರ ನಾಯಕ್ ಅಧ್ಯಕ್ಷತೆ ವಹಿಸುವರು. ರೈತ ಮುಖಂಡ ಟಿ.ಎಲ್.ಕೃಷ್ಣೇಗೌಡ, ಪತ್ರಕರ್ತ ಬಿ.ಆರ್.ರಂಗಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡುವರು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಶಂಕರೇಗೌಡ ಮಹಾವಿದ್ಯಾಲಯದ ಪ್ರಾಂಶುಪಾಲೆ ಡಾ.ವಿ.ಡಿ.ಸುವರ್ಣ ಗೋಷ್ಠಿಗಳ ಅಧ್ಯಕ್ಷತೆ ವಹಿಸಲಿದ್ದಾರೆ. ಬೆಳಗ್ಗೆ 11.40ಕ್ಕೆ ವೈಚಾರಿಕ ಹಾಡುಗಳು, 12.02ಕ್ಕೆ ವೈದ್ಯಕೀಯ ಕ್ಷೇತ್ರದಲ್ಲಿ ವೈಚಾರಿಕತೆ, 1.30ಕ್ಕೆ ಮಹಿಳೆಯರಲ್ಲಿ ನಾಸ್ತಿಕತೆಯ ಮಹತ್ವ, 2.25ಕ್ಕೆ ಪೆರಿಯಾರ್‌ರವಸ ನಾಸ್ತಿಕ ಚಿಂತನೆ ಹಾಗೂ 3.25ಕ್ಕೆ ವೈಚಾರಿಕ ಚಳವಳಿಯ ಭವಿಷ್ಯ ಮತ್ತು ಸಂಘಟನೆ ವಿಚಾರ ಕುರಿತು ಗೋಷ್ಠಿ ನಡೆಯಲಿದೆ.

ಒಕ್ಕೂಟದ ಎಂ.ಜಿ.ವಿನಯ್‌ಕುಮಾರ್, ಎಸ್.ಆರ್.ಸ್ವಾಮಿ, ಶಿವಕುಮಾರ್ ಇದ್ದರು.