ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದ ಛತ್ರಪತಿ ಶಿವಾಜಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಸ್ಥೆಯ ನೂತನ ಆಡಳಿತ ಮಂಡಳಿ ಸದಸ್ಯರು ಮತ್ತು ಅಧ್ಯಕ್ಷರು, ಉಪಾಧ್ಯಕ್ಷರನ್ನು ಸನ್ಮಾನಿಸಲಾಯಿತು. ಅಶೋಕ ಕಾಳವೀರೆ, ವಿಸ್ವಾಸ ರಸಾಳೆ, ಅಮರ ಯಾದವ, ಶೀತಲ ಯಾದವ, ಬಾಳಾಸಾಬ ಕಾಡಾಪುರೆ, ಡಾ. ಶಿವಾಜಿ ರೋಡೆ ಇತರರು ಇದ್ದರು. 
ಜಿಲ್ಲೆ

ಅಧ್ಯಕ್ಷ-ಉಪಾಧ್ಯಕ್ಷರ ಅವಿರೋಧ ಆಯ್ಕೆ

ಪ್ರಶಾಂತ ಹೂಗಾರ

ಮಾಂಜರಿ: ಗ್ರಾಮದ ಶ್ರೀ ಛತ್ರಪತಿ ಶಿವಾಜಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘಕ್ಕೆ 2023-2028 ಅವಧಿಗೆ ನೂತನ ಅಧ್ಯಕ್ಷರಾಗಿ ಅಶೋಕ ಕಾಳವೀರೆ ಮತ್ತು ಉಪಾಧ್ಯಕ್ಷರಾಗಿ ವಿಸ್ವಾಸ ರಸಾಳೆ ಮಂಗಳವಾರ ಅವಿರೋಧ ಆಯ್ಕೆಯಾಗಿದ್ದಾರೆ.

ಅಧ್ಯಕ್ಷ-ಉಪಾಧ್ಯಕ್ಷ ಮತ್ತು ನಿರ್ಗಮಿತ ಅಧ್ಯಕ್ಷ, ನೂತನ ನಿರ್ದೇಶಕರು, ಚುನಾವಣಾಧಿಕಾರಿ, ವ್ಯವಸ್ಥಾಪಕರನ್ನು ಸನ್ಮಾನಿಸಲಾಯಿತು. ಶ್ರೀ ದತ್ತ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಅಮರ ಯಾದವ ಮತ್ತು ಶೀತಲ ಯಾದವ ನೂತನ ಆಡಳಿತ ಮಂಡಳಿ ಸದಸ್ಯರನ್ನು ಸನ್ಮಾನಿಸಿದರು. ಚುನಾವಣಾಧಿಕಾರಿಗಳಾಗಿ ಗೋವಿಂದಗೌಡ ಪಾಟೀಲ ಕಾರ್ಯನಿರ್ವಹಿಸಿದರು.

ಮುಖಂಡರಾದ ಬಾಳಾಸಾಬ ಕಾಡಾಪುರೆ, ಡಾ. ಶಿವಾಜಿ ರೋಡೆ, ಮಾರುತಿ ಶೆಂಡೂರೆ, ನಿರ್ಗಮಿತ ಅಧ್ಯಕ್ಷ ರಾಮಚಂದ್ರ ಭೋಸಲೆ, ರಾಮಚಂದ್ರ ಭೋಸಲೆ, ಮೋಹನ ಲೋಕರೆ, ಪರಶುರಾಮ ಥೋರೂಸೆ, ಜ್ಞಾನೇಶ್ವರ ಪಾಟೋಳೆ, ಜಹಾಂಗೀರ ಕೋಥಳಿ, ವಿಠ್ಠಲ ಟೊನಪೆ, ಬಬ್ರುವಾಹನ ಸಾರಾಪುರೆ, ಅಭಿಮನ್ಯು ಯಾದವ, ಚಂದ್ರಕಾಂತ ಖಡಕೆ, ಸಾಗರ ಚವ್ಹಾಣ, ಸುಶೀಲಾ ಕಾಡಾಪುರೆ, ಸುಷ್ಮಾ ರೋಡೆ, ನಾಯಕು ಪಾಟೋಳೆ ಹಾಗೂ ಸಿಬ್ಬಂದಿ ಇದ್ದರು. ಕಾರ್ಯದರ್ಶಿಗಳಾದ ಸುಖದೇವ ಪಾಟೋಳೆ ಸ್ವಾಗತಿಸಿ, ವಂದಿಸಿದರು.