ಕೊಟ್ಟೂರು: ಸ್ಥಳೀಯ ಎಪಿಎಂಸಿ ಅಧ್ಯಕ್ಷರಾಗಿ ಹರಾಳು ನಂಜಪ್ಪ, ಉಪಾಧ್ಯಕ್ಷರಾಗಿ ಎಂ. ಶಿವಣ್ಣ ಬುಧವಾರ ಅಧಿಕಾರ ಸ್ವೀಕರಿಸಿದರು.
ವಿಜಯನಗರ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಅಡಕಿ ಮಂಜುನಾಥ್, ಎಪಿಎಂಸಿ ಸದಸ್ಯ ಶಿರಬಿ ಕೊಟ್ರೇಶ, ಹಾಗೂ ಮಂಗನಹಳ್ಳಿ ಸಿದ್ದೇಶ ಹೊಸ ಸದಸ್ಯರನ್ನು ಉದ್ದೇಶಿಸಿ ಹಾಗೂ ಎಪಿಎಂಸಿ ಅಭಿವೃದ್ಧಿ ಮತ್ತು ರೈತರ ಕುರಿತು ಮಾತನಾಡಿದರು.
ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ದಾರುಕೇಶ, ಎಪಿಎಂಸಿ ಮಾಜಿ ಅಧ್ಯಕ್ಷ ಗೊಲ್ಲರಹಳ್ಳಿ ಉಮೇಶ, ರಾಂಪುರ ಭರಮಪ್ಪ, ಸಾವಜ್ಜಿ ತಿಪ್ಪೇಸ್ವಾಮಿ, ಅಲಬೂರು ಮಂಜಣ್ಣ, ಬೇಲ್ದಾರ್ ಮರಿಯಪ್ಪ, ಮಾನಸ ನಾಗರಾಜ, ಚಿಂತ್ರಪಳ್ಳಿ ಕೆ.ಎಂ. ಗಂಗಾಧರ, ಅಳವೂರು ಬಸವರಾಜ, ಚೌಟಗಿ ಕೊಟ್ರೇಶಪ್ಪ, ಎಂ.ಕೆ. ಜಲಪೂರ, ಹರಾಳು ಕೊಟ್ರಪ್ಪ ಇತರರಿದ್ದರು.