ಹರಪನಹಳ್ಳಿ ತಾಲೂಕಿನ ಕೆ.ಕಲ್ಲಹಳ್ಳಿ ಗ್ರಾಪಂಗೆ ಅಧ್ಯಕ್ಷೆ, ಉಪಾಧ್ಯಕ್ಷೆಯಾಗಿ ಶುಕ್ರವಾರ ಆಯ್ಕೆಯಾದ ಹೊನ್ನಮ್ಮ, ದುರುಗಮ್ಮ ಅವರನ್ನು ಮುಖಂಡರು ಅಭಿನಂದಿಸಿದರು. 
ಜಿಲ್ಲೆ

ಅಧ್ಯಕ್ಷೆ ಟಿ.ಹೊನ್ನಮ್ಮ, ಉಪಾಧ್ಯಕ್ಷೆಯಾಗಿ ಭೋವಿ ದುರುಗಮ್ಮ ಆಯ್ಕೆ

ಹರಪನಹಳ್ಳಿ: ತಾಲೂಕಿನ ಕೆ.ಕಲ್ಲಹಳ್ಳಿ ಗ್ರಾಪಂಗೆ ಅಧ್ಯಕ್ಷೆ ಟಿ.ಹೊನ್ನಮ್ಮ, ಉಪಾಧ್ಯಕ್ಷೆಯಾಗಿ ಭೋವಿ ದುರುಗಮ್ಮ ಶುಕ್ರವಾರ ಆಯ್ಕೆಯಾದರು.


ಸಾಮಾನ್ಯ ಮಹಿಳಾ ವರ್ಗಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಟಿ.ಹೊನ್ನಮ್ಮ, ನೇತ್ರಾವತಿ ವೀರುಪಾಕ್ಷಪ್ಪ ನಾಮಪತ್ರ ಸಲ್ಲಿಸಿದ್ದು, ಗ್ರಾಪಂಯು ಒಟ್ಟು 15 ಸದಸ್ಯರ ಹೊಂದಿದೆ. ನೇತ್ರಾವತಿ ನೇತ್ರಾವತಿ 4 ಮತ, ಟಿ.ಹೊನ್ನಮ್ಮ 11 ಮತ ಪಡೆದು ಅಧ್ಯಕ್ಷೆಯಾಗಿ ಆಯ್ಕೆಯಾದರು.

ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಭೋವಿ ದುರುಗಮ್ಮ, ದಾಸರ ದ್ಯಾಮಪ್ಪ ನಾಮಪತ್ರ ಸಲ್ಲಿಸಿದ್ದು, ದಾಸರ ದ್ಯಾಮಪ್ಪ 3 ಮತ, ಭೋವಿ ದುರುಗಮ್ಮ 11 ಮತ ಪಡೆದಿದ್ದು, ಒಂದು ಮತ ತಿರಸ್ಕೃತಗೊಂಡು ಉಪಾಧ್ಯಕ್ಷೆಯಾಗಿ ಜಯಗಳಿಸಿದರು ಎಂದು ಚುನಾವಣಾಧಿಕಾರಿ ತಾಪಂ ಇಒ ಕೆ.ಆರ್.ಪ್ರಕಾಶ್ ಘೋಷಿಸಿದರು.


ಸದಸ್ಯರಾದ ಎ.ನಿಂಗಪ್ಪ, ಎಂ.ತಿಮ್ಮೇಶ್, ನಾಗೇಂದ್ರಪ್ಪ, ವೀರುಪಾಕ್ಷಪ್ಪ, ಡಿ.ಬಸವರಾಜ, ಸುಗಂದಮ್ಮ ರೇವಣಸಿದ್ದಪ್ಪ, ಪುಷ್ಪ ರಾಜಪ್ಪ, ಕೆ.ನೀಲಮ್ಮ, ಹೆಚ್.ಚೌಡಮ್ಮ ನಾಗಪ್ಪ, ಪಿಡಿಒ ಆನಂದ ಕಮಾರ, ಪ್ರಮಖರಾದ ಈರಣ್ಣ, ತೇಜು, ಮಹಾಂತೇಶ್, ಪರಶುರಾಮ, ಮೌನೇಶ್, ತಿರುಕಪ್ಪ, ಎಲ್.ಸಂತೋಷಕುಮಾರ, ಗ್ರಾಪಂ ಸಿಬ್ಬಂದಿ ಇದ್ದರು.