ಮದ್ದೂರು ಪಟ್ಟಣದ ಶ್ರೀ ಜಗಜ್ಯೋತಿ ಬಸವೇಶ್ವರ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಚ್.ಬಿ.ಸ್ವಾಮಿ ಅವಿರೋಧವಾಗಿ ಆಯ್ಕೆಯಾದರು. ಎಂ.ವೀರಭದ್ರಸ್ವಾಮಿ, ಬಿ.ವಿ.ಮಂಜುನಾಥ್, ಎಸ್.ಎಂ.ಗಂಗಾಧರ್, ಜಿ.ಜಿ.ಗೌರಿಶಂಕರ್, ರಾಜಮಣಿ, ಸಿದ್ದಮ್ಮ ಇದ್ದರು.  
ಜಿಲ್ಲೆ

ಎಚ್.ಬಿ.ಸ್ವಾಮಿ ಜಗಜ್ಯೋತಿ ಬಸವೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ

ಮದ್ದೂರು: ಪಟ್ಟಣದ ಶ್ರೀಜಗಜ್ಯೋತಿ ಬಸವೇಶ್ವರ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಚ್.ಬಿ.ಸ್ವಾಮಿ ಅವಿರೋಧವಾಗಿ ಆಯ್ಕೆಯಾದರು.

ಎಸ್.ಎಂ.ಗಂಗಾಧರ್ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಹಿನ್ನೆಲೆಯಲ್ಲಿ ಶನಿವಾರ ಸಂಘದ ಸಭಾಂಗಣದಲ್ಲಿ ಚುನಾವಣೆ ಪ್ರಕ್ರಿಯೆ ನಡೆಯಿತು. ಎಚ್.ಬಿ.ಸ್ವಾಮಿ ಅವರನ್ನು ಹೊರತುಪಡಿಸಿ ಬೇರಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಪಿ.ಧರಣಿಕುಮಾರ್ ಅವಿರೋಧ ಆಯ್ಕೆ ಘೋಷಣೆ ಮಾಡಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ನೂತನ ಅಧ್ಯಕ್ಷ ಎಚ್.ಬಿ.ಸ್ವಾಮಿ, ಸಂಘ ಉತ್ತಮವಾಗಿ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಎಲ್ಲ ನಿರ್ದೇಶಕರ ಸಹಕಾರ ಪಡೆದು ಸಂಘದ ಸಮಗ್ರ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಶ್ರಮಿಸಲಾಗುವುದು. ಅಲ್ಲದೆ ಷೇರುದಾರರಿಗೆ ಅನುಕೂಲವಾಗುವ ರೀತಿಯಲ್ಲಿ ನಿರಂತರವಾಗಿ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು.

ಸಂಘದ ಉಪಾಧ್ಯಕ್ಷ ಎಂ.ವೀರಭಧ್ರಸ್ವಾಮಿ, ನಿರ್ದೇಶಕರಾದ ಎಸ್.ಎಂ.ಗಂಗಾಧರ್, ಬಿ.ವಿ.ಮಂಜುನಾಥ್, ತೋಂಟದಾರ್ಯ, ಎಂ.ವೀರೇಂದ್ರ, ಪಿ.ಬಿ.ಮಹದೇವಸ್ವಾಮಿ, ಎಸ್.ಸಿದ್ದಮ್ಮ, ಪಿ.ತ್ರಿವೇಣಿ, ಸಿ.ಜಿ.ಗೌರಿಶಂಕರ್, ಬಸವರಾಜು, ಪಿ.ರಾಜಶೇಖರ, ವೈ.ಬಿ.ಶ್ರೀಕಂಠಸ್ವಾಮಿ, ಎಂ.ಸಿದ್ದಲಿಂಗಪ್ರಸಾದ್, ಕಾರ್ಯದರ್ಶಿ ರಾಜಮಣಿ, ಸಿಬ್ಬಂದಿ ಎನ್.ಶಾಲಿನಿ, ಎನ್.ಜಯಕುಮಾರಿ, ಎಸ್.ಸೌಮ್ಯಾ ಇದ್ದರು.