ಜಿಲ್ಲೆ

ಬಿಜೆಪಿಯಲ್ಲಿ ಅಧ್ಯಕ್ಷರೇ ಸುಪ್ರೀಂ

ಯಾದಗಿರಿ: ಬಿಜೆಪಿಯಲ್ಲಿ ಅಧ್ಯಕ್ಷರೇ ಸುಪ್ರೀಂ ಇದ್ದಂತೆ ಎಂದು ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಹೇಳಿದರು.

ವಿದ್ಯಾಮಂಗಲ ಕಾಯರ್ಾಲಯದಲ್ಲಿ ಗುರುವಾರ ನೂತನ ಜಿಲ್ಲಾಧ್ಯಕ್ಷ ಡಾ.ಶರಣಭೂಪಾಲರಡ್ಡಿ ನಾಯ್ಕಲ್ ಅವರ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿದ ಅವರು, ನಮ್ಮ ಪಕ್ಷದ ಚೌಕಟ್ಟಿನಲ್ಲಿ ಜನಪ್ರತಿನಿಧಿಗಳು ಸಾಮಾನ್ಯ ಕಾರ್ಯಕರ್ತರಿದ್ದಂತೆ. ಪಕ್ಷದೊಳಗೆ ಅಧ್ಯಕ್ಷರ ತೀಮರ್ಾನವೇ ಅಂತಿಮ ಎನ್ನುವ ಮೂಲಕ ಹೊಸ ಜಿಲ್ಲಾಧ್ಯಕ್ಷರ ನೇಮಕದಲ್ಲಿ ಎದ್ದಿರುವ ಭಿನ್ನಮತಕ್ಕೆ ಉತ್ತರ ನೀಡಿದರು.

ಐದು ದಶಕದಿಂದ ಬಿಜೆಪಿಯನ್ನು ಕಟ್ಟಿ ಬೆಳೆಸಲು ಲಕ್ಷಾಂತರ ಮುಖಂಡರು, ಕಾರ್ಯಕರ್ತರು ರಕ್ತ ಬಸಿದಿದ್ದಾರೆ. ಬೆವರು ಸುರಿಸಿದ್ದಾರೆ. ಅಂತೆಯೇ ಇಂದು ದೇಶದ ಸಂಸತ್ತಿನಲ್ಲಿ ಬಿಜೆಪಿ ಸಂಸದರ ಸಂಖ್ಯೆ 300 ದಾಟಿದೆ. ಜಿಲ್ಲಾಧ್ಯಕ್ಷ ಸ್ಥಾನವೆಂದರೆ ಜಿಮ್ಮೇದಾರಿ ಹೊರತು, ಅಧಿಕಾರವಲ್ಲ. ಕೊಟ್ಟ ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಂಡು ಪಕ್ಷವನ್ನು ಬೂತ್ ಮಟ್ಟದಿಂದ ಸಂಘಟಿಸುವ ಕೆಲಸ ಮಾಡಬೇಕು. ಎಂದಿಗೂ ನಿಮ್ಮ ಜವಾಬ್ದಾರಿ ತಲೆ ಮೇಲೆ ಏರದಿರಲಿ. ಒಂದು ವೇಳೆ ತಲೆಯಲ್ಲಿ ಕುಳಿತರೆ ಅಹಂ ಆರಂಭವಾಗಲಿದೆ ಎಂದು ಜಿಲ್ಲಾಧ್ಯಕ್ಷರಿಗೆ ಕಿವಿಮಾತು ಹೇಳಿದರು.

ಸ್ವಾತಂತ್ರೃಪೂರ್ವದಿಂದಲೂ ನಾವು ದೇಶಭಕ್ತರು ಎಂದು ಹೇಳಿ ಅಧಿಕಾರ ಅನುಭವಿಸಿದ ಕಾಂಗ್ರೆಸ್ ಸ್ಥಿತಿ ಇಂದು ಏನಾಗಿದೆ ಎಂಬುದು ಇಡೀ ದೇಶದ ಜನತೆಗೆ ಗೊತ್ತಿದೆ. ಅಧಿಕಾರ ಹಿಡಿಯುವ ಮೊದಲು ದೇಶಭಕ್ತಿ ಮಾತನಾಡುತ್ತಿದ್ದ ಕಾಂಗ್ರೆಸ್, ಅಧಿಕಾರಕ್ಕೆ ಬಂದ ಬಳಿಕ ದೇಶಪ್ರೇಮ ಮರೆತು ಕುಟುಂಬ ರಾಜಕಾರಣ ಮಾಡಿದ್ದರಿಂದಲೇ ಇಂದು ಸಂಸತ್ತಿನಲ್ಲಿ ಪ್ರತಿಪಕ್ಷ ಸ್ಥಾನದಲ್ಲಿರಲೂ ವಿಫಲವಾಗಿದೆ ಎಂದು ವ್ಯಂಗ್ಯವಾಡಿದರು.

ರಾಜ್ಯದಲ್ಲಿ ಬಿಜೆಪಿಯ 37 ಸಂಘಟನಾತ್ಮಕ ಜಿಲ್ಲೆಗಳಿವೆ. ಈಗಾಗಲೇ 35 ಜಿಲ್ಲೆಗಳಿಗೆ ಅಧ್ಯಕ್ಷರ ನೇಮಿಸಲಾಗಿದೆ. ಮಂಡಲ ಅಧ್ಯಕ್ಷರ ನೇಮಕ ಪ್ರಕ್ರಿಯೆ ಪೂರ್ಣಗೊಂಡಿದೆ. ಆದರೆ ಕೆಪಿಸಿಸಿ ಅಧ್ಯಕ್ಷ ರಾಜೀನಾಮೆ ಕೊಟ್ಟು 6 ತಿಂಗಳಾದರೂ ಹೊಸಬರ ನೇಮಕ ಮಾಡಲು ಸೋನಿಯಾ ಗಾಂಧಿ ಮುಂದಾಗುತ್ತಿಲ್ಲ. ಒಂದು ರಾಜ್ಯ ಘಟಕದ ಅಧ್ಯಕ್ಷರನ್ನೇ ನೇಮಕ ಮಾಡುವಲ್ಲಿ ಎಡವಿರುವ ಕಾಂಗ್ರೆಸ್ ಇನ್ನು ದೇಶವನ್ನು ಆಳಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಬೀದರ್ ಸಂಸದ ಭಗವಂತ ಖೂಬಾ ಮಾತನಾಡಿ, ಕೇಂದ್ರ ಮತ್ತು ರಾಜ್ಯದಲ್ಲಿ ನಮ್ಮ ಸಕರ್ಾರ ಆಡಳಿತದಲ್ಲಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜನರ ಆಶೋತ್ತರಗಳಿಗೆ ಸ್ಪಂದಿಸುತ್ತಿದ್ದಾರೆ. ಸಕರ್ಾರದ ಕಾರ್ಯಕ್ರಮಗಳನ್ನು ಜನರ ಮನೆ ಬಾಗಿಲಿಗೆ ಕೊಂಡೊಯ್ಯುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ ಮಾತನಾಡಿ, ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಸದೃಢವಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಮುಖಂಡರು, ಕಾರ್ಯಕರ್ತರ ಸಂಘಟನಾತ್ಮಕ ಕೆಲಸದಿಂದ ನಾನು ಗೆಲ್ಲುವಂತಾಯಿತು. ನಿಕಟಪೂರ್ವ ಜಿಲ್ಲಾಧ್ಯಕ್ಷ ಮಾಗನೂರ ಮೂರು ವರ್ಷ ಜಿಲ್ಲೆಯಲ್ಲಿ ಪಕ್ಷವನ್ನು ಸದೃಢವಾಗಿ ಕಟ್ಟಿದ್ದು, ಹೊಸ ಜಿಲ್ಲಾಧ್ಯಕ್ಷರಿಗೆ ನಮ್ಮೆಲ್ಲರ ಸಹಕಾರ ಇರಲಿದೆ ಎಂದು ಅಭಯ ನೀಡಿದರು.

ಅಧಿಕಾರ ಹಸ್ತಾಂತರಿಸಿದ ನಿಕಟಪೂರ್ವ ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ ಮಾಗನೂರ ಮಾತನಾಡಿ, ಮೂರು ವರ್ಷ 17 ತಿಂಗಳು ಜಿಲ್ಲಾಧ್ಯಕ್ಷನಾಗಿದ್ದೆ. ಈ ಅವಧಿಯಲ್ಲಿ ಪಕ್ಷದ ಪ್ರತಿಯೊಬ್ಬ ಮುಖಂಡ ಮತ್ತು ಕಾರ್ಯಕರ್ತ ಸಹಕಾರ ನೀಡಿದ್ದು, ಕೃತಜ್ಞತೆ ಸಲ್ಲಿಸುತ್ತೇನೆ. ಅದರಂತೆ ಹೊಸ ಜಿಲ್ಲಾಧ್ಯಕ್ಷರಿಗೆ ಎಲ್ಲ ರೀತಿಯ ಸಹಕಾರ ನೀಡುವೆ ಎಂದರು.

ಅಧಿಕಾರ ಸ್ವೀಕರಿಸಿದ ಜಿಲ್ಲಾಧ್ಯಕ್ಷ ಡಾ.ಶರಣಭೂಪಾಲರಡ್ಡಿ ನಾಯ್ಕಲ್ ಮಾತನಾಡಿ, ವರಿಷ್ಠರು ನನ್ನ ಮೇಲೆ ವಿಶ್ವಾಸವಿಟ್ಟು 2ನೇ ಬಾರಿಗೆ ಜಿಲ್ಲಾಧ್ಯಕ್ಷ ಸ್ಥಾನ ನೀಡಿದ್ದಾರೆ. ನಾಳೆಯಿಂದಲೇ ಮನೆ ಮನೆಗೆ ತೆರಳಿ ಪಕ್ಷ ಸಂಘಟನೆಗೆ ಶ್ರಮಿಸುವೆ. ಬಿಜೆಪಿ ಅಧಿಕಾರದ ಸುವರ್ಣ ಯುಗದಲ್ಲಿ ನಾನು ಜಿಲ್ಲಾಧ್ಯಕ್ಷ ಆಗಿರುವುದು ನನ್ನ ಸೌಭಾಗ್ಯ. ಕಾರ್ಯಕರ್ತರು, ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತೇನೆ. ಗ್ರಾಮ ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷಕ್ಕೆ ಭರ್ಜರಿ ಜಯ ತಂದುಕೊಡುವುದೇ ನನ್ನ ಗುರಿಯಾಗಿದೆ ಎಂದು ತಿಳಿಸಿದರು.

ಮಾಜಿ ಸಚಿವರಾದ ಡಾ.ಎ.ಬಿ. ಮಾಲಕರಡ್ಡಿ, ಬಾಬುರಾವ್ ಚಿಂಚನಸೂರ, ಮಾಜಿ ಶಾಸಕರಾದ ಡಾ.ವೀರಬಸವಂತರಡ್ಡಿ ಮುದ್ನಾಳ್, ಗುರು ಪಾಟೀಲ್ ಶಿರವಾಳ, ಶಶೀಲ್ ನಮೋಶಿ, ಜನಸಂಘದ ಹಿರಿಯ ಬಿ.ಜಯಾಚಾರ್ಯ, ವಿಭಾಗೀಯ ಸಹ ಪ್ರಭಾರಿ ಈಶ್ವರಸಿಂಗ್ ಠಾಕೂರ್, ಬಿಜೆಪಿ ಉಪಾಧ್ಯಕ್ಷೆ ನಾಗರತ್ನ ಕುಪ್ಪಿ, ಸಾಯಿಬಣ್ಣ ಬೋರಬಂಡಾ. ದೇವಿಂದ್ರನಾಥ ನಾದ್, ದೇವರಾಜ ನಾಯಕ, ಸುರೇಶ ಅಂಬಿಗೇರ, ಲಲಿತಾ ಅನಪುರ ಇತರರಿದ್ದರು. ವೆಂಕಟರಡ್ಡಿ ಅಬ್ಬೆತುಮಕೂರ ಸ್ವಾಗತಿಸಿ ವಂದಿಸಿದರು. ಅಮರಯ್ಯ ಸ್ವಾಮಿ ನಿರೂಪಣೆ ಮಾಡಿದರು.