ಕುಸುಮಾ-ಹನುಮಂತರಾಯಪ್ಪ ಚಾರಿಟಬಲ್ ಟ್ರಸ್ಟ್ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರನ್ನು ಸನ್ಮಾನಿಸಲಾಯಿತು.  folder
ಜಿಲ್ಲೆ

ಮುಂದಿನ ಪೀಳಿಗೆಗಾಗಿ ಕೆಲ, ಸಂಸ್ಕೃತಿ ಉಳಿಸಿ

ನೆಲದ ಸಂಸ್ಕೃತಿ, ಕಲೆ, ಪರಂಪರೆಯೂ ಶ್ರೀಮಂತವಾಗಿದೆ. ಮುಂದಿನ ಪೀಳಿಗೆಗಾಗಿ ರಕ್ಷಣೆ ಮಾಡುವ ಕೆಲಸವಾಗಬೇಕು ಎಂದು ಕೆಪಿಸಿಸಿ ವಕ್ತಾರೆ ಎಚ್. ಕುಸುಮಾ ಹೇಳಿದ್ದಾರೆ.

ಬೆಂಗಳೂರು: ನೆಲದ ಸಂಸ್ಕೃತಿ, ಕಲೆ, ಪರಂಪರೆಯೂ ಶ್ರೀಮಂತವಾಗಿದೆ. ಮುಂದಿನ ಪೀಳಿಗೆಗಾಗಿ ರಕ್ಷಣೆ ಮಾಡುವ ಕೆಲಸವಾಗಬೇಕು ಎಂದು ಕೆಪಿಸಿಸಿ ವಕ್ತಾರೆ ಎಚ್. ಕುಸುಮಾ ಹೇಳಿದ್ದಾರೆ.

ನಾಗರಬಾವಿಯ ವೀರ ಇಮ್ಮಡಿ ಪುಲಿಕೇಶಿ ಕ್ರೀಡಾಂಗಣದಲ್ಲಿ ಕುಸುಮಾ-ಹನುಮಂತರಾಯಪ್ಪ ಚಾರಿಟಬಲ್ ಟ್ರಸ್ಟ್ ವತಿಯಿಂದ ರಾಜರಾಜೇಶ್ವರಿನಗರ ವಿಧಾನಸಭಾ ವ್ಯಾಪ್ತಿಯ 2 ಸಾವಿರ ಗಣೇಶ ಸಾರಥಿಗಳಿಗೆ ಅಭಿನಂದನೆ ಹಾಗೂ 800 ಮಂದಿ ಹಿರಿಯ ನಾಗರಿಕರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

ಗಣೇಶೋತ್ಸವಕ್ಕೆ ತನ್ನದೇ ಆದ ಇತಿಹಾಸವಿದೆ. ಇದನ್ನು ಮುಂದುವರಿಸಿಕೊಂಡು ಹೋಗಬೇಕಾದ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಇಂತಹ ಕಾರ್ಯಗಳಿಂದ ಸಂಸ್ಕಾರ, ಸಂಸ್ಕೃತಿ, ಕಲೆ ಉಳಿಯಲು ಸಾಧ್ಯ ಎಂದು ತಿಳಿಸಿದರು.

ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ಮಾತನಾಡಿ, ಕುಸುಮಾ-ಹನುಮಂತರಾಯಪ್ಪ ಚಾರಿಟಬಲ್ ಟ್ರಸ್ಟ್ ನಿತ್ಯ ನಿರಂತರವಾಗಿ ಸಾವಾಜಿಕ, ಶೈಕ್ಷಣಿಕ, ಧಾರ್ಮಿಕವಾಗಿ ಸವಾಜಮುಖಿ ಸೇವೆ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ. ಇಂತಹ ಕಾರ್ಯ ನಡೆಸುವವರಿಗೆ ಸ್ಥಳೀಯ ಪ್ರೋತ್ಸಾಹ ಅಗತ್ಯ ಎಂದರು.

ಬೆಂಗಳೂರು ಪಶ್ಚಿಮ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹನುಮಂತರಾಯಪ್ಪ, ಪಾಲಿಕೆ ವಾಜಿ ಸದಸ್ಯರಾದ ಜಿ. ಮೋಹನ್‌ಕುವಾರ್, ವೇಲುನಾಯ್ಕರ್, ಮುಖಂಡರಾದ ಕೊಟ್ಟಿಗೆಪಾಳ್ಯ ಶೇಖರ್, ಗಿರೀಶ್ ಗೌಡ, ಲಲಿತಾ ರುದ್ರಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಂಪುರ ನಾಗೇಶ್, ಸುಲಕ್ಷಣ ಬೈರೇಗೌಡ, ಅಮರ್‌ನಾಥ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮೀ, ರೂಪ ಮತ್ತಿತರರಿದ್ದರು.