ವಿಜಯಪುರದ ಡಾ. ಫ.ಗು. ಹಳಕಟ್ಟಿ ಸಂಶೋಧನ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಚಿತ್ರಕಲಾ ಸ್ಪರ್ಧೆಯನ್ನು ಸಂತೋಷ ಭೋವಿ ಉದ್ಘಾಟಿಸಿದರು. ಅಂಬಾದಾಸ ಜೋಶಿ, ವಿ.ಡಿ. ಐಹೊಳ್ಳಿ ಮತ್ತಿತರರಿದ್ದಾರೆ. 
ಜಿಲ್ಲೆ

ಸಾಂಸ್ಕೃತಿಕ ಪರಂಪರೆ ಉಳಿಸಿ ಬೆಳೆಸಿ

Vijayapura - Desk - Gurappa Lokuri

ವಿಜಯಪುರ: ನಮ್ಮ ಪೂರ್ವಜರು ತ್ಯಾಗ, ಸಂಯಮ ಮತ್ತು ನಿರಂತರ ಪ್ರಯತ್ನದಿಂದ ಹಲವಾರು ಕುರುಹು, ಸ್ಮಾರಕ, ಕಲೆ ಹಾಗೂ ಶಾಸನಗಳನ್ನು ನಿರ್ಮಿಸುವ ಜತೆಗೆ ಮುಂಬರುವ ಪೀಳಿಗೆಗೆ ನಮ್ಮ ಕಲೆ ಕುರಿತು ತಿಳಿಸಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಸಂತೋಷ ಭೋವಿ ಹೇಳಿದರು.

ನಗರದ ಬಿಎಲ್‌ಡಿಇ ಸಂಸ್ಥೆಯ ಡಾ. ಫ.ಗು. ಹಳಕಟ್ಟಿ ಸಂಶೋಧನ ಕೇಂದ್ರದಲ್ಲಿ ಇಂಟ್ಯಾಚ್ ವತಿಯಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ಚಿತ್ರಕಲಾ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ಸಾಂಸ್ಕೃತಿಕ ಪರಂಪರೆ ಮುಂದೆಯೂ ರಕ್ಷಿಸಿಕೊಂಡು ಹೋಗುವ ಮಹತ್ತರ ಜವಾಬ್ದಾರಿ ಇಂದಿನ ವಿದ್ಯಾರ್ಥಿಗಳ ಮೇಲಿದೆ ಎಂದರು.

ಮುಖ್ಯಾಧ್ಯಾಪಕ ವಿ.ಆರ್. ಹಾಲವರ, ಮುಖ್ಯಅತಿಥಿ ಅಂಬಾದಾಸ ಜೋಶಿ ಮಾತನಾಡಿದರು. ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಸ್ಪರ್ಧೆಯಲ್ಲಿ 9 ಶಾಲೆಯ 80ಕ್ಕಿಂತ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಡಾ. ವಿ.ಡಿ. ಐಹೊಳ್ಳಿ ನಿರೂಪಿಸಿ, ವಂದಿಸಿದರು.

ಶಾಲಾ ಶಿಕ್ಷಕರಾದ ಎಂ.ಜಿ. ತೆಗ್ಗಿನಮಠ, ಎಸ್.ಎಂ. ಚಿಕ್ಕಮಠ, ಎಸ್.ಬಿ. ಹಂಚನಾಳ, ಮಲ್ಲಿಕಾರ್ಜುನ ತೇಲಿ, ಜೆ.ಐ. ಇಂಗಳೇಶ್ವರ, ಜಿ.ಕೆ. ಲಮಾಣಿ, ರಾಜು ಶಹಾಪುರ, ಎಸ್.ಬಿ. ನಾಲವರ ಮತ್ತಿತರರಿದ್ದರು.