ವಿಜಯಪುರ: ನಮ್ಮ ಜೀವನದಲ್ಲಿನ ಎಲ್ಲಾ ಕಷ್ಟ ಕಾರ್ಪಣ್ಯ ನಿವಾರಣೆಗೆ ವಿಘ್ನ ವಿನಾಶಕ ಗಣೇಶನ ಆಶೀರ್ವಾದ ಬೇಕು ಎಂದು ಧರ್ಮದರ್ಶಿ ಜಿ. ಶಂಕರ ಹೇಳಿದರು.
ನಗರದ ಗ್ಯಾನಿ ಪ್ಲಾಟ್‌ನ ಗಣಪತಿ ದೇವಸ್ಥಾನ ರಜತ ಮಹೋತ್ಸವದ ಅಂಗವಾಗಿ ಮಂಗಳವಾರ ಸಂಜೆ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕೆಳ ಹಂತದಲ್ಲಿದ್ದ ನನ್ನ ಜೀವನ ಇಷ್ಟು ಎತ್ತರಕ್ಕೆ ಬರಲು ವ್ನಿೇಶ್ವರನ ಆರ್ಶಿರ್ವಾದವೇ ಕಾರಣ ಎಂದರು.
ಹಿಂದು ಸಂಪ್ರದಾಯದಲ್ಲಿ ಯಾವುದೇ ಕೆಲಸ ಕಾರ್ಯ ಪ್ರಾರಂಭಕ್ಕೆ ಮುನ್ನ ವ್ನಿೇಶ್ವರನಿಗೆ ಪೂಜೆ ಸಲ್ಲಿಸಲಾಗುತ್ತದೆ. ಅಂತಹ ಕಾರ್ಯಗಳಿಗೆ ಯಾವುದೇ ಅಡೆತಡೆ ಇಲ್ಲಿದೆ ಸುಸೂತ್ರವಾಗಿ ಮುಕ್ತಾಯಗೊಳ್ಳುತ್ತವೆ ಎಂಬ ಪ್ರತೀತಿಯೂ ಇದೆ. ಇಂತಹ ಸಂಪ್ರದಾಯವನ್ನು ಮುಂದಿನ ದಿನಗಳಲ್ಲಿಯೂ ಯುವ ಸಮೂಹ ಪಾಲಿಸಬೇಕು. ರಜತ ಮಹೋತ್ಸವದಲ್ಲಿ ಪ್ರಸನ್ನ ಗಣಪತಿ ದೇವರ ದರ್ಶನ ಪಡೆದು ಪುನೀತರಾಗಬೇಕೆಂದು ಸಲಹೆ ನೀಡಿದರು.
ಡಿಎಸ್‌ಪಿ ಬಸವರಾಜ ಯಲಿಗಾರ ಮಾತನಾಡಿ, ಯುವಜನತೆ ನಮ್ಮ ಸಾಹಿತ್ಯ, ಸಂಸ್ಕೃತಿ, ನೆಲ, ಜಲ, ಭಾಷೆ, ಪೂಜೆ, ಪುನಸ್ಕಾರಗಳನ್ನು ಕಾಪಾಡಿಕೊಂಡು ಹೋಗಬೇಕು. ನಾವು ಸಂಪಾದಿಸಿದ ಸ್ವಲ್ಪ ಪ್ರಮಾಣದ ಹಣವನ್ನು ದಾನ ನೀಡಿದಾಗಲೇ ಪುಣ್ಯ ಪ್ರಾಪ್ತಿ ಆಗಲಿದೆ. ಧರ್ಮದರ್ಶಿ ಜಿ. ಶಂಕರ ಅವರು ಧಾರ್ಮಿಕ ಕಾರ್ಯಗಳ ಸೇವೆಯ ಜತೆಗೆ ಸಮಾಜಕ್ಕೆ ತಮ್ಮದೇ ಆದ ಕಾಣಿಕೆ ನೀಡಿದ ಮಹಾನ ವ್ಯಕ್ತಿ ಎಂದು ತಿಳಿಸಿದರು.
ಶಾಲಿನಿ ಶಂಕರ, ಸುಕನ್ಯಾ ದಯಾನಂದ, ವಿಶ್ವನಾಥ ಬಿರಾದಾರ, ಸುನೀತಾ ಬಿರಾದಾರ, ಸುರೇಶ ಕುಂಬಾರ, ಶರಣು ಸಬರದ, ಜಗದೀಶ ಕಂಬಿ, ಆನಂದ ಬಂದರವಾಡ, ಉದಯ ಉಡುಪಿ, ಅರವಿಂದ ಕುಲಕರ್ಣಿ, ವೆಂಕಣ್ಣ ಸುಲಗದ, ಸುನೀಲ ಅಂಗಡಿ, ಜ್ಞಾನೇಶ್ವರ ಕುಲಕರ್ಣಿ, ಸಿದ್ದಣ್ಣ ಸಿಂದಿಗೇರಿ, ಚಿದಾನಂದ ಕುಂಬಾರ ಮತ್ತಿತರರಿದ್ದರು.
ದೇವಸ್ಥಾನದಲ್ಲಿ ಇಂದು: ಬ್ರಹ್ಮ ಕಲಶಾಭಿಷೇಕ ಮತ್ತು ಮಹಾ ಅನ್ನಸಂತರ್ಪಣೆ ಅಂಗವಾಗಿ ಬೆಳಗ್ಗೆ 7.30ಕ್ಕೆ ಗುರುಗಣಪತಿ ಪೂಜೆ, 108 ಕಾಯಿ ಮಹಾಗಣಪತಿ ಹೋಮ, ಪರಿಕಲಶ ಸಹಿತ ಬ್ರಹ್ಮಕಲಶಾಭಿಷೇಕ, ಮಧ್ಯಾಹ್ನ 12ಕ್ಕೆ ಮಹಾ ಮಂಗಳಾರತಿ ನಂತರ ಭಕ್ತರಿಗೆ ತೀರ್ಥ ಪ್ರಸಾದ ವಿತರಣೆ ನಡೆಯಲಿದೆ. ಸಂಜೆ 6 ಕ್ಕೆ ಸರಿಗಮಪ ತಂಡದ ರವೀಂದ್ರ ಸೊರಗಾಂವಿ, ಶ್ವೇತಾ ಪ್ರಭು, ಪೃಥ್ವಿ ಭಟ್ ಹಾಗೂ ಜ್ಞಾನೇಶ್ ಅವರಿಂದ ಸುಗಮ ಸಂಗೀತ ಮತ್ತು ಭಕ್ತಿ ಗೀತೆಗಳ ಕಾರ್ಯಕ್ರಮ ಜರುಗಲಿದೆ.