ಲೋಕಾಪುರ ನೇತಾಜಿ ಸುಭಾಷಚಂದ್ರ ಬೋಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮದಿಂದ ಆಚರಿಸಲಾಯಿತು. ಮಕ್ಕಳ ವೇಷಭೂಷಣಗಳು ಎಲ್ಲರ ಗಮನಸೆಳೆದವು. ಈ ವೇಳೆ ಸಂಸ್ಥೆಯ ಅಧ್ಯಕ್ಷ ಡಾ. ಬಸವರಾಜ ಹಿರೇಮಠ, ಮಹಾಂತೇಶ ಹಿರೇಮಠ, ವೆಂಕಟರಾವ ದೇಸಾಯಿ, ಎಸ್.ಎಸ್.ಕುಲಕರ್ಣಿ, ಅಕ್ಷತಾ ದಾವಾಂಡಿ ಇನ್ನಿತರರು ಇದ್ದರು. 
ಜಿಲ್ಲೆ

ಸಂಸ್ಕೃತಿ ಉಳಿಸಿ ಬೆಳೆಸಿ

ದತ್ತಾತ್ರೇಯ ಪಿ ಕುಲಕರ್ಣಿ

ಲೋಕಾಪುರ: ಶ್ರೀಕೃಷ್ಣ ಹಾಗೂ ಮಹಾ ಪುರುಷರ ಜಯಂತಿಗಳ ಆಚರಣೆಯಿಂದ ಮಕ್ಕಳಿಗೆ ಭಾರತೀಯ ಶ್ರೇಷ್ಠ ಸಂಸ್ಕೃತಿಯನ್ನು ಅರಿಯಲು ಸಾಧ್ಯವಾಗುತ್ತದೆ, ಸುಸಂಸ್ಕೃತ ಪ್ರಜೆಯಾಗಿ ರೂಪುಗೊಳ್ಳು ಸಹ ನೆರವಾಗುತ್ತದೆ ಎಂದು ಡಾ. ಬಸವರಾಜ ಹಿರೇಮಠ ಹೇಳಿದರು.

ಪಟ್ಟಣದ ನೇತಾಜಿ ಸುಭಾಷಚಂದ್ರ ಬೋಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ಶ್ರೀಕೃಷ್ಣ ಸತ್ಯ ಹಾಗೂ ಧರ್ಮದ ರಕ್ಷಕನಾಗಿದ್ದಾನೆ. ಹೀಗಾಗಿ ಪ್ರತಿಯೊಬ್ಬರು ಶ್ರೀಕೃಷ್ಣ ತತ್ವಗಳನ್ನು ಪಾಲಿಸಬೇಕು ಎಂದರು.

ಸಂಸ್ಥೆಯ ಮಾರ್ಗದರ್ಶಕ ಎಸ್.ಎನ್.ಹಿರೇಮಠ ಮಾತನಾಡಿ, ಶಾಲೆಯಲ್ಲಿ ಮಕ್ಕಳಿಗೆ ಭಾರತೀಯ ಸಂಸ್ಕೃತಿ ಆಧಾರತಿ ಶಿಕ್ಷಣ ಕೊಡಲಾಗುತ್ತಿದೆ, ನೈತಿಕತೆ ಹಾಗೂ ಮಾನವೀಯ ಮೌಲ್ಯಗಳನ್ನು ಹೇಳಿಕೊಡಲಾಗುತ್ತಿದೆ. ಮಕ್ಕಳನ್ನು ಆದರ್ಶ ಪ್ರಜೆಗಳನ್ನಾಗಿ ರೂಪಿಸಲು ಸರ್ವ ಪ್ರಯತ್ನ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಮುದ್ದು ಮಕ್ಕಳು ರಾಧೆ ಕೃಷ್ಣ ವೇಷವನ್ನು ತೊಟ್ಟು ಎಲ್ಲರ ಗಮನ ಸೆಳೆದರು. ಸಂಸ್ಥೆಯ ಕಾರ್ಯದರ್ಶಿ ಮಹಾಂತೇಶ ಹಿರೇಮಠ, ವೆಂಕಟರಾವ ದೇಸಾಯಿ, ಮಾರುತಿ ಭೋವಿ, ಎಸ್.ಎಸ್.ಕುಲಕರ್ಣಿ, ಅಕ್ಷತಾ ದಾವಾಂಡಿ, ಮುಖ್ಯ ಗುರು ಆರ್.ಜಿ.ಪಾಟೀಲ ಇದ್ದರು.