ಜಿಲ್ಲೆ

ಡಾ.ಗಣೇಶ್ ಕುಮಾರ್ ಅವರ ‘ಷಷ್ಠಬ್ದಿ ಸಂಭ್ರಮ’ ಅಂಗವಾಗಿ ವಿವೇಕ ರತ್ನ ಸದ್ಭಾವನಾ ಪ್ರಶಸ್ತಿ ಪ್ರದಾನ

ಮೈಸೂರು: ಮೈಸೂರು ವಿವೇಕಾನಂದ ಯೋಗ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ವತಿಯಿಂದ ಯೋಗ ಗುರು ಡಾ.ಗಣೇಶ್ ಕುಮಾರ್ ಅವರ ‘ಷಷ್ಠಬ್ದಿ ಸಂಭ್ರಮ’ ಅಂಗವಾಗಿ ಫೆ.22 ರಂದು ಸಂಜೆ 5.30ಕ್ಕೆ ವಿಜಯನಗರ 2ನೇ ಹಂತದ ವಿವೇಕ ಯೋಗ ಮಂದಿರದಲ್ಲಿ ‘ವಿವೇಕ ರತ್ನ ಸದ್ಭಾವನಾ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಆಯೋಜಿಸಲಾಗಿದೆ.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಗೈದ ಪಿ.ವಿ.ಸಂಗೀತಾ, ಎಸ್.ಮಂಜುನಾಥ್(ಶಿಕ್ಷಣ ಕ್ಷೇತ್ರ), ಎಂ.ಎನ್.ಮೋಹನ್, ತಿರುಮಲೇ ಯೋಗ ಪ್ರಕಾಶ, ಅನಂತ್, ಕೆ.ಎನ್.ಸುರೇಶ್, ಕೆ.ಚಂದ್ರು(ಯೋಗ ಮತ್ತು ಸಮಾಜ ಸೇವೆ), ಗೀತಾರಾವ್, ಎಚ್.ಸತೀಶ್, ಕೆ.ಎಸ್.ಶ್ವೇತಾ ಹಾಗೂ ಕವೀಶ್(ಯೋಗ ಶಿಕ್ಷಣ) ಅವರಿಗೆ ‘ವಿವೇಕ ರತ್ನ ಸದ್ಭಾವನಾ’ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಸಂಶೋಧನಾ ಸಂಸ್ಥೆ ಗೌರವಾಧ್ಯಕ್ಷರು ಆದ ವಿಧಾನ ಪರಿಷತ್‌ನ ಮಾಜಿ ಸದಸ್ಯ ಸಿದ್ದರಾಜು ಅಧ್ಯಕ್ಷತೆ ವಹಿಸಲಿದ್ದಾರೆ. ಜಿಎಸ್‌ಎಸ್ ಮತ್ತು ವೈಎಫ್‌ಎಂ ಅಧ್ಯಕ್ಷ ಶ್ರೀಹರಿ, ವೈಎಫ್‌ಎಂ ಉಪಾಧ್ಯಕ್ಷ ಶಶಿಕುಮಾರ್, ಸರ್ಕಾರಿ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಆರ್‌ಎಂಒ ಡಾ.ಎಚ್.ಎ.ಶಶಿರೇಖಾ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.