ಜಿಲ್ಲೆ

‘ಕನಕಶ್ರೀ’ ಪ್ರಶಸ್ತಿ ಪ್ರದಾನ

reportermys


ಮೈಸೂರು: ಕನ್ನಡ ಸಾಹಿತ್ಯ ಕಲಾಕೂಟ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ವತಿಯಿಂದ ಸಂತ ಶ್ರೀ ಕನಕದಾಸರ ಜಯಂತಿ ಹಾಗೂ ‘ಕನಕಶ್ರೀ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.


ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಬಿ.ವಿ.ಶ್ರೀನಿವಾಸ ಗುಪ್ತ, ಡಾ.ಬಿ.ದಿನೇಶ್, ಸುತ್ತೂರು ಎಸ್.ಮಾಲಿನಿ, ಡಾ.ಕಾ.ರಾಮೇಶ್ವರಪ್ಪ ಹಾಗೂ ಎಂ.ಪ್ರದೀಪ್‌ಕುಮಾರ್ ಅವರಿಗೆ ‘ಕನಕಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಯಿತು.


ವಿಧಾನಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಮಾತನಾಡಿದರು. ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು, ಸಂಸ್ಕೃತಿ ಚಿಂತಕ ಕೆ.ರಘುರಾಂ ವಾಜಪೇಯಿ, ಡಾ.ಉಮೇಶ್, ಎ.ಟಿ.ನಾಗೇಶ್ ಇದ್ದರು.