ಜಿಲ್ಲೆ

5 ಸಾವಿರ ನಿವೇಶನ ಹಂಚಿಕೆ ಮಾಡಲು ಸಿದ್ಧತೆ : ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಮಾಹಿತಿ

Tumakuru

ಪಟ್ಟನಾಯಕನಹಳ್ಳಿ : ಕಣ್ಣುಗಳು ಮನುಷ್ಯನ ಜೀವನವನ್ನು ಬೆಳಕಿನತ್ತ ಮುನ್ನಡೆಸುವ ಮಹತ್ವದ ಕಾರ್ಯ ಮಾಡುತ್ತವೆ, ವೃದ್ಧಾಪ್ಯದಲ್ಲಿ ಕಣ್ಣುಗಳಿಗೆ ಪೊರೆ ಬಂದರೆ ಬದುಕಿಗೆ ಕತ್ತಲೆ ಕವಿದಂತಾಗುತ್ತದೆ. ನೇತ್ರ ಚಿಕಿತ್ಸಾ ಶಿಬಿರಗಳು ಬಡವರಿಗೆ ಆಸರೆಯಾಗಲಿವೆ ಎಂದು ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಹೇಳಿದರು.

ಶಿರಾ ತಾಲೂಕು ಹುಲಿಕುಂಟೆ ಹೋಬಳಿಯ ಯಾದಲಡಕು ಗ್ರಾಮದಲ್ಲಿ ಬೆಳಕು ಸಂಸ್ಥೆ ಹಾಗೂ ಗ್ರಾಮಸ್ಥರ ಸಹಯೋಗದೊಂದಿಗೆ ಶನಿವಾರ ಆಯೋಜಿಸಿದ್ದ ಉಚಿತ ನೇತ್ರ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಪ್ರದೇಶದ ಬಡವರಿಗೆ 5 ಸಾವಿರ ನಿವೇಶನ ಹಂಚಿಕೆ ಮಾಡಲು ಸಿದ್ಧತೆ ಮಾಡಿ ಕೊಳ್ಳಲಾಗಿದ್ದು, ಆಯಾ ಗ್ರಾಮ ಪಂಚಾಯತಿ ಮಟ್ಟದಲ್ಲಿ ಲೇಜೌಟ್‌ಗಳ ನಿರ್ಮಾಣ ಕಾರ್ಯ ನಡೆದಿದೆ. ಗ್ರಾಮ ಸಭೆಗಳ ಮೂಲಕ ಆರ್ಹ ಫಲಾನುಭವಿಗಳನ್ನು ಪಾರದರ್ಶಕವಾಗಿ ಆಯ್ಕೆ ಮಾಡಿ ಹಕ್ಕು ಪತ್ರ ನೀಡಲಾಗುವುದು. ಶಿರಾ ನಗರ ಸಭೆ ವ್ಯಾಪ್ತಿಯ ಬಡವರಿಗೂ ನಿವೇಶನ ನೀಡುವ ಗುರಿಯಿದ್ದು, ಆರ್ಹ ಫಲಾನಿಭವಿಗಳಿಗೆ ಆರ್ಜಿ ಸಲ್ಲಿಸಲು ಅ.6ರವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದರು.

ಬಡ ಕುಟುಂಬಕ್ಕೆ ಶಾಸಕ ನೆರವು : ಯಾದಲಡಕು ಗ್ರಾಮದಲ್ಲಿ ಭಾರತಿ ಎಂಬುವವರ ಕುಟುಂಬದ ಬಗ್ಗೆ ಮರುಕು ವ್ಯಕ್ತಪಡಿಸಿದ ಶಾಸಕ ರಾಜೇಶ್‌ಗೌಡ, ಭಾರತಿ ಅವರ ಪತಿ ಪಾರ್ಶ್ವವಾಯು ಪೀಡಿತರಾಗಿದ್ದು, ಪುತ್ರ ಗೋವಧನ ಕೂಡಾ ಇತ್ತಿಚೆಗೆ ಕುರಿಗಳ ಮೈತೊಳೆಯಲು ಹೋಗಿ ಸಾವನಪ್ಪಿದ್ದಾನೆ. ಹೀಗಾಗಿ ಅವರ ಮಕ್ಕಳಾದ ಬಿಕಾಂ ವ್ಯಾಸಂಗ ಮಾಡುತ್ತಿರುವ ಲಾವಣ್ಯಾ ಮತ್ತು ಪಿಯು ವ್ಯಾಸಂಗ ಮಾಡುತ್ತಿರುವ ವೈಶಾಲಿ ಅವರ ಶಿಕ್ಷಣದ ವೆಚ್ಚ ಭರಿಸುವುದಾಗಿ ಶಾಸಕರು ಭರವಸೆ ನೀಡಿದರು. ಯಾದಲಡಕು ಗ್ರಾಮದಿಂದ ಬರಗೂರಿಗೆ ಕಾಲೇಜಿಗೆ ಹೋಗಿ ಬರಲು 2 ಸೈಕಲ್‌ಗಳನ್ನು ಶಾಸಕರು ನೀಡಿದರು.

ಕಣ್ಣಿನ ತಜ್ಞ ಡಾ.ಅರವಿಂದ್ಮೊ, ಮುಖಂಡರಾದ ಕಾರ್ತಿವೀರ್, ಚಿದಾನಂದ್, ಮುಖ್ಯಶಿಕ್ಷಕರ ರಮೇಶ್, ಭೀಮಣ್ಣ, ವೈ.ಕೆ.ಜಯರಾಮಯ್ಯ, ಎ.ಆರ್.ಶ್ರೀನಿವಾಸಯ್ಯ, ಚಂದ್ರಪ್ಪ, ನಾಗರಾಜು, ಗುಜ್ಜಾರಪ್ಪ, ರಂಗಧಾಮ, ದೇವರಾಜು, ಶ್ರೀರಂಗಯ್ಯ ಇದ್ದರು.