ಜಿಲ್ಲೆ

ಮುಂಗಾರು ಅಧಿವೇಶನಕ್ಕೆ ಸಕಲ ಸಿದ್ಧತೆ: 13ರಿಂದ 24ರವರೆಗೆ ನಿಗದಿ

ರಮೇಶ್​ ಕುಮಾರ್​​ ಬಿ ಎಡಮೋಳೆ

ಬೆಂಗಳೂರು: ವಿಧಾನಮಂಡಲದ ಮುಂಗಾರು ಅಧಿವೇಶನಕ್ಕೆ ವೇದಿಕೆ ಸಜ್ಜಾಗಿದ್ದು, ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೊದಲ ಬಾರಿಗೆ ಅಧಿವೇಶನ ಎದುರಿಸಲಿದ್ದಾರೆ. ಕರೊನಾ ಕರಿಛಾಯೆ ಮಧ್ಯೆ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪ್ರಮಾಣಿತ ಕಾರ್ಯಾಚರಣೆ ವಿಧಾನ (ಎಸ್​ಒಪಿ) ಪಾಲನೆ ಕಡ್ಡಾಯಗೊಳಿಸಲಾಗಿದೆ. ಎರಡು ವರ್ಷಗಳ ಬಳಿಕ ಅಧಿವೇಶನದ ಕಲಾಪ ವೀಕ್ಷಿಸಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ.

ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಬುಧವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ವಿಧಾನಸಭಾಧ್ಯಕ್ಷರು ಸಿದ್ಧತೆ ಹಾಗೂ ಕಾಯರ್å-ಕಲಾಪಗಳ ಮಾಹಿತಿ ನೀಡಿದರು. ಸೆ.13ರಿಂದ 24ರವರೆಗೆ 10 ದಿನಗಳ ಕಾಲ ಅಧಿವೇಶನ ನಡೆಯಲಿದೆ. 18 ವಿಧೇಯಕಗಳು ಮಂಡನೆಯಾಗಲಿದ್ದು, ಬಾಕಿಯಿರುವ ನಾಲ್ಕು ಮಸೂದೆಗಳ ಪ್ರತಿ ಒದಗಿಸಲು ಕಾರ್ಯದರ್ಶಿಗೆ ಸೂಚಿಸಲಾಗಿದೆ.

ಸದನದ ಘನತೆ-ಗಾಂಭೀರ್ಯ, ಮೌಲ್ಯ, ಪಾವಿತ್ರ್ಯತೆ ಹಾಗೂ ಉತ್ತರದಾಯಿತ್ವ ಎತ್ತಿ ಹಿಡಿಯಲೆಂದು ಪ್ರಾರಂಭಿಸಿರುವ ಸಂಸದೀಯ ಮೌಲ್ಯಗಳ ಕುರಿತ ಚರ್ಚೆಯನ್ನು ಈ ಅಧಿವೇಶನದಲ್ಲೂ ಮುಂದುವರಿಸುವ ಇರಾದೆಯಿದೆ. ಅಧಿವೇಶನದ ಕೊನೆಯ ದಿನ (ಸೆ.24) ಮಧ್ಯಾಹ್ನದ ಭೋಜನ ವಿರಾಮದ ಬಳಿಕ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ‘ಸಂಸದೀಯ ಮೌಲ್ಯ’ಗಳ ಕುರಿತು ಭಾಷಣ ಮಾಡಲಿದ್ದಾರೆ. ಮುಖ್ಯಮಂತ್ರಿ ಬಳಿ ಈ ವಿಷಯ ಪ್ರಸ್ತಾಪಿಸಿ, ಜಂಟಿ ಅಧಿವೇಶನಕ್ಕೆ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿರುವೆ. ಅಲ್ಲದೆ, ಸೆ.13ರಂದು ಕಲಾಪ ಸಲಹಾ ಸಮಿತಿ ಸಭೆಯಲ್ಲೂ ರ್ಚಚಿಸುವೆ ಎಂದು ಸ್ಪೀಕರ್ ಹೇಳಿದರು.

ಅತ್ಯುತ್ತಮ ಶಾಸಕರಿಗೆ ಪ್ರಶಸ್ತಿ: ಈಗಾಗಲೆ ತೀರ್ವನಿಸಿದಂತೆ ಅಧಿವೇಶನದ ಕೊನೇ ದಿನ ಒಬ್ಬರಿಗೆ ಅತ್ಯುತ್ತಮ ಶಾಸಕ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಇದಕ್ಕಾಗಿ ಮುಖ್ಯಮಂತ್ರಿ, ಪ್ರತಿಪಕ್ಷದವರನ್ನು ಒಳಗೊಂಡ ಸಮಿತಿ ರಚಿಸಲಾಗಿದ್ದು, ಇನ್ನು ಮುಂದೆ ಪ್ರತಿ ವರ್ಷ ಒಬ್ಬ ಶಾಸಕರಿಗೆ ಈ ಪ್ರಶಸ್ತಿ ಕೊಡಮಾಡಲಾಗುತ್ತದೆ. ನಿಯಮಾವಳಿಗೆ ತಿದ್ದುಪಡಿ ತಂದು, ವಿಧಾನಸಭೆಯಲ್ಲಿ ನೀತಿ-ನಿರೂಪಣಾ ಸಮಿತಿ ರಚನೆಗೆ ಅಗತ್ಯ ತಯಾರಿ ಮಾಡಿಕೊಂಡಿದ್ದು, ಕಾನ್ಸಿ್ಟಟ್ಯೂಷನ್ ಕ್ಲಬ್ ರಚನೆ ಪ್ರಯತ್ನಿಸಲಾಗಿದೆ ಎಂದರು.

ಕಡ್ಡಾಯ ಹಾಜರಿಗೆ ವಿನಂತಿ

ಬಜೆಟ್ ಅಧಿವೇಶನದ ಆರು ತಿಂಗಳು ಬಳಿಕ ವಿಧಾನಮಂಡಲ ಅಧಿವೇಶನ ಸೇರುತ್ತಿದ್ದು, ಸದನ ಗಂಭೀರವಾಗಿ ಪರಿಗಣಿಸುವಂತೆ ಮುಖ್ಯಮಂತ್ರಿ, ವಿಪಕ್ಷಗಳ ನಾಯಕರು, ಎಲ್ಲ ಸದಸ್ಯರಿಗೆ ತಿಳಿಸಿ, ಕಡ್ಡಾಯವಾಗಿ ಹಾಜರಾಗುವಂತೆ ವಿನಂತಿಸಲಾಗಿದೆ. ಯಾವುದೋ ನೆಪವೊಡ್ಡಿ ಗೈರಾಗದಂತೆ ಮಂತ್ರಿಗಳಿಗೆ ಕೇಳಿಕೊಳ್ಳಲಾಗಿದೆ ಎಂದು ಸ್ಪೀಕರ್ ತಿಳಿಸಿದರು.

13ಕ್ಕೆ ಬಿಜೆಪಿ ಶಾಸಕಾಂಗ ಸಭೆ

ವಿಧಾನಮಂಡಲದ ಮುಂಗಾರು ಅಧಿವೇಶನ ಆರಂ ಭದ ದಿನವೇ (ಸೆ.13) ಸಂಜೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಫಿಕ್ಸ್ ಆಗಿದ್ದು, ಪಕ್ಷದ ಶಾಸಕರು ಬಹುದಿನಗಳ ಬೇಡಿಕೆ ಈಡೇರುವ ನಿರೀಕ್ಷೆಯಿದೆ. ಬಸವರಾಜ ಬೊಮ್ಮಾಯಿ ನಾಯಕತ್ವ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಸಭೆ ನಡೆಯುತ್ತಿದ್ದು, ಅಧಿವೇಶನದಲ್ಲಿ ಪ್ರತಿಪಕ್ಷಗಳನ್ನು ಎದುರಿಸುವ ಕಾರ್ಯತಂತ್ರ ಪ್ರಧಾನ ಕಾರ್ಯಸೂಚಿ ಯಾಗಿರಲಿದೆ. ಇದೇ ಅವಕಾಶ ಬಳಸಿಕೊಂಡು ಅನೇಕ ಶಾಸಕರು ಕ್ಷೇತ್ರಾವಾರು ಅನುದಾನ ಹಂಚಿಕೆ, ಅನುದಾನಕ್ಕೆ ಪ್ರಸ್ತಾವಿತ ಯೋಜನೆ, ಕಾರ್ಯಕ್ರಮಗಳು ಹಾಗೂ ಸಚಿವರ ಕಾರ್ಯವೈಖರಿ ಬಗ್ಗೆ ರ್ಚಚಿಸುವ ಸಾಧ್ಯತೆಗಳಿವೆ.

ಮಂಡನೆ/ಅಂಗೀಕಾರಕ್ಕೆ ಸ್ವೀಕರಿಸಿದ ವಿಧೇಯಕಗಳು

  • ಬೆಂಗಳೂರು ನೀರು ಸರಬರಾಜು ಮತ್ತು ಗ್ರಾಮಸಾರ ಚರಂಡಿ ವ್ಯವಸ್ಥೆ
  • ಕರ್ನಾಟಕ ಕಳ್ಳಭಟ್ಟಿ ವ್ಯಾಪಾರಿಗಳ, ಮಾದಕವಸ್ತು ಅಪರಾಧಿಗಳ, ಜೂಜುಕೋರರ, ಗೂಂಡಾಗಳ, ಅನೈತಿಕ ವ್ಯವಹಾರ ಅಪರಾಧಿಗಳ, ಕೊಳಚೆ ಪ್ರದೇಶವನ್ನು ಕಬಳಿಸುವವರ ಹಾಗೂ ದೃಶ್ಯ ಅಥವಾ ಧ್ವನಿ ಕಳ್ಳಮುದ್ರಕರ ಅಪಾಯಕಾರಿ ಚಟುವಟಿಕೆಗಳ ಪ್ರತಿಬಂಧಕ (ತಿದ್ದುಪಡಿ)
  • ಬಂದಿಗಳ ಗುರುತಿಸುವಿಕೆ (ಕರ್ನಾಟಕ ತಿದ್ದುಪಡಿ)
  • ದಂಡ ಪ್ರಕ್ರಿಯಾ ಸಂಹಿತೆ (ಕರ್ನಾಟಕ ತಿದ್ದುಪಡಿ)
  • ಕರ್ನಾಟಕ ಬಂದೀಖಾನೆ ಅಭಿವೃದ್ಧಿ ಮಂಡಳಿ
  • ಕರ್ನಾಟಕ ಕೃಷಿ ಸಂಬಂಧಿ ಕೀಟಗಳು ಮತ್ತು ರೋಗಗಳ (ತಿದ್ದುಪಡಿ)
  • ಕರ್ನಾಟಕ ಸ್ಟಾಂಪು (ತಿದ್ದುಪಡಿ)
  • ಕರ್ನಾಟಕ ಖಾದಿ ಮತ್ತು ಗ್ರಾಮೋದ್ಯೋಗಗಳ (ತಿದ್ದುಪಡಿ)
  • ಕರ್ನಾಟಕ ಪೌರಸಭೆಗಳು ಮತ್ತು ಕೆಲವು ಇತರ ಕಾನೂನು (ಎರಡನೇ ತಿದ್ದುಪಡಿ)
  • ಕರ್ನಾಟಕ ಸ್ಥಳೀಯ ನಿಧಿ ಪ್ರಾಧಿಕಾರಗಳ ಆರ್ಥಿಕ ಹೊಣೆಗಾರಿಕೆ (ತಿದ್ದುಪಡಿ)

ಅಂಗೀಕಾರಕ್ಕೆ ಬಾಕಿಯಿರುವ ಮಸೂದೆ

  • ಕರ್ನಾಟಕ ಅನುಸೂಚಿತ ಜಾತಿಗಳು, ಅನುಸೂಚಿತ ಬುಡಕಟ್ಟುಗಳು ಮತ್ತು ಇತರ ಹಿಂದುಳಿದ ವರ್ಗಗಳ (ನೇಮಕ ಮುಂತಾದವುಗಳ ಮೀಸಲು) (ತಿದ್ದುಪಡಿ)
  • ಕರ್ನಾಟಕ ಲೋಕಾಯುಕ್ತ (ಮೂರನೇ ತಿದ್ದುಪಡಿ)
  • ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ)
  • ಕರ್ನಾಟಕ ಸಹಕಾರ ಸಂಘಗಳ (ತಿದ್ದುಪಡಿ)

ಗೊಂದಲ ನಿಜ

ಸದನದ ಸಮಿತಿಗಳ ಸಭೆಗಳಿಗೆ ಅಧಿಕಾರಿಗಳಿಂದ ಸಕಾಲಕ್ಕೆ, ಪೂರ್ಣಪ್ರಮಾಣದ ಉತ್ತರ ನೀಡುವಲ್ಲಿ ಗೊಂದಲಗಳಿರುವುದು ನಿಜ. ಸಮಿತಿಗಳ ಅಧ್ಯಕ್ಷರ ಜತೆಗೆ ರ್ಚಚಿಸಿ ಶೀಘ್ರವೇ ಈ ಸಮಸ್ಯೆ ಇತ್ಯರ್ಥಪಡಿಸಲಾಗುವುದು. ಸಮಿತಿಗಳಿಗೆ ಯಾವುದೇ ಅಧಿಕಾರಿಗಳು ತಪು್ಪ, ಅರೆಬರೆ ಮಾಹಿತಿ ನೀಡಬಾರದು. ಹಾಗೊಂದು ವೇಳೆ ನೀಡಿದ್ದರೆ ಅದು ಖಂಡಿತ ತಪು್ಪ ಎಂದು ಸ್ಪೀಕರ್ ಸ್ಪಷ್ಟಪಡಿಸಿದರು.

ಅಂತರ್ಜಾಲ ತಾಣದಲ್ಲಿ ಲಭ್ಯ

ವಿಧಾನಸಭೆ ಸಚಿವಾಲಯ ಶ್ರಮವಹಿಸಿ ಅಂತರ್ಜಾಲ ತಾಣ ವನ್ನು ಸೃಜಿಸಿದ್ದು, ಅಧಿವೇಶನದಲ್ಲಿ ಕೇಳಲಾದ ಚುಕ್ಕೆ ಗುರುತಿನ ಮತ್ತು ಇತರ ಪ್ರಶ್ನೋತ್ತರಗಳನ್ನು ಈ ವೆಬ್​ಸೈಟ್ (http://kla.kar.nic.in/)ನಲ್ಲಿ ಅಪ್​ಲೋಡ್ ಮಾಡಲಾಗುವುದು. ಸಾರ್ವಜನಿಕರು ಕೂಡ ಈ ಸೇವೆ ಪಡೆಯುವ ಅವಕಾಶವನ್ನು ಕಲ್ಪಿಸಲಾಗುತ್ತದೆ. ಸದಸ್ಯರುವಾರು, ದಿನಾಂಕ, ಇಲಾಖೆ, ವಿಷಯವಾರು ಪ್ರಶ್ನೋತ್ತರಗಳನ್ನು ವೀಕ್ಷಿಸಬಹುದಾಗಿದೆ.

ಕಳೆದ ಅಧಿವೇಶನದ ನಂತರ ಹೊರಡಿಸಿದ ಅಧ್ಯಾದೇಶಗಳು

  • ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) (ತಿದ್ದುಪಡಿ)
  • ಕರ್ನಾಟಕ ಸಾದಿಲ್ವಾರು ನಿಧಿ (ತಿದ್ದುಪಡಿ) ್ಝನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ (ಎರಡನೇ ತಿದ್ದುಪಡಿ)