ವಿಜಯಪುರದ ವಿ.ಭ. ದರಬಾರ ಕಾಲೇಜಿನ ಸಭಾಂಗಣದಲ್ಲಿ ವಿವಿಧ ಸ್ಪಧಾತ್ಮಕ ಪರೀೆ ಹಿನ್ನೆಲೆ ಹಮ್ಮಿಕೊಂಡ ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಮಾತನಾಡಿದರು. ಡಾ. ಸಿ.ಕೆ. ಹೊಸಮನಿ, ಎನ್​.ಎಚ್​.ನಾಗೂರ, ರಾಮಣ್ಣ ಅಥಣಿ ಮತ್ತಿತರರಿದ್ದಾರೆ. 
ಜಿಲ್ಲೆ

ಸ್ಪರ್ಧಾತ್ಮಕ ಪರೀಕ್ಷೆಗಳ ನಿರ್ವಹಣೆಗೆ ಸಿದ್ಧತೆ

ಗಿರೀಶ ಸಗರ

ವಿಜಯಪುರ: ಮುಂಬರುವ ದಿನಗಳಲ್ಲಿ ಜಿಲ್ಲೆಯಲ್ಲಿ ನಡೆಯಲಿರುವ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ಮತ್ತು ಪಿಎಸ್​ಐ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಪಾರದರ್ಶಕತೆ ನಡೆಸಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಪರೀೆಗೆ ನಿಯೋಜಿತ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ವಿ.ಭ. ದರಬಾರ ಕಾಲೇಜಿನ ಸಭಾಂಗಣದಲ್ಲಿ ಗ್ರಾಮ ಆಡಳಿತ ಅಧಿಕಾರಿ ಹುದ್ದೆ ಹಾಗೂ ಪಿಎಸ್​ಐ ಸ್ಪರ್ಧಾತ್ಮಕ ಪರೀಕ್ಷೆ ಹಿನ್ನೆಲೆ ಶುಕ್ರವಾರ ಹಮ್ಮಿಕೊಂಡ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸೆ. 29 ರಂದು ಭಾನುವಾರ ಗ್ರಾಮ ಆಡಳಿತ ಅಧಿಕಾರಿ ಪರೀೆಗಳು 12 ತಾಲೂಕುಗಳ 93 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಈ ಸ್ಪರ್ಧಾತ್ಮಕ ಪರೀೆಗೆ ಒಟ್ಟು 38,746 ಅಭ್ಯರ್ಥಿಗಳು ಹೆಸರು ನೋಂದಾಯಿಸಕೊಂಡಿದ್ದು, ಅಂದು ಬೆಳಗ್ಗೆ 10.30 ರಿಂದ 12.30 ರವರೆಗೆ ಪರೀೆ ಜರುಗಲಿದೆ ಎಂದರು.

ಪಿಎಸ್​ಐ ಪರೀೆಯು ಅಕ್ಟೋಬರ್​ 3 ರಂದು 11 ಪರೀಾ ಕೇಂದ್ರಗಳಲ್ಲಿ ನಡೆಯಲಿವೆ. ಒಟ್ಟು 4,920 ಅಭ್ಯರ್ಥಿಗಳು ಪರೀೆ ಬರೆಯಲಿದ್ದಾರೆ. ಬೆಳಗ್ಗೆ 10.30 ರಿಂದ 12 ರವರೆಗೆ ಪತ್ರಿಕೆ&1 ಹಾಗೂ ಮಧ್ಯಾಹ್ನ 12.30 ರಿಂದ ಮಧ್ಯಾಹ್ನ 2 ರವರೆಗೆ ಪತ್ರಿಕೆ&2 ರ ಪರೀೆಗಳು ನಡೆಯಲಿವೆ.

ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಯಾವುದೇ ಎಲೆಕ್ಟ್ರಾನಿಕ್​ ಡಿವೈಸ್​, ಮೈಕ್ರೋಫೋನ್​ ಸೇರಿ ಇನ್ನಿತರ ಉಪಕರಣ ಬಳಸದಿರುವ ಬಗ್ಗೆ ತಪಾಸಣೆ ನಡೆಸಬೇಕು. ಪರೀಾ ಹಿಂದಿನ ದಿನ ಸಿಸಿಟಿವಿ ಕ್ಯಾಮರಾ, ಬಾಡಿ ಕ್ಯಾಮರಾ, ಪ್ರಿಸ್ಕಿಂಗ್​, ಮುಖ ಚಹರೆ ಮತ್ತು ಜಾಮರ್​ಗಳನ್ನು ಉಪ ಪರೀಾ ಕೇಂದ್ರದ ಪರೀಾ ಕೊಠಡಿಗಳಲ್ಲಿ ಅಳವಡಿಸಿ ಪರೀಾ ದಿನ ಅವುಗಳು ಕಾರ್ಯನಿರ್ವಹಿಸುತ್ತಿರುವ ಕುರಿತು ಪರಿಶೀಲಿಸಬೇಕು. ಎಲ್ಲ ಸಿಸಿಟಿವಿ ಕ್ಯಾಮರಾಗಳ ವೀಕ್ಷಣೆಗೆ ಅನುಕೂಲವಾಗುವಂತೆ ದೃಶ್ಯಾವಳಿ ವೀಸಲು ಮಾನಿಟರ್​ ಅಳವಡಿಸಿ ವೆಬ್​ ಕಾಸ್ಟಿಂಗ್​ ಮಾಡಬೇಕು ಎಂದರು.

ಪರೀಾ ಕೊಠಡಿಗಳಲ್ಲಿ ಸಾಕಷ್ಟು ಗಾಳಿ ಬೆಳಕಿನ ವ್ಯವಸ್ಥೆ, ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಪ್ರತ್ಯೇಕ ಶೌಚಗೃಹ ವ್ಯವಸ್ಥೆ ಸೇರಿದಂತೆ ಅಗತ್ಯ ಕ್ರಮ ವಹಿಸುವ ಜತೆಗೆ ಪರೀೆಗಳಲ್ಲಿ ಯಾವುದೇ ಲೋಪವಾಗದಂತೆ ಕರ್ತವ್ಯ ನಿರ್ವಹಿಸಬೇಕು. ಲೋಪ ಕಂಡು ಬಂದಲ್ಲಿ ತಪ್ಪಿಸ್ಥರ ವಿರುದ್ಧ ಕ್ರಿಮಿನಲ್​ ಕೇಸ್​ ಹಾಕಲಾಗುವುದು. ಯಾವುದೇ ಕಾರಣಕ್ಕೂ ತಮಗೆ ವಹಿಸಿದ ಕರ್ತವ್ಯಗಳನ್ನು ಚಾಚು ತಪ್ಪದೆ ನಿರ್ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಖಡಕ್​ ಎಚ್ಚರಿಕೆ ನೀಡಿದರು.ಪ್ರತಿ ಅಭ್ಯರ್ಥಿಯ ಮಧ್ಯೆ 2 ಮೀ. ಅಂತರವಿರಬೇಕು. ವಿಕಲಚೇತನ ಅಭ್ಯರ್ಥಿಗಳಿಗೆ ಅನುಕೂಲವಾಗಲು ವೀಲ್​ಚೇರ

ಮತ್ತು ಇಳಿಜಾರು ಸೌಲಭ್ಯ ಕಲ್ಪಿಸಬೇಕು. ಹೀಯರಿಂಗ್​ ಏಯ್ಡ್​ ಧರಿಸಿದ ಅಭ್ಯರ್ಥಿಗಳು ವೈದ್ಯಕಿಯ ದಾಖಲೆಗಳನ್ನು ಕಡ್ಡಾಯವಾಗಿ ಜರುಪಡಿಸಬೇಕು.

ಭ್ಯರ್ಥಿಗಳ ಗುರುತಿನ ಚೀಟಿ ತಪಾಸಣೆ ನಡೆಸಿ ಖಚಿತಪಡಿಸಿಕೊಳ್ಳಬೇಕು. ಮಹಿಳಾ ಅಭ್ಯರ್ಥಿಗಳಿಗೆ ಕಡ್ಡಾಯವಾಗಿ ಮಹಿಳಾ ಸಿಬ್ಬಂದಿ ತಪಾಸಣೆ ನಡೆಸುವದಲ್ಲದೇ, ಇಲೆಕ್ಟ್ರಾನಿಕ್​ ಉಪಕರಣಗಳನ್ನು ಬಳಸದೇ ಇರುವುದು ಖಚಿತ ಪಡಿಸಿಕೊಳ್ಳಬೇಕು ಎಂದು ಸೂಚಿಸಿದರು.

ಪರೀಕ್ಷೆ ಕೇಂದ್ರಗಳಲ್ಲಿ ಅಧಿಕೃತ ನೇಮಕವಾದ ಸಿಬ್ಬಂದಿಗಳು ಮಾತ್ರ ಕರ್ತವ್ಯ ನಿರ್ವಹಿಸಬೇಕು. ಅಲ್ಲದೆ, ಕಡ್ಡಾಯವಾಗಿ ಗುರುತಿನ ಚೀಟಿ ಹೊಂದಿರಬೇಕು. ಪರೀಕ್ಷೆ ದಿನ ಸರ್ಕಾರದಿಂದ ಮಾನ್ಯವಾದ ಫೋಟೊ ಗುರುತಿನ ಚೀಟಿಯನ್ನು (ಆಧಾರ್​, ಪ್ಯಾನ್​ ಕಾರ್ಡ್​, ರೇಶನ್​ ಕಾರ್ಡ್​, ಡ್ರೆವಿಂಗ್​ ಲೈಸನ್ಸ್​, ಮತದಾರರ ಗುರುತಿನ ಚೀಟಿ ಹಾಗೂ ರಾಷ್ಟ್ರೀಕೃತ ಬ್ಯಾಂಕಿನ ಪಾಸ್​ ಬುಕ್​) ತರುವುದು ಕಡ್ಡಾಯ ಎಂದರು.

ಜಿಪಂ ಯೋಜನಾ ನಿದೇಶಕ ಸಿ.ಬಿ. ದೇವರನಮಿ, ಜಿಪಂ ಮುಖ್ಯ ಲೆಕ್ಕಾಧಿಕಾರಿ ರಾಮಣ್ಣ ಅಥಣಿ, ಖಜಾನೆ ಇಲಾಖೆಯ ಉಪನಿರ್ದೇಶಕ ಹಣಮಂತ ಕಾಲತಿಪ್ಪಿ, ಡಿಡಿಪಿಯು ಡಾ. ಸಿ.ಕೆ. ಹೊಸಮನಿ, ಡಿಡಿಪಿಐ ಎನ್​.ಎಚ್​.ನಾಗೂರ, ವಿವಿಧ ತಾಲೂಕುಗಳ ತಹಸೀಲ್ದಾರರು, ಮಾರ್ಗಾಧಿಕಾರಿಗಳು, ಅಧೀಕ್ಷಕರು, ಸ್ಥಾನಿಕ ನಿರೀಕ್ಷಣಾಧಿಕಾರಿಗಳು, ೇತ್ರ ಶಿಕ್ಷಣಾಧಿಕಾರಿಗಳು, ವಿವಿಧ ಕಾಲೇಜುಗಳ ಪ್ರಾಚಾರ್ಯರು, ಪರೀಾ ಕೇಂದ್ರಗಳ ವೀಕ್ಷಕರು, ಉಪನ್ಯಾಸಕರು ಮತ್ತಿತರರಿದ್ದರು